ಕರ್ನಾಟಕ

karnataka

ETV Bharat / sports

ರಣಜಿಯಲ್ಲೂ ಅದೇ ರಾಗ ಅದೇ ಹಾಡು.! ಹೀಗೆ ಬಂದು ಹಾಗೆ ಹೋದ ಹಿಟ್​ಮ್ಯಾನ್ - RANJI MATCH

ಇಂದಿನಿಂದ ರಣಜಿ ಟ್ರೋಫಿಯ 6ನೇ ಸುತ್ತಿನ ಪಂದ್ಯಾವಳಿಗಳು ಆರಂಭವಾಗಿವೆ. ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಮುಂಬೈ ಪರ ಕಣಕ್ಕಿಳಿದಿದ್ದಾರೆ.

RANJI TROPHY 2025  MUMBAI JAMMU KASHMIR RANJI  ROHIT SHAMRA RANJI TEAM  Rohit Sharma 10 Test innings
Rohit Sharma (AP)

By ETV Bharat Sports Team

Published : Jan 23, 2025, 12:11 PM IST

Ranji 2025: ಇಂದಿನಿಂದ ಆರನೇ ಸುತ್ತಿನ ರಣಜಿ ಪಂದ್ಯಾವಳಿಗಳು ಆರಂಭವಾಗಿವೆ. ಎ ಗುಂಪಿನ ಪಂದ್ಯದಲಿಂದು ಮುಂಬೈ ಮತ್ತು ಜಮ್ಮು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ಪರ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದಿರುವ ರೋಹಿತ್​ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್​ ಗಾವಸ್ಕರ್​ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ರೋಹಿತ್​ ಶರ್ಮಾ ಕಳಪೆ ಪ್ರದರ್ಶನ ತೋರಿದ್ದರು. ಮೂರು ಪಂದ್ಯಗಳನ್ನು ಆಡಿದ್ದ ಹಿಟ್​ಮ್ಯಾನ್​ ಕನಿಷ್ಠ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಈ ಸರಣಿಯ 6 ಇನ್ನಿಂಗ್ಸ್​ಗಳಲ್ಲಿ ಕೇವಲ 31 ರನ್​ ಗಳಿಸಿದ್ದರು. ಅಲ್ಲದೇ ರನ್​ ಗಳಿಸಲು ಹೆಣಗಾಡುತ್ತಿದ್ದ ಅವರು ಬಿಜಿಟಿ ಸರಣಿಯ 5ನೇ ಮತ್ತು ಅಂತಿಮ ಪಂದ್ಯದಿಂದ ಹೊರಗುಳಿದಿದ್ದರು.

ತಾವು ಕಳೆದುಕೊಂಡಿರುವ ಫಾರ್ಮ್​ ಅನ್ನು ಮರಳಿ ಪಡೆಯಲು ಮುಂದಾಗಿರುವ ರೋಹಿತ್​ ಶರ್ಮಾ ರಣಜಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದರಂತೆ ಇಂದಿನಿಂದ ಆರಂಭವಾಗಿರುವ 6ನೇ ಸುತ್ತಿನ ರಣಜಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದರು. ಶರದ್​ ಪವಾರ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ್​ ವಿರುದ್ಧ ಟಾಸ್​ ಗೆದ್ದ ಮುಂಬೈ ನಾಯಕ ಅಜಿಂಕ್ಯಾ ರಹಾನೆ ಮೊದಲಿಗೆ ಬ್ಯಾಟಿಂಗ್​ ಮಾಡಲು ನಿರ್ಧರಿಸಿದರು. ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ರೋಹಿತ್​ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದರು.

19 ಎಸೆತಗಳನ್ನು ಎದುರಿಸಿದ ಹಿಟ್​ಮ್ಯಾನ್ ಕೇವಲ 3 ರನ್​ ಮಾತ್ರ ಕಲೆಹಾಕಿದರು. ಉಮಾರ್​ ನಝಿರ್​ ಎಸೆದ ಬೌಲಿಂಗ್​ನಲ್ಲಿ ರೋಹಿತ್ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು. ಇದರೊಂದಿಗೆ ರೋಹಿತ್​ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಹಿಟ್​ಮ್ಯಾನ್​

ರೋಹಿತ್​ ಶರ್ಮಾ ಕಳೆದ 15 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ 10.93 ಸರಾಸರಿಯಲ್ಲಿ ಕೇವಲ 164 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್​ ಪಂದ್ಯದಲ್ಲೂ ರೋಹಿತ್​ ರನ್​ ಗಳಿಸಲು ಸಾಧ್ಯವಾಗಿರಲಿಲ್ಲ. ಅವರು ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್​ನಲ್ಲಿ 42 ರನ್​ ಮಾತ್ರ ಕಲೆಹಾಕಿದ್ದರು.

ಬಳಿಕ ನಡೆದ ನ್ಯೂಜಿಲೆಂಡ್​ ವಿರುದ್ಧ ತವರಿನ ಪಂದ್ಯದಲ್ಲೂ ಫ್ಲಾಪ್​ ಆಗಿದ್ದರು. 3 ಪಂದ್ಯಗಳ 6 ಇನ್ನಿಂಗ್ಸ್​ಗಳಲ್ಲಿ ಕೇವಲ 91 ರನ್​ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಬಾಡರ್ರ್​ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಹಿಟ್​ಮ್ಯಾನ್​ ಬ್ಯಾಟ್​ನಿಂದ 31 ರನ್​ ಮಾತ್ರ ಹರಿದು ಬಂದಿತ್ತು.

ಸಂಕಷ್ಟದಲ್ಲಿ ಮುಂಬೈ:ಟಾಸ್​ ಗೆದ್ದುಮೊದಲ ಇನ್ನಿಂಗ್ಸ್​ ಆರಂಭಿಸಿರುವ ಮುಂಬೈ 19 ಓವರ್​​ ಮುಕ್ತಾಯದ ವೇಳೆಗೆ 60 ರನ್​ಗಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾರಗಿ ಬ್ಯಾಟಿಂಗ್​ ಮಾಡಿದ ಜೈಸ್ವಾಲ್​ 4 ರನ್​ಗಳಿಸಿ ಪೆವಿಲಿಯನ್​ ಸೇರಿದರೇ, ರೋಹಿತ್​ ಶರ್ಮಾ 3 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ನಂತರ ಬಂದ ಹಾರ್ದಿಕ್​ ತಾಮೊರೆ (7), ಅಜಿಂಕ್ಯಾ ರಹಾನೆ (12), ಶ್ರೇಯಸ್​ ಅಯ್ಯರ್​ (11) ಎರಡಂಕಿ ಗಳಿಸುವಷ್ಟರಲ್ಲೆ ಸುಸ್ತಾದರು. ಶಿವಂ ದುಭೆ, ಶಾಮ್ಸ್​ ಠಾಕೂರ್​ ಯಾವುದೇ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ. ಸಧ್ಯ ಶಾರ್ದೂಲ್​ ಠಾಕೂರ್​ (13), ತನುಶ್​ ಕೋಟ್ಯಾನ್​ (4) ಬ್ಯಾಟಿಂಗ್​ ಮುಂದುವರೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪರ ಉಮರ್​ ನಾಝಿರ್​ 8 ಓವರ್​ ಬೌಲಿಂಗ್​ ಮಾಡಿ 27 ರನ್​ ನೀಡಿ 4 ವಿಕೆಟ್​ ಉರಳಿಸಿದ್ದಾರೆ. ಯುಧವೀರ್​ ಸಿಂಗ್​ ಚರಕ್​ 2, ನಬಿ ದಾರ್​ ಒಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:ಕನ್ನಡಿಗನ ಕಮಾಲ್​; ಇಂಗ್ಲೆಂಡ್​ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ

ABOUT THE AUTHOR

...view details