ಕರ್ನಾಟಕ

karnataka

ETV Bharat / sports

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮುಖ್ಯಸ್ಥರಾಗಿ ನಿವೃತ್ತ ಐಪಿಎಸ್​ ಅಧಿಕಾರಿ ಶರದ್​ ಕುಮಾರ್​ ನೇಮಕ - BCCI anti corruption unit head

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ನೂತನ ಮುಖ್ಯಸ್ಥರಾಗಿ ನಿವೃತ್ತ ಐಪಿಎಸ್​ ಅಧಿಕಾರಿ ಶರದ್​ ಕುಮಾರ್​ ಅವರನ್ನು ನೇಮಕ ಮಾಡಲಾಗಿದೆ.

By ETV Bharat Sports Team

Published : 4 hours ago

ಬಿಸಿಸಿಐ
ಬಿಸಿಸಿಐ (AINS)

ಮುಂಬೈ: ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ನೂತನ ಮುಖ್ಯಸ್ಥರಾಗಿ ನಿವೃತ್ತ ಐಪಿಎಸ್​ ಅಧಿಕಾರಿ ಶರದ್​ ಕುಮಾರ್​ ನೇಮಕಗೊಂಡಿದ್ದಾರೆ. ಕಳೆದ ವರ್ಷ ಈ ಘಟಕ್ಕೆ ಕೆಕೆ ಮಿಶ್ರಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಆದರೆ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೇ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ನಾಲ್ಕು ತಿಂಗಳ ಮೊದಲೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿ ಶರದ್ ಕುಮಾರ್ ಅವರು ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ.

ಇದೀಗ ಉತ್ತರ ಪ್ರದೇಶದ ಬರೇಲಿ ಮೂಲದ ಶರದ್ ಕುಮಾರ್ ಅವರನ್ನು ಮೂರು ವರ್ಷಗಳ ಕಾಲ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರ ಹೆಸರನ್ನು ಅನುಮೋದಿಸಲಾಗಿತ್ತು ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಶರದ್ ಕುಮಾರ್ ಅವರು ಹುದ್ದೆಗೆ ಬಂದ ನಂತರ, ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದರಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ನಂತಹ ಪ್ರಕರಣಗಳೂ ಸೇರಿರಲಿವೆ.

ಶರದ್ ಕುಮಾರ್ ಯಾರು:ಶರದ್ ಕುಮಾರ್ ಹರಿಯಾಣ ಕೇಡರ್‌ನ 1979ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, 2013 ರಿಂದ 2017ರ ವರೆಗೆ ಎನ್​ಐಎ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ನಂತರ, ಅವರನ್ನು ಕೇಂದ್ರ ಜಾಗೃತ ಆಯೋಗದಲ್ಲಿ ವಿಜಿಲೆನ್ಸ್ ಕಮಿಷನರ್ ಆಗಿ ನೇಮಿಸಲಾಯಿತು. ಅವರು ಜೂನ್ 2018 ರಿಂದ ಏಪ್ರಿಲ್ 2020ರ ವರೆಗೆ ಇದರಲ್ಲಿದ್ದರು.

ಇದನ್ನೂ ಓದಿ:ಕಿವೀಸ್​ ಬ್ಯಾಟರ್​ ರನೌಟ್​ ಆದರೂ ಡೆಡ್​ಬಾಲ್ ನೀಡಿ ಬ್ಯಾಟಿಂಗ್​ಗೆ ಕರೆದ ಅಂಪೈರ್​: ವಾಗ್ವಾದಕ್ಕಿಳಿದ ಟೀಂ ಇಂಡಿಯಾ, ಆಗಿದ್ದೇನು? - Run out controversy

ABOUT THE AUTHOR

...view details