ಕರ್ನಾಟಕ

karnataka

ETV Bharat / sports

ಒಂದು ಶತಕ ಸಿಡಿಸಿ ಐದು ದಾಖಲೆ ಬರೆದ ಶ್ರೀಲಂಕಾ ಬ್ಯಾಟರ್​ ಕಮಿಂದು ಮೆಂಡಿಸ್​! - Lanka Batsman Wrote Five Records - LANKA BATSMAN WROTE FIVE RECORDS

ನ್ಯೂಜಿಲೆಂಡ್​​ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಲಂಕಾ ಬ್ಯಾಟರ್​​ ಒಂದು ಶತಕ ಸಿಡಿಸಿ 5 ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ.

ಕಮಿಂದು ಮೆಂಡಿಸ್​
ಕಮಿಂದು ಮೆಂಡಿಸ್​ (AP)

By ETV Bharat Sports Team

Published : Sep 19, 2024, 12:32 PM IST

ಗಲ್ಲೆ (ನ್ಯೂಜಿಲೆಂಡ್​): ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಲಂಕಾ ಬ್ಯಾಟರ್​​ ಕಮಿಂದು ಮೆಂಡಿಸ್​ ವಿಶೇಷ ದಾಖಲೆ ಬರೆದಿದ್ದಾರೆ. ಎರಡು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಒಂದು ಶತಕ ಸಿಡಿಸಿ 5 ದಾಖಲೆಗಳನ್ನು ಬರೆದಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಲಂಕಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಕಮಿಂದು 173 ಎಸೆತಗಳಲ್ಲಿ 114ರನ್​ಳೊಂದಿಗೆ ಶತಕ ಪೂರೈಸಿದರು.

ಇದಕ್ಕೂ ಮೊದಲು ಲಂಕಾ 29 ಓವರ್​ಗಳಲ್ಲಿ 89 ರನ್​ಗಳಿಗೆ ಆಗ್ರ 3 ಬ್ಯಾಟರ್​ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್​ಗೆ ಬಂದ ಕಮಿಂದು, ತಂಡದ ಸ್ಕೋರ್​ 300ರ ಗಡಿ ದಾಟುವವರೆಗೆ ಕ್ರೀಸ್​ನಲ್ಲಿ ಉಳಿದು ತಂಡದ ಆಪತ್ಬಾಂಧವ ಎನಿಸಿಕೊಂಡರು. ಈ ಕ್ರಮದಲ್ಲಿ ನಿರ್ಣಾಯಕ ಇನ್ನಿಂಗ್ಸ್​ ಆಡಿದ ಅವರು ಶತಕ ಸಿಡಿಸಿದರು. ಇದರೊಂದಿಗೆ ಹೊಸ 5 ದಾಖಲೆಗಳನ್ನು ತಮ್ಮದಾಗಿಸಿಕೊಂಡರು.

ಕಮಿಂದು ಬರೆದ 5 ದಾಖಲೆಗಳು

ಸತತ ಅರ್ಧಶತಕ:ಕಳೆದ ಏಳು ಟೆಸ್ಟ್​ ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿ, ಈ ದಾಖಲೆ ಬರೆದ ಶ್ರೀಲಂಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಏಷ್ಯಾದ ಅಗ್ರ ಕ್ರಿಕೆಟಿಗ:ಕಮಿಂದು ಮೆಂಡಿಸ್​ ಇದುವೆರೆಗೆ ಕೇವಲ ಏಳು ಟೆಸ್ಟ್​ ಪಂದ್ಯಗಳನ್ನು ಆಡಿದ್ದು, 11 ಇನ್ನಿಂಗ್ಸ್​ಗಳಲ್ಲಿ 809 ರನ್​ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿರಿವುದು ವಿಶೇಷ. ಇದರೊಂದಿಗೆ ಆಡಿದ 10 ಇನ್ನಿಂಗ್ಸ್​ಗಳಲ್ಲಿ ಅತೀ ಹೆಚ್ಚು ಸರಾಸರಿ 80.90 ಹೊಂದಿರುವ ಏಷ್ಯನ್​ ಆಟಗಾರ ಎಂಬ ದಾಖಲೆ ಬರೆದರು. ಇದೇ ವೇಳೆ ಭಾರತದ ಬ್ಯಾಟರ್​ ಯಶಸ್ವಿ ಜೈಸ್ವಾಲ್​ (68.53 ಸರಾಸರಿ) ಅವರನ್ನು ಹಿಂದಿಕ್ಕಿದರು.

ಉತ್ತಮ ಸರಾಸರಿ:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಕನಿಷ್ಠ 10 ಇನ್ನಿಂಗ್ಸ್‌ಗಳನ್ನು ಆಡಿದ ಬ್ಯಾಟ್ಸ್‌ಮನ್‌ಗಳಲ್ಲಿ ಅತ್ಯುತ್ತಮ ಸರಾಸರಿಯನ್ನು ಹೊಂದಿರುವ ಆಟಗಾರ ಎಂಬ ದಾಖಲೆಯನ್ನು ಅವರು ಬರೆದರು. ಈ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್ 75.2 ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ದಿಮುತ್ ಜೊತೆ ಟೈಡ್:ಲಂಕಾ ಬ್ಯಾಟ್ಸ್‌ಮನ್ ದಿಮುತ್ ಕರುಣಾರತ್ನೆ ಇದುವರೆಗೆ ಒಂದೇ WTC ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದರು. ಇದೀಗ ಈ ಪಟ್ಟಿಯಲ್ಲಿ ಮೆಂಡಿಸ್ ಕೂಡ ಕಾಣಿಸಿಕೊಂಡಿದದಾರೆ. 2019-21 ಋತುವಿನಲ್ಲಿ ದಿಮುತ್ ನಾಲ್ಕು ಶತಕಗಳನ್ನು ಸಿಡಿಸಿದ್ದರು. 2023-25ರ ಋತುವಿನಲ್ಲಿ ಮೆಂಡಿಸ್ ಈಗಾಗಲೇ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಅಗ್ರಸ್ಥಾನಕ್ಕೇರಲಿದ್ದಾರೆ.

ಅತೀ ವೇಗದ ಶತಕಗಳು:ಮೆಂಡಿಸ್ ಆಡಿರುವ 11 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳನ್ನು ಬಾರಿಸುವ ಮೂಲಕ ಲೆಜೆಂಡರಿ ಕ್ರಿಕೆಟರ್​ ಬ್ರಾಡ್ಮನ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧ ಎರಡು, ಇಂಗ್ಲೆಂಡ್ ವಿರುದ್ಧ ಮತ್ತು ನ್ಯೂಜಿಲೆಂಡ್ ವಿರುದ್ಧ ತಲಾ ಒಂದು ಶತಕ ಸಿಡಿಸಿದ್ದಾರೆ. ಅತಿ ವೇಗದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಮೊದಲ ಲಂಕಾ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ 11 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದರು.

ಇದನ್ನೂ ಓದಿ:ಚೆನ್ನೈ ಟೆಸ್ಟ್​: ಭಾರತ ವಿರುದ್ಧ ಟಾಸ್​​ ಗೆದ್ದ ಬಾಂಗ್ಲಾ ಬೌಲಿಂಗ್​ ಆಯ್ಕೆ - India Bangladesh 1st Test

ABOUT THE AUTHOR

...view details