ಹೈದರಾಬಾದ್: ಮುಂದಿನ ತಿಂಗಳಿನಿಂದ 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎರಡನೇ ಬಾರಿಯೂ ಕಪ್ ಎತ್ತಿ ಹಿಡಿಯಲು ಎದರು ನೋಡುತ್ತಿದೆ.
ಆದರೆ WPL ಆರಂಭಕ್ಕೂ ಮುನ್ನವೇ ತಂಡಕ್ಕೆ ಭಾರೀ ಆಘಾತವಾಗಿತ್ತು. ಆಸ್ಟ್ರೇಲಿಯಾದ ಬೌಲಿಂಗ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಮೋಲಿನೆಕ್ಸ್ ಮುಂದಿನ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎಂದು RCB ಪ್ರಕಟಿಸಿತ್ತು.
🔊 OFFICIAL ANNOUNCEMENT 🔊
— Royal Challengers Bengaluru (@RCBTweets) January 16, 2025
Our champion all-rounder Sophie Molineux has unfortunately been ruled out of #WPL2025 due to a knee injury, and England all-rounder 𝐂𝐡𝐚𝐫𝐥𝐨𝐭𝐭𝐞 𝐄𝐥𝐥𝐞𝐧 𝐃𝐞𝐚𝐧 has been chosen as her replacement.
Welcome to #ನಮ್ಮRCB, Charlie! We can’t… pic.twitter.com/99LrPa1oMl
ಆದರೆ ಇವರ ಜಾಗಕ್ಕೆ ಯಾರನ್ನು ತಂಡಕ್ಕೆ ಕರೆತರಲಾಗುತ್ತದೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡುತ್ತಿದ್ದರು. ಬದಲಿ ಆಟಗಾರ್ತಿಯಾಗಿ ಆರ್‌ಸಿಬಿ ತಂಡದಲ್ಲಿ ಚಾರ್ಲಿ ಡೀನ್ ಅವರನ್ನು ಸೇರಿಸಲಾಯಿತು. ಆರ್‌ಸಿಬಿ ಡೀನ್‌ರನ್ನು 30 ಲಕ್ಷಕ್ಕೆ ಖರೀದಿಸಿತು. ಇದೀಗ ಮೋಲಿನಿಕ್ಸ್ ಜಾಗಕ್ಕೆ ಚಾರ್ಲಿ ಡೀನ್ ಸೇರ್ಪಡೆಗೊಂಡಿದ್ದು ಈ ಬಗ್ಗೆ RCB ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಎಡಗೈ ಆಫ್-ಸ್ಪಿನ್ ಆಗಿರುವ ಮೊಲಿನಿಕ್ಸ್ 3 ಟೆಸ್ಟ್, 13 ಏಕದಿನ ಮತ್ತು 28 ಟಿ-20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ 7, ಏಕದಿನಗಳಲ್ಲಿ 23 ಮತ್ತು ಟಿ-20ಗಳಲ್ಲಿ 41ವಿಕೆಟ್ ಕಬಳಿಸಿದ್ದಾರೆ.
ಬಲಗೈ ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಚಾರ್ಲಿ ಡೀನ್, ಇಂಗ್ಲೆಂಡ್ ಪರ 3 ಟೆಸ್ಟ್, 39 ಏಕದಿನ ಮತ್ತು 36 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 122 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 7, ಏಕದಿನಗಳಲ್ಲಿ 69 ಮತ್ತು ಟಿ-20ಗಳಲ್ಲಿ 46 ವಿಕೆಟ್ ಕಬಳಿಸಿದ್ದಾರೆ.
ಏತನ್ಮಧ್ಯೆ, ಮಹಿಳಾ ಐಪಿಎಲ್ ಇಲ್ಲಿಯವರೆಗೆ ಎರಡು ಆವೃತ್ತಿಗಳಿಗೆ ಯಶಸ್ವಿಯಾಗಿ ನಡೆದಿದೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿಜೇತ ತಂಡವಾಗಿ ಹೊರಹೊಮ್ಮಿತ್ತು. ಬಳಿಕ ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಕಪ್ ಎತ್ತಿ ಹಿಡಿದೆ. ಇದೀಗ ಮೂರನೇ ಆವೃತ್ತಿ ಫೆಬ್ರವರಿ 7 ರಿಂದ ಆರಂಭವಾಗಲಿದ್ದು ಮಾರ್ಚ್ 2 ರವರೆಗೆ ನಡೆಯಲಿದೆ.
ಈ ಬಾರಿಯ WPL ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಎಲ್ಲಾ ಪಂದ್ಯಗಳ ಬೆಂಗಳೂರು, ಮುಂಬೈ, ಲಕ್ನೋ ಮತ್ತು ವಡೋದರಾದಲ್ಲಿ ನಡೆಯಲಿವೆ. ಆರ್‌ಸಿಬಿ ಪ್ರಸ್ತುತ ಡಬ್ಲ್ಯೂಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯಗಳಿಸಿತ್ತು.
ಇದನ್ನೂ ಓದಿ: 39,969ರನ್, 4,204 ವಿಕೆಟ್: ಕ್ರಿಕೆಟ್ನಲ್ಲಿ 94 ವರ್ಷಗಳಿಂದ ಮುರಿಯಲು ಸಾಧ್ಯವಾಗದ ದಾಖಲೆ ಇದು!