ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿಂದು ಟೀಂ ಇಂಡಿಯಾ ದಾಖಲೆ ಬರೆದಿದೆ. ಮಲೇಷ್ಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 10 ವಿಕೆಟ್‌ಗಳಿಂದ ಅಜೇಯ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಲೇಷ್ಯಾ ತಂಡವು ಭಾರತೀಯ ವನಿತೆಯರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 31 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಸ್ಪಿನ್ನರ್ ವೈಷ್ಣವಿ ಶರ್ಮಾ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದರೇ ಮತ್ತೊಬ್ಬ ಸ್ಪಿನ್ನರ್ ಆಯುಷಿ ಶುಕ್ಲಾ ಮೂರು ವಿಕೆಟ್, ವಿಜೆ ಜೋಶಿತ್ ಒಂದು ವಿಕೆಟ್ ಪಡೆದು ಮಿಂಚಿದರು. ಮಲೇಷ್ಯಾದ ಪರ ಒಬ್ಬೇ ಒಬ್ಬ ಬ್ಯಾಟರ್ ಎರಡಂಕಿಯ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೇ ಎಕ್ಸ್‌ಟ್ರಾಗಳ ಮೂಲಕವೇ ಮಲೇಷ್ಯಾ ತಂಡಕ್ಕೆ 11 ರನ್‌ಗಳು ಬಂದವು. ನಾಲ್ವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾದರು. ಇಬ್ಬರು ಬ್ಯಾಟರ್ ಮಾತ್ರ 5 ರನ್ ಗಳಿಸಿದರೇ, ಉಳಿದ ಬ್ಯಾಟರ್ಗಳು 3, 2, 1 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ ಹೊರ ನಡೆದರು.
𝕎 𝕎 𝕎#TeamIndia's left arm spinner & debutant Vaishnavi Sharma becomes the first Indian bowler to pick up a hattrick in #U19WomensWorldCup tournament! 🙌🏻#U19WomensT20WConJioStar 👉 #INDWvMASW, LIVE NOW on Disney+ Hotstar! pic.twitter.com/DaEdFnus07
— Star Sports (@StarSportsIndia) January 21, 2025
ಈ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 17 ಎಸೆತಗಳಲ್ಲಿ ಆಟವನ್ನು ಮುಗಿಸಿತು. ಆರಂಭಿಕರಾದ ತ್ರಿಶಾ ಮತ್ತು ಜಿ ಕಮಲಿನಿ ಗೆಲುವಿನ ದಡಕ್ಕೆ ಕೊಂಡೊಯ್ದರು. ತ್ರಿಶಾ ಪೂನಕಲ್ಲು 12 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 27 ರನ್ ಚಚ್ಚಿದರೆ, ಜಿ ಕಮಲಿನಿ 5 ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ ನಾಲ್ಕು ರನ್ ಕಲೆಹಾಕಿದರು.
ಈ ಗೆಲುವಿನೊಂದಿಗೆ, ಭಾರತವು ಗ್ರೂಪ್ ಎ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ. ಈ ಗುಂಪಿನ್ನಲಿ ಭಾರತ ಮತ್ತು ಶ್ರೀಲಂಕಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೊದಲೆರಡು ಸ್ಥಾನದಲ್ಲಿವೆ. ವೆಸ್ಟ್ ಇಂಡೀಸ್ ಮತ್ತು ಮಲೇಷ್ಯಾ 2 ಪಂದ್ಯಗಳಲ್ಲಿ ಸೋಲು ಕಂಡು ನಾಲ್ಕನೇ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
For her exceptional bowling performance including a hat-trick and a five wicket haul, Vaishnavi Sharma is the Player of the Match 👏 🏆
— BCCI Women (@BCCIWomen) January 21, 2025
Scorecard ▶️ https://t.co/3K1CCzgAYK#TeamIndia | #MASvIND | #U19WorldCup pic.twitter.com/Wu1IaGRQC9
ಏತನ್ಮಧ್ಯೆ, ಭಾರತ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲೂ ಭಾರತೀಯ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 44 ರನ್‌ಗಳಿಗೆ ಆಲೌಟ್ ಮಾಡಿದ್ದರು. ಈ ಗುರಿಯನ್ನು ಭಾರತ ಕೇವಲ 4.2 ಓವರ್ಗಳಲ್ಲಿ ಬೆನ್ನಟ್ಟಿ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಪರುಣಿಕಾ ಸಿಸೋಡಿಯಾ 3, ಆಯುಷಿ ಶುಕ್ಲಾ 2 ಮತ್ತು ವಿಜೆ ಜೋಶಿತ್ 2 ವಿಕೆಟ್ ಪಡೆದು ವೆಸ್ಟ್ ಇಂಡೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ರೋಹಿತ್ ಶರ್ಮಾಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಮುಂಬೈ: ಏನಾಯ್ತು?