ಚೆನ್ನೈ, ತಮಿಳುನಾಡು:ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾಗೆ ಬೃಹತ್ ಗುರಿ ನೀಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದ ಭಾರತ ಇಂದು 287 ರನ್ಗಳಿಸಿ ಡಿಕ್ಲೆರ್ ಘೋಷಿಸಿತು. ಮೂರನೇ ದಿನದಾಟದಂದು ರಿಷಭ್ ಪಂತ್ ಮತ್ತು ಗಿಲ್ ಶತಕ ಪೂರೈಸಿದರು. ಇದರೊಂದಿಗೆ ಭಾರತ 515 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು. ಏತನ್ಮಧ್ಯೆ, ಮೊದಲ ಸೆಷನ್‌ನಲ್ಲಿ ರಿಷಭ್ ಪಂತ್ ಅವರು ಎದುರಾಳಿ ತಂಡದ ಫೀಲ್ಡಿಂಗ್ ಸೆಟ್ ಮಾಡಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೌದು, ಪಂತ್ ಬ್ಯಾಟಿಂಗ್ ವೇಳೆ, ಬಾಂಗ್ಲಾ ನಾಯಕ ನಜ್ಮುಲ್ ಶಾಂಟೊ ಫೀಲ್ಡರ್ಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದರು. ಅದರಂತೆ ಫೀಲ್ಡರ್ಗಳನ್ನು ನಿಲ್ಲಿಸಿದ್ದರು. ಇದನ್ನು ಗಮನಿಸಿದ ರಿಷಭ್ ಪಂತ್ ತಕ್ಷಣವೇ 'ಭಾಯ್.. ಇಲ್ಲೊಬ್ಬ ಫೀಲ್ಡರ್ ನಿಲ್ಲಿಸುವಂತೆ ಮಿಡ್ ವಿಕೆಟ್ ಕಡೆಗೆ ಸೂಚಿಸಿದರು. ಪಂತ್ ಸಲಹೆಯಂತೆಯೇ ನಾಯಕ ಸ್ಯಾಂಟೋ ಫಿಲ್ಡಿಂಗ್ನಲ್ಲಿ ಬದಲಾವಣೆ ಮಾಡಿ ಕೂಡಲೇ ಮಿಡ್-ವಿಕೆಟ್ ಕಡೆಗೆ ಫೀಲ್ಡರ್ ಅನ್ನು ಕಳುಹಿಸಿದರು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.