ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತದ ಅಗ್ರ ಮೂವರು ಬ್ಯಾಟರ್ಗಳು ಅಲ್ಪಮೊತ್ತಕೆ ಪೆವಿಲಿಯನ್ ಸೇರಿದ್ದಾರೆ. ಅದರಲ್ಲೂ ಶುಭಮನ್ ಗಿಲ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಅವರ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ.
ಹೌದು, ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ಎಸೆತಗಳನ್ನು ಎದುರಿಸಿದ ಗಿಲ್ ಖಾತೆ ತೆರೆಯದೇ ಪೆವಿಲಿಯನ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಕಳಪೆ ದಾಖಲೆ ಇದೀಗ ಗಿಲ್ ಹೆಸರಿಗೂ ಸೇರ್ಪಡೆಯಾಗಿದೆ.
ಯಾವುದು ಆ ದಾಖಲೆ:ಈ ವರ್ಷ ತವರು ನೆಲದಲ್ಲಿ ಗಿಲ್ ಅವರು ಮೂರನೇ ಬಾರಿಗೆ ಶೂನ್ಯ ಸುತ್ತಿದ್ದಾರೆ. ಇದರೊಂದಿಗೆ ಅವರು ಕೊಹ್ಲಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವರ್ಷದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಡಕ್ ಔಟ್ ಆದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಮೊಹಿಂದರ್ ಅಮರನಾಥ್ 1983ರಲ್ಲಿ 5 ಬಾರಿ ಶೂನ್ಯ ಸುತ್ತಿ ಅಗ್ರಸ್ಥಾನದಲ್ಲಿದ್ದರೇ, ಮನ್ಸೂರ್ ಅಲಿ ಖಾನ್ ಪಟೌಡಿ (1969), ದಿಲೀಪ್ ವೆಂಗ್‌ಸರ್ಕಾರ್ (1979), ವಿನೋದ್ ಕಾಂಬ್ಳಿ (1994) ಮತ್ತು ಕೊಹ್ಲಿ (2021) ನಂತರದ ಸ್ಥಾನದಲ್ಲಿದ್ದಾರೆ.