ಹೈದರಾಬಾದ್: U-19 ಏಷ್ಯಾಕಪ್ ಟೂರ್ನಿಯ 3ನೇ ಪಂದ್ಯದಲ್ಲೂ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 44 ರನ್‌ಳಿಂದ ಸೋಲನುಭವಿಸಿದೆ. ದುಬೈನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಪಾಕ್ ಪರ ಆರಂಭಿಕ ಬ್ಯಾಟರ್ಗಳಾದ ಉಸ್ಮಾನ್ ಖಾನ್ (60) ಅರ್ಧಶತಕ ಸಿಡಿಸಿ ಮಿಂಚಿದರೇ, ಮತ್ತೊಂದು ತುದಿಯಲ್ಲಿ ಶಾಜೈಬ್ ಖಾನ್ ಭರ್ಜರಿ ಶತಕ ಬಾರಿಸಿದರು. 147 ಎಸೆತಗಳನ್ನು ಎದುರಿಸಿದ ಶಾಜೈಬ್ ಐದು ಬೌಂಡರಿ ಹಾಗೂ ಹತ್ತು ಸಿಕ್ಸರ್‌ಗಳ ಸಹಾಯದಿಂದ 159 ರನ್ ಗಳಿಸಿದರು.
ಉಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ರಿಯಾಜುಲ್ಲಾ 27ರನ್‌ಗಳ ಕೊಡುಗೆ ನೀಡಿದರು. ಉಳಿದ ಬ್ಯಾಟರ್ಗಳು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಆರಂಭಿಕರು ಹಾಕಿದ ಭದ್ರ ಬುನಾದಿಯಿಂದಾಗಿ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 281ರನ್ ಕಲೆಹಾಕಿತು. ಭಾರತದ ಪರ ಬೌಲಿಂಗ್ನಲ್ಲಿ ಸಮರ್ಥ್ ನಾಗರಾಜ್ 3 ಮತ್ತು ಯುಧಾಜಿತ್ ಗುಹಾ, ಕಿರಣ್ ಚೋರ್ಮಲೆ ತಲಾ ಒಂದು ವಿಕೆಟ್ ಪಡೆದರು.
India U19 put a solid fight but lose the match.
— BCCI (@BCCI) November 30, 2024
The team will look to bounce back in their next match 💪 #TeamIndia | #ACC | #ACCMensU19AsiaCup pic.twitter.com/NwFLloJJm9
ಭಾರತಕ್ಕೆ ಆರಂಭಿಕ ಹಿನ್ನಡೆ: 282 ರನ್‌ಗಳ ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಯಯಿತು. ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿದರು. ಮತ್ತೋರ್ವ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ 20 ರನ್, ನಾಯಕ ಮೊಹ್ಮದ್ 16 ರನ್ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ಭಾರತ 82 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು.
ಆದರೆ ಆಲ್ರೌಂಡರ್ ನಿಖಿಲ್ ಕುಮಾರ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. 77 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 67 ರನ್ ಚಚ್ಚಿದರು. ಅಹ್ಮದ್ ಖಾನ್ ಬೌಲಿಂಗ್ನಲ್ಲಿ ನಿಖಿಲ್ ಸ್ಟಂಪ್ ಆದ ಕಾರಣ ಟೀಂ ಇಂಡಿಯಾ ಗೆಲುವಿನಿಂದ ವಂಚಿತವಾಯಿತು. ಉಳಿದಂತೆ ಕಿರಣ್ (20), ಹರ್ವಂಶ್ ಸಿಂಗ್ (26) ಕೊನೆಯಲ್ಲಿ ಮೊಹಮ್ಮದ್ ಅನನ್ 30 ರನ್‌ಗಳ ಇನ್ನಿಂಗ್ಸ್ ಆಡಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಪಾಕ್ ಪರ ಅಲಿ ರಾಜಾ 3, ಅಬ್ದುಲ್ ಸುಭಾನ್, ಫಹಾಮುಲ್ ತಲಾ 2, ನವೀದ್ ಅಹ್ಮದ್ ಮತ್ತು ಉಸ್ಮಾನ್ ಖಾನ್ ತಲಾ ಒಂದು ವಿಕೆಟ್ ಕಿತ್ತರು.
Pakistan U19 begin their #ACCMensU19AsiaCup campaign on a winning note! 🏏
— Pakistan Cricket (@TheRealPCB) November 30, 2024
43-run victory achieved over India U19 💪#PAKvIND | #PakistanFutureStars pic.twitter.com/N3RcMEscfZ
3ನೇ ಸ್ಥಾನಕ್ಕೆ ಭಾರತ: 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎ ಗುಂಪಿನ ಪಂದ್ಯದ ನಂತರ ಪಾಯಿಂಟ್‌ಗಳ ಪಟ್ಟಿಯನ್ನು ನೋಡುವುದಾದರೆ, ಆತಿಥೇಯ ಯುಎಇ ತಂಡವು 2 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ. ಈ ಪಂದ್ಯದ ಸೋಲಿನ ನಂತರ ಭಾರತ ಮೂರನೇ ಸ್ಥಾನಕ್ಕೆ ತಲುಪಿದೆ. ಜಪಾನ್ ತಂಡ ಕೊನೆಯ ಸ್ಥಾನದಲ್ಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಡಿಸೆಂಬರ್ 2 ರಂದು ಜಪಾನ್ ವಿರುದ್ಧ ಆಡಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಹು ಡೊಡ್ಡ ಆಘಾತ: 2ನೇ ಟೆಸ್ಟ್ನಿಂದ ಪ್ರಮುಖ ಬೌಲರ್ ಔಟ್, ಸಂಕಷ್ಟದಲ್ಲಿ ಕಾಂಗರೂ ಪಡೆ!