WTC Point Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಮೀಪಿಸುತ್ತಿದ್ದಂತೆ ಅಂಕಪಟ್ಟಿಯಲ್ಲಿ ಬಾರೀ ಬದಲಾವಣೆಗಳಾಗುತ್ತಿವೆ. ಇಲ್ಲಿಯವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ರೇಸ್‌ನಲ್ಲಿ ಮುಂದಿದ್ದವು. ಆದರೆ ಇದೀಗ ಮತ್ತೊಂದು ದೊಡ್ಡ ತಂಡ WTC ಫೈನಲ್ ರೇಸ್ಗೆ ಪ್ರವೇಶ ಮಾಡಿದೆ. ಈ ತಂಡ ಭಾರತ ಮತ್ತು ಆಸ್ಟ್ರೇಲಿಯಾ ಎರಡಕ್ಕೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.
ಹೌದು, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾವನ್ನು 233 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ WTC ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಹರಿಣ ಪಡೆ ಇದೀಗ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿ ಶಾಕ್ ನೀಡಿದೆ. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ಗೂ ಮುನ್ನ ದಕ್ಷಿಣ ಆಫ್ರಿಕಾದ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಸ್ ಶೇಕಡವಾರು ಅಂಕ 54.17 ಆಗಿತ್ತು. ಇದೀಗ 59.25ಕ್ಕೆ ತಲುಪಿದೆ.
A 🔝 victory for 🇿🇦 against Sri Lanka and they move to the second spot in the #WTC25 Table! 🙌🏻
— Star Sports (@StarSportsIndia) November 30, 2024
Can #TeamIndia clinch the #PinkBallTest and stay on TOP? 👀
Watch 2nd Test 👉🏻 #AUSvINDOnStar | FRI, 6 DEC, 8 AM onwards only on Star Sports 1#WTCStandings #WTC #SLvSA pic.twitter.com/6PR4lGzvwQ
ಏತನ್ಮಧ್ಯೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ - ಗವಾಸ್ಕರ್ ಟ್ರೋಫಿ ಕೂಡ ನಡೆಯುತ್ತಿದೆ. ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉಭಯ ತಂಡಗಳು ಐದು ಪಂದ್ಯಗಳ ಸರಣಿ ಆಡುತ್ತಿವೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ಗೆಲುವಿನಿಂದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
WTCಯ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಮತ್ತು ಎರಡನೆಯ ಸ್ಥಾನ ಪಡೆಯುವ ತಂಡಗಳು ಮಾತ್ರ ಫೈನಲ್‌ಗೆ ತಲುಪಲಿವೆ. ವಿಶ್ವ ಟೆಸ್ಟ್ ಚಾಂಪಿಯನ್ಸ್ಶಿಪ್ ಭಾಗವಾಗಿ ದಕ್ಷಿಣ ಆಫ್ರಿಕಾ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ ಶ್ರೀಲಂಕಾ ವಿರುದ್ಧ ಒಂದು ಮತ್ತು ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳು ನಡೆಯಲಿವೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಎಲ್ಲ ಮೂರು ಪಂದ್ಯಗಳನ್ನು ಗೆದ್ದರೆ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಕೇವಲ ಒಂದು ತಂಡ ಮಾತ್ರ ಫೈನಲ್‌ಗೆ ಹೋಗುವ ಸಾಧ್ಯತೆ ಇರುತ್ತದೆ.
WTC ಟಾಪ್ 3 ತಂಡಗಳ ಅಂಕಪಟ್ಟಿ
- ಭಾರತ: ಟೀಂ ಇಂಡಿಯಾ ಇದುವರೆಗೂ ವಿಶ್ವ್ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಒಟ್ಟು ಪಂದ್ಯಗಳನ್ನು ಆಡಿದೆ. ಇದರಲ್ಲಿ 9 ಗೆಲುವ 5 ಸೋಲನುಭವಿಸದೆ. ಶೇಕಡಾವಾರು ಅಂಕ 61.11 ಇದ್ದು ಅಗ್ರಸ್ಥಾನದಲ್ಲಿದೆ.
- ದಕ್ಷಿಣ ಆಫ್ರಿಕಾ: ಪಟ್ಟಿಯಲ್ಲಿ ಹರಿಣ ಪಡೆ ಎರಡನೇ ಸ್ಥಾನಕ್ಕೆ ತಲುಪಿದೆ. ಈ ವರೆಗೂ 9 ಪಂದ್ಯಗಳನ್ನು ಆಡಿದ್ದು 5ರಲ್ಲಿ ಗೆಲುವು, 3ರಲ್ಲಿ ಸೋಲು, 1 ಡ್ರಾಗೊಂಡಿದೆ. 59.26 ಶೇಕಡಾವಾರು ಅಂಕವನ್ನು ಹೊಂದಿದೆ.
- ಆಸ್ಟ್ರೇಲಿಯಾ: ಈ ವರೆಗೂ 13 ಪಂದ್ಯಗಳನ್ನು ಆಡಿರುವ ಆಸೀಸ್, 8ರಲ್ಲಿ ಗೆಲುವ, 4ರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾಗೊಂಡಿದೆ. 57.69 ಶೇಕಡಾವಾರು ಅಂಕದೊಂದಿಗೆ 3ನೇ ಸ್ಥಾನಕ್ಕೆ ತಲುಪಿದೆ.
ಇದನ್ನೂ ಓದಿ: U-19 ಏಷ್ಯಾಕಪ್: ಪಾಕ್ ವಿರುದ್ದ ಭಾರತಕ್ಕೆ ಸೋಲು; ಕೈ ಹಿಡಿಯದ 13 ವರ್ಷದ ಐಪಿಎಲ್ ಬಾಯ್!