8 Runs in 0 ball:ಕ್ರಿಕೆಟ್ನಲ್ಲಿ ನಿರ್ಮಾಣವಾಗಿರುವ ಕೆಲ ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿಪಡಿಸುತ್ತವೆ. ಅದರಲ್ಲೊಂದು 0 ಬಾಲ್ಗೆ 8 ರನ್ ಬಿಟ್ಟುಕೊಟ್ಟಿರುವುದು. ಈ ದಾಖಲೆ ಏಷ್ಯಾಕಪ್‌ನಲ್ಲಿ ನಿರ್ಮಾಣವಾಗಿದೆ.
2014ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಇದು ಸಂಭವಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾ ಭರ್ಜರಿ ಪ್ರದರ್ಶನ ತೋರಿತ್ತು. 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 326 ರನ್ ಕಲೆ ಹಾಕಿತ್ತು. ಬಾಂಗ್ಲಾ ಪರ ಅನ್ಮೂಲ್ ಹಖ್ 6 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಶತಕ ಸಿಡಿಸಿದ್ದರು. ಇಮ್ರುಲ್ ಕೇಯೆಸ್ (59), ಮಾಮಿನುಲ್ ಹಖ್ (51), ಮಶ್ಪೀಖರ್ ರೆಹಮಾನ್ (51) ಅರ್ಧಶತಕ ಸಿಡಿಸಿ ಪಾಕಿಸ್ತಾನಕ್ಕೆ ಬೃಹತ್ ಮೊತ್ತದ ಗುರಿ ನೀಡಿದ್ದರು.
ಈ ಗುರಿ ಬೆನ್ನತ್ತಿದ ಪಾಕಿಸ್ತಾನ ಕೂಡ ಉತ್ತಮ ಪ್ರದರ್ಶನ ತೋರಿತ್ತು. ಅಹ್ಮದ್ ಶೆಹಜಾದ್ (103) ಶತಕ ಮತ್ತು ಮೊಹ್ಮದ್ ಹಫೀಜ್ (52), ಫಾಹದ್ ಆಲಾಮ್ (74), ಶಾಹೀದ್ ಆಫ್ರಿದಿ (59) ಅರ್ಧಶತಕ ಸಿಡಿಸಿ ಇನ್ನೂ 1 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದ್ರೆ ಈ ಪಂದ್ಯದಲ್ಲಿ ಪಾಕ್ ಬೌಲರ್ ಕಳಪೆ ಪ್ರದರ್ಶನ ತೋರಿ ಕೆಟ್ಟ ದಾಖಲೆ ಬರೆದಿದ್ದರು.
ಬಾಂಗ್ಲಾದೇಶ ಬ್ಯಾಟಿಂಗ್ ವೇಳೆ ಪಾಕ್ ಸ್ಪಿನ್ ಬೌಲರ್ ಅಬ್ದುರ್ ರೆಹಮಾನ್ 0 ಬೌಲ್ಗೆ 8 ರನ್ ಬಿಟ್ಟುಕೊಟ್ಟಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ನಿರ್ಮಾಣವಾಗಿರುವ ಕೆಟ್ಟ ದಾಖಲೆ. ಇದು ಹೇಗೆ ಸಾಧ್ಯವಾಯಿತು? ಎಂಬುದನ್ನು ಈಗ ತಿಳಿಯಿರಿ.