Shardul Thakur Hat Trick: ಸದ್ಯ ನಡೆಯುತ್ತಿರುವ ಎರಡನೇ ಹಂತದ ರಣಜಿ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಮತ್ತು ಮುಂಬೈ ತಂಡದ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ತಮ್ಮ ಸೂಪರ್ ಫಾರ್ಮ್ ಅನ್ನು ಮುಂದು ವರೆಸಿದ್ದಾರೆ.
ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಮುಂಬೈ ಪರ ಮಾರಕ ಬೌಲಿಂಗ್ ಮಾಡಿದ ಶಾರ್ದೂಲ್, ಮೇಘಾಲಯದ ಆರಂಭಿಕ ಬ್ಯಾಟರ್ಗಳಾದ ನಿಶಾಂತ ಚಕ್ರವರ್ತಿ ಅವರನ್ನು ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಮೂರನೇ ಓವರ್ನಲ್ಲಿ ಸತತ ಮೂರು ಎಸೆತಗಳಲ್ಲಿ 3 ವಿಕೆಟ್ ಕಬಳಿಸಿದರು. ಅನಿರುದ್ಧ್, ಸುಮಿತ್ ಕುಮಾರ್ ಮತ್ತು ಜಸ್ಕಿರತ್ ಅವರ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಇದರೊಂದಿಗೆ ಶಾರ್ದೂಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದರು. ಇವರ ಬೌಲಿಂಗ್ ದಾಳಿಗೆ ಸಿಲುಕಿದ ಮೇಘಾಲಯ ಕೇವಲ 2 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮೇಘಾಲಯ ಪರ ಪ್ರಿಂಗ್‌ಸಾಂಗ್ ಸಂಗ್ಮಾ (19) ಮತ್ತು ನಾಯಕ ಆಕಾಶ್ ಚೌಧರಿ (16), ಅನಿಶ್ ಚರಕ್ (17), ಹಿಮನ್ ಫುಕಾನ್ (28) ಎರಡಂಕ್ಕಿ ಗಳಿಸಿದ ಬ್ಯಾಟರ್ ಎನಿಸಿಕೊಂಡರು.
ಆದರೆ 6 ಬ್ಯಾಟರ್ಗಳು ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಇದರಿಂದಾಗಿ ಮೇಘಾಲಯ 24.3 ಓವರ್‌ಗಳಲ್ಲಿ 86 ರನ್ ಗಳಿಸಿ ಆಲೌಟ್ ಆಯ್ತು. ಶಾರ್ದೂಲ್ ಮುಂಬೈ ಪರ ಹ್ಯಾಟ್ರಿಕ್ ಸಾಧನೆ ಮಾಡಿದ 5ನೇ ಬೌಲರ್ ಎನಿಸಿಕೊಂಡರು.
ರಣಜಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮುಂಬೈ ಬೌಲರ್ಸ್
1) ಜಹಾಂಗೀರ್ ಬೆಹ್ರಾಮ್‌ಜಿ ಖೋಟ್ vs ಬರೋಡಾ - 1943
2) ಉಮೇಶ್ ನಾರಾಯಣ್ ಕುಲಕರ್ಣಿ vs ಗುಜರಾತ್ - 1963