ಕರ್ನಾಟಕ

karnataka

ETV Bharat / sports

ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಆಶಸ್​ಗೆ ಹೋಲಿಸಿದ ರಿಕಿ ಪಾಂಟಿಂಗ್ - BORDER GAVASKAR TROPHY

ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ರಿಕಿ ಪಾಂಟಿಂಗ್ ಆಶಸ್ ಸರಣಿಗೆ ಹೋಲಿಸಿದ್ದಾರೆ.

ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್ (IANS)

By ETV Bharat Sports Team

Published : Nov 20, 2024, 8:02 PM IST

ಪರ್ತ್ (ಆಸ್ಟ್ರೇಲಿಯಾ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಬಾರ್ಡರ್ - ಗವಾಸ್ಕರ್ ಟ್ರೋಫಿ ಪ್ರಾರಂಭವಾಗಲು ಇನ್ನು ಒಂದು ದಿನ ಮಾತ್ರ ಉಳಿದಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಎರಡು ದೇಶಗಳ ನಡುವಿನ ಪೈಪೋಟಿಯನ್ನು ಆಶಸ್​ ಗೆ ಹೋಲಿಸಿ, ಈ ಎರಡು ಸರಣಿಗಳು ವಿಶ್ವ ಕ್ರಿಕೆಟ್​​​ನ ಯುದ್ಧವಾಗಿದ್ದು, ಪ್ರತಿಯೊಬ್ಬರೂ ಈ ಪಂದ್ಯಗಳನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಆಶಸ್ ಸರಣಿ 142 ವರ್ಷಗಳಿಂದ ನಡೆಯುತ್ತಿದ್ದು, ಇದರ ಅಡಿಯಲ್ಲಿ 345 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಆಸ್ಟ್ರೇಲಿಯಾ 142 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 110 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು 1996/97 ರಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಭಾರತ 24 ಪಂದ್ಯಗಳನ್ನು ಗೆದ್ದಿದೆ ಮತ್ತು ಆಸ್ಟ್ರೇಲಿಯಾ 20 ಪಂದ್ಯಗಳನ್ನು ಗೆದ್ದಿದೆ.

ಕುತೂಹಲದಿಂದ ಕಾಯುತ್ತೇವೆ:ಐಸಿಸಿ ರಿವ್ಯೂ ಶೋನಲ್ಲಿ ಮಾತನಾಡಿದ ಪಾಂಟಿಂಗ್, "ಆಸ್ಟ್ರೇಲಿಯಾ-ಇಂಗ್ಲೆಂಡ್ ಆಶಸ್ ಇತಿಹಾಸ ಹೊಂದಿದ್ದರೆ, ಆಸ್ಟ್ರೇಲಿಯಾ-ಭಾರತ ಬಹಳ ಹಿಂದೆ ಬಿದ್ದಿಲ್ಲ ಮತ್ತು ಈ ಪೈಪೋಟಿ ಬಹಳ ಸಮಯದಿಂದ ಇದೆ. ನಾವೆಲ್ಲರೂ ಅಂಥ ಪಂದ್ಯಗಳಿಗಾಗಿ ಕುತೂಹಲದಿಂದ ಕಾಯುತ್ತೇವೆ ಎಂದು ನಾನು ಭಾವಿಸುತ್ತೇನೆ. ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರನಾಗಿ, ಈ ಎರಡು ತಂಡಗಳು ಅಲ್ಲಿಗೆ ನ್ಯಾಯಯುತವಾಗಿ ಆಡಬೇಕು ಮತ್ತು ಮುಂದಿನ ಐದು ಪಂದ್ಯಗಳ ನಂತರ ಯಾರು ಗೆಲ್ಲಲಿದ್ದಾರೆ ಎಂದು ನೋಡಬೇಕೆಂದು ನಾನು ಬಯಸುತ್ತೇನೆ." ಎಂದರು.

2016/17 ರಿಂದ ಈ ಹಿಂದೆ ನಾಲ್ಕು ಬಾರಿ ಭಾರತವು ದೇಶೀಯ ಮತ್ತು ವಿದೇಶಿ ನೆಲಗಳಲ್ಲಿ ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಗೆದ್ದಿದೆ. ನವೆಂಬರ್ 22 ರಂದು ಪರ್ತ್​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಯಾ ದೇಶಗಳ ಇಬ್ಬರು ಪ್ರಸಿದ್ಧ ಬ್ಯಾಟ್ಸ್​ಮನ್​ಗಳಾದ ಅಲನ್ ಬಾರ್ಡರ್ ಮತ್ತು ಸುನಿಲ್ ಗವಾಸ್ಕರ್ ಅವರ ಹೆಸರನ್ನು ಹೊಂದಿರುವ ಟ್ರೋಫಿಯನ್ನು ಮತ್ತೆ ಗೆಲ್ಲುವ ಅವಕಾಶ ಸಿಗಲಿದೆ.

ಆಟವು ಬಹುತೇಕ ರೋಮಾಂಚನಕಾರಿಯಾಗಿರಲಿದೆ - ಪಾಂಟಿಂಗ್:ಮುಂಬರುವ ಸರಣಿಯು ರೋಮಾಂಚಕಾರಿ ಮತ್ತು ಸ್ಪರ್ಧಾತ್ಮಕವಾಗಿರಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. "ಸರಣಿ ಮಸಾಲಾದಿಂದ ತುಂಬಿರುತ್ತದೆ ಎಂದು ಹೇಳುವುದು ಎಷ್ಟು ಸರಿ ಎಂಬುದು ಗೊತ್ತಿಲ್ಲ. ಆದರೆ ಆಟವು ಬಹುತೇಕ ರೋಮಾಂಚನಕಾರಿಯಾಗಿರಲಿದೆ ಎಂದು ಭಾವಿಸುತ್ತೇನೆ. ಇದರಲ್ಲಿ ವಿಶ್ವದ ಎರಡು ಅತ್ಯುತ್ತಮ ತಂಡಗಳು ಗೆಲುವಿಗಾಗಿ ಸಂಪೂರ್ಣವಾಗಿ ಪ್ರಯತ್ನಿಸಲಿವೆ" ಎಂದು ಪಾಂಟಿಂಗ್ ಹೇಳಿದರು.

"ಎದುರಾಳಿ ತಂಡಕ್ಕೆ ಒಂದಿಷ್ಟೂ ಅವಕಾಶ ನೀಡಲು ಬಯಸುವುದಿಲ್ಲ. ಇಡೀ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಯಾವುದೇ ತಂಡ ಕಳೆದುಕೊಳ್ಳಲು ಬಯಸುವುದಿಲ್ಲ ಮತ್ತು ಅದು ವಿಶ್ವ ಕ್ರೀಡೆಯಲ್ಲಿ ನಾವು ಹೊಂದಿರುವ ಆ ದೊಡ್ಡ ಪೈಪೋಟಿಯ ಸೌಂದರ್ಯ ಎಂದು ನಾನು ಭಾವಿಸುತ್ತೇನೆ. ನಾನು ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದೇನೆ. ಇದು ಕ್ರಿಕೆಟ್ ಮಾತ್ರವಲ್ಲ, ವಿಶ್ವ ಕ್ರೀಡೆಯ ಅತಿದೊಡ್ಡ ಪೈಪೋಟಿಯಾಗಿದೆ." ಎಂದು ಅವರು ನುಡಿದರು.

ಇದನ್ನೂ ಓದಿ : ಪಂತ್​ ಹರಾಜಿಗೆ ಎಂಟ್ರಿ ಕೊಡಲು ಇದೇ ಕಾರಣ ಎಂದ ಸುನೀಲ್​ ಗವಾಸ್ಕರ್​: ಸಿಡಿಮಿಡಿಗೊಂಡ ರಿಷಭ್ ಪಂತ್​​!

ABOUT THE AUTHOR

...view details