ಹೈದರಾಬಾದ್: ಮುಂದಿನ ತಿಂಗಳು 19ನೇ ತಾರೀಖಿನಿಂದ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿರುವ ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಉಳಿದೆಲ್ಲ ತಂಡಗಳ ಪಂದ್ಯ ಪಾಕಿಸ್ತಾನದ ಮೈದಾನಗಳಲ್ಲಿ ನಡೆಯಲಿವೆ.
ಆದ್ರೆ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲೂ ಕೇವಲ 41 ದಿನಗಳ ಮಾತ್ರ ಉಳಿದರೂ ಪಾಕಿಸ್ತಾನದಲ್ಲಿ ಮೈದಾನಗಳು ಸಜ್ಜಾಗಿಲ್ಲ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಹೌದು, ಪಾಕಿಸ್ತಾನದ ಪ್ರಮುಖ ಮೈದಾನಗಳ ವಿಡಿಯೋಗಳು ವೈರಲ್ ಆಗಿದ್ದು ಅದರಲ್ಲಿ ಮೈದಾನದ ದರುಸ್ತಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ವೈರಲ್ ಆದ ವಿಡಿಯೋದಲ್ಲಿ ಲಾಹೋರ್, ರಾವಲ್ಪಿಂಡಿ, ಕರಾಚಿ ಮೈದಾನಗಳ ದುರಸ್ತಿ ಮತ್ತು ನಿರ್ಮಾಣದ ಕಾರ್ಯ ನಡೆಯುತ್ತಿರುವುದು ಕಂಡು ಬಂದಿದೆ. ಅಲ್ಲದೇ ಮೈದಾನದಲ್ಲಿನ ಹಾಸನಗಳು ಹಳೆಯದಾಗಿದ್ದು ಅವುಗಳನ್ನು ಬದಲಾಯಿಸಲಾಗಿಲ್ಲ. ಜೊತೆಗೆ ಫ್ಲೆಡ್ ಲೈಟ್ಗಳ ರಿಪೇರಿ ಕಾರ್ಯವೂ ಮುಕ್ತಾಯಗೊಂಡಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
Condition of Pakistan cricket stadiums:
— Johns (@JohnyBravo183) January 8, 2025
Less than a month left for Champions Trophy and nothing's even 50% ready.
AFG, AUS, SA & ENG will play their matches here, so good luck to their fans, players and journalists. pic.twitter.com/p6ZynuAajI
ಏತನ್ಮಧ್ಯೆ, ಕಳೆದ ವರ್ಷ ಐಸಿಸಿ ಸದಸ್ಯರ ತಂಡ ಪಾಕಿಸ್ತಾನದ ಮೈದಾನಗಳ ವೀಕ್ಷಣೆಗೆ ತೆರಳಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಇತರೇ ದೇಶಗಳ ಅಂತರಾಷ್ಟ್ರೀಯ ಮೈದಾನಗಳಿಗೆ ಹೋಲಿಕೆ ಮಾಡಿದರೇ ಪಾಕ್ ಮೈದಾನಗಳು ಹೆಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಆದರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮೊದಲೇ ಪಂದ್ಯಾವಳಿಗಳು ನಡೆಯಲಿರುವ ಮೈದಾನಗಳು ಸಜ್ಜಾಗಿರುತ್ತವೆ ಎಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣ, ಲಾಹೋರ್‌ನ ಗಡಾಫಿ ಮತ್ತು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಎಲ್ಲಾ ಮೂರು ಕ್ರೀಡಾಂಗಣಗಳಲ್ಲಿ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 12 ರೊಳಗೆ ಪಂದ್ಯಾವಳಿಗಳು ನಡೆಯಲಿರುವ ಎಲ್ಲಾ ಕ್ರೀಡಾಂಗಣಗಳನ್ನು ಐಸಿಸಿಗೆ ಹಸ್ತಾಂತರಿಸಬೇಕಿದೆ. ಕಳೆದ ವರ್ಷ ಡಿಸೆಂಬರ್ 31 ರೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿತ್ತು, ಆದರೆ ಇನ್ನು ಮುಕ್ತಾಯಗೊಂಡಿಲ್ಲ.
ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಬೇರೊಂದು ದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಈ ಹಿನ್ನೆಲೆ ಐಸಿಸಿ ತಂಡ ಕೂಡ ಮುಂಜಾಗ್ರತವಾಗಿ ಬೇರೊಂದು ಸ್ಥಳಗಳಾ ಹುಡುಕಾಟ ಕಾರ್ಯವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಆದ್ರೆ ಪಾಕ್ ಕ್ರಿಕೆಟ್ ಮಂಡಳಿ ಇದನ್ನು ತಳ್ಳಿಹಾಕಿದ್ದು ಎಲ್ಲಾ ಮೂರು ಕ್ರೀಡಾಂಗಣಗಳ ನವೀಕರಣ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದ್ದು ಫೆ.12 ರೊಳಗೆ ಐಸಿಸಿಗೆ ಹಸ್ತಾಂತರಿಸುತ್ತವೇ ಎಂದು ಹೇಳಿದೆ. ಹೆಚ್ಚಿನ ಕಾರ್ಮಿಕರು ಹಗಲಿರುಳು ಎನ್ನದೆ ನವಿಕರಣ ಕೆಲಸದಲ್ಲಿ ತೊಡಗಿದ್ದು ಪಂದ್ಯವಳಿ ವೇಳೆಗೆ ಮೈದಾನಗಳು ಸಿದ್ದವಾಗಿರುತ್ತವೆ ಎಂದು ಪಿಸಿಬಿ ಸಮಜಾಯಿಷಿ ನೀಡಿದೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಟಾಪ್ 10ರಲ್ಲಿ ಇಬ್ಬರು ಭಾರತೀಯರು, ಬೌಲರ್‌ಗಳಿಗೆ ಬುಮ್ರಾ ಬಾಸ್!