ETV Bharat / state

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಕೃತ್ಯಕ್ಕೆ ಪ್ರಚೋದನೆ ಪ್ರಕರಣ: ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ NIA - NIA CHARGESHEET

ಉಗ್ರ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಎನ್​​ಐಎ
ಎನ್​​ಐಎ (ETV Bharat)
author img

By ETV Bharat Karnataka Team

Published : Jan 10, 2025, 10:35 PM IST

ಬೆಂಗಳೂರು: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಹಾಗೂ ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸದಸ್ಯ ಟಿ.ನಾಸೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ಇತರ ಆರೋಪಿಗಳಿಗೆ ಉಗ್ರ ಸಂಚಿಗೆ ತರಬೇತಿ ನೀಡಿದ ಆರೋಪ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಟಿ.ನಾಸೀರ್ ಹಾಗೂ ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ಸೇರಿದಂತೆ 8 ಆರೋಪಿಗಳ ವಿರುದ್ಧ 2024ರ ಜನವರಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಎನ್ಐಎ, ಪ್ರಕರಣದ 9ನೇ ಆರೋಪಿಯಾಗಿ ಬಿಹಾರ ಮೂಲದ ವಿಕ್ರಂ ಕುಮಾರ್ ಆಲಿಯಾಸ್ ಛೋಟಾ ಉಸ್ಮಾನ್ ಎಂಬಾತನ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಶಂಕಿತ ಉಗ್ರನ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ಧಾರೆ.

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಅಪರಾಧ ಪ್ರಕರಣವೊಂದರಲ್ಲಿ ಟಿ.ನಾಸೀರ್ ಜೀವಾವಧಿ ಶಿಕ್ಷೆ ಅನುಭವಿಸುವಾಗ 2017ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲುವಾಸಿಯಾಗಿದ್ದ ವಿಕ್ರಂ ಕುಮಾರ್​ಗೆ ಜಿಹಾದ್ ಬಗ್ಗೆ ಬೋಧಿಸಿ ಮತಾಂಧತೆ ಬಗ್ಗೆ ಪ್ರವಚನ ನೀಡಿದ್ದ. 2023ರಲ್ಲಿ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್ ಸೇರಿ ಇತರ ಆರೋಪಿಗಳಿಗೂ ಉಗ್ರ ಸಂಚಿನ ಬಗ್ಗೆ ತರಬೇತಿ ನೀಡಿದ್ದ. ವಿಕ್ರಂ ಕುಮಾರ್ ಹಾಗೂ ಜುನೈದ್ ಅಹಮದ್ ಜಾಮೀನಿನ ಮೇರೆಗೆ ಇಬ್ಬರು ಹೊರ ಬಂದು ಪರಸ್ಪರ ಸಂಪರ್ಕ ಸಾಧಿಸಿದ್ದರು. ನಾಸೀರ್ ಅಣತಿಯಂತೆ ಇಬ್ಬರು ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ತಿಳಿಸಿದೆ.

2023ರ ಮೇ ತಿಂಗಳಲ್ಲಿ ಜುನೈದ್ ಸೂಚನೆಯಂತೆ ಹರಿಯಾಣದ ಅಂಬಲ ಗ್ರಾಮದಿಂದ ಹ್ಯಾಂಡ್ ಗ್ರೈನೆಡ್, ಮದ್ದುಗುಂಡುಗಳು ಹಾಗೂ ವಾಕಿ-ಟಾಕಿಗಳನ್ನು ಬೆಂಗಳೂರು ಮೂಲದ ಆರೋಪಿಗೆ ವಿಕ್ರಂ ಸರಬರಾಜು ಮಾಡಿದ್ದ. ಇದಕ್ಕೆ ಜುನೈದ್ ಫಂಡಿಂಗ್ ಮಾಡಿದ್ದ. ಎಲ್ಇಟಿ ಸಂಘಟನೆ ಉಗ್ರ ಕೃತ್ಯಗಳಿಗೆ ವಿಕ್ರಂ ಸಹ ಒಳಸಂಚು ರೂಪಿಸಿದ್ದ. ದೇಶದ ಐಕ್ಯತೆ, ಸೌರ್ಮಭೌಮ ಹಾಗೂ ಭದ್ರತೆಗೆ ಧಕ್ಕೆತರುವ ಗುರಿ ಎಲ್ಇಟಿ ಹೊಂದಿತ್ತು ಎಂದು ಪತ್ರಿಕಾಪ್ರಕಟಣೆಯಲ್ಲಿ ಎನ್ಐಎ ತಿಳಿಸಿದೆ.

ತಲೆಮರೆಸಿಕೊಂಡಿರುವ ಜುನೈದ್ ಸೇರಿ 2024ರ ಜನವರಿಯಲ್ಲಿ ಎಂಟು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತು. ಸದ್ಯ ತನಿಖೆ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ ಸನ್ನಿಹಿತ

ಇದನ್ನೂ ಓದಿ: ಸಂಘಟನೆ ಬಲಪಡಿಸಲು ಡಕಾಯಿತಿ ಮಾಡುತ್ತಿದ್ದ ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿದ ಎನ್ಐಎ ವಿಶೇಷ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.