Korean Skin Care Tips in Kannada: ಕೊರಿಯನ್ ಮಹಿಳೆಯರ ಮುಖವು ಸುಂದರ ಹಾಗೂ ಮತ್ತು ಅಮೃತಶಿಲೆಯ ರೀತಿ ಹೊಳೆಯುತ್ತದೆ. 40 ಹರೆಯದಲ್ಲೂ ತಿರುಗಿ ನೋಡುವಂತಹ ಸೌಂದರ್ಯ ಅವರದು, ಅದಕ್ಕಾಗಿಯೇ ಕೊರಿಯನ್ ಸೌಂದರ್ಯದ ಗೀಳು ಹಾಗೂ ಅವರಂತಹ ಹೊಳಪಿನ ಮುಖವನ್ನು ಹೊಂದಲು ಬಯಸುವ ಅನೇಕ ಹುಡುಗಿಯರು ನಮ್ಮಲ್ಲಿ ಇದ್ದಾರೆ. ಅದಕ್ಕಾಗಿಯೇ ಭಾರತದಲ್ಲಿರುವ ಜನರು ಕೇವಲ ಕೊರಿಯನ್ ಸಿನಿಮಾಗಳನ್ನು ನೋಡುವುದು ಕಡಿಮೆ. ಆದರೆ, ಕೊರಿಯನ್ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ನೀವೂ ಸಹ ಕೊರಿಯನ್ ಸುಂದರಿಯಂತೆ ಕಾಣಲು ಬಯಸುತ್ತೀರಾ? ಹಾಗಾದ್ರೆ, ಈ ಟಿಪ್ಸ್ ಪಾಲಿಸಿದರೆ ಒಳ್ಳೆಯದು ಎಂದು ತಿಳಿಸುತ್ತಾರೆ ತಜ್ಞರು.
- ಕೊರಿಯನ್ ಯುವತಿಯರು ತಮ್ಮ ತ್ವಚೆಯನ್ನು ಅಮೃತಶಿಲೆ ರೀತಿ ಹೊಳೆಯುವಂತೆ ಮಾಡಲು ಸಾಕಷ್ಟು ಸ್ಟೀಮಿಂಗ್ (ಹಬೆ) ಮಾಡುತ್ತಾರೆ. ಮುಖಕ್ಕೆ ಹಬೆ ತೆಗೆದುಕೊಳ್ಳುವುದರಿಂದ ಚರ್ಮದ ಗ್ರಂಥಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕಲ್ಮಶಗಳು ಸುಲಭವಾಗಿ ಹೊರಬರುತ್ತವೆ. ಮಸಾಜ್ ಮಾಡಿದ ನಂತರ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಚರ್ಮವು ಮೃದುವಾಗುತ್ತದೆ. ತಜ್ಞರು ಹೇಳುವಂತೆ ಕೊರಿಯಾದ ಮಹಿಳೆಯರು ತಮ್ಮ ತ್ವಚೆಯನ್ನು ಯೌವನ ಮತ್ತು ಆರೋಗ್ಯಕರವಾಗಿ ಕಾಣಲು ಸಾಮಾನ್ಯವಾಗಿ ಮುಖದ ವ್ಯಾಯಾಮ ತಪ್ಪದೇ ಮಾಡುತ್ತಾರೆ. ಅದೇನೆಂದರೆ.. ತುಟಿಗಳನ್ನು ಕರ್ಲಿಂಗ್ ಮಾಡುವುದು, ನಗುಮುಖದಿಂದ ತಲೆಯೆತ್ತಿ ನೋಡುವುದು ಹೀಗೆ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಇವುಗಳಿಂದ ಮುಖಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ ಎನ್ನುತ್ತಾರೆ ತಜ್ಞರು.
- ಕೊರಿಯನ್ ಮಹಿಳೆಯರು ಗಾಜಿನ ಚರ್ಮಕ್ಕಾಗಿ ಡಬಲ್ ಕ್ಲೆನ್ಸಿಂಗ್ ಮಾಡುತ್ತಾರೆ. ನಂತರ ಮೈಕೆಲ್ಲರ್ ವಾಟರ್ ಅಥವಾ ಆಯಿಲ್ ಕ್ಲೆನ್ಸರ್ನಿಂದ ಮುಖವನ್ನು ಸ್ವಚ್ಛಗೊಳಿಸಿ. ಇದು ತ್ವಚೆಯಲ್ಲಿ ಸಂಗ್ರಹವಾಗಿರುವ ಕೊಳೆ ತೆಗೆದು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
- ನೆನೆಸಿದ ಅಕ್ಕಿ ನೀರನ್ನು ಚರ್ಮಕ್ಕೆ ನೈಸರ್ಗಿಕ ಟೋನರ್ ಆಗಿ ಬಳಸಲಾಗುತ್ತದೆ ಹಾಗೂ ತಾಜಾತನಕ್ಕಾಗಿ ಪೇಸ್ ಪ್ಯಾಕ್ಗಳನ್ನು ಹಾಕಲಾಗುತ್ತದೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.
ಮತ್ತಷ್ಟು ಟಿಪ್ಸ್:
- ಕೊರಿಯನ್ನರು ತಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಸುಕ್ಕುಗಳು ಮತ್ತು ಹಾನಿಯನ್ನು ತಡೆಯಲು ಸನ್‌ಸ್ಕ್ರೀನ್ ಲೋಷನ್ ಅನ್ನು ಪ್ರತಿದಿನ ಬಳಸಲಾಗುತ್ತದೆ. ಸನ್‌ಸ್ಕ್ರೀನ್ ಅನ್ನು ಸಾಮಾನ್ಯ ದಿನಗಳಲ್ಲಿಯೂ ಅವರು ಬಳಕೆ ಮಾಡುತ್ತಾರೆ.
- ಕೊರಿಯಾದ ಮಹಿಳೆಯರು ಹೆಚ್ಚಿನ ಫೈಬರ್ ಮತ್ತು ಪೌಷ್ಟಿಕಾಂಶದ ಮೌಲ್ಯ ಹೊಂದಿರುವ ಆಹಾರವನ್ನು ಸೇವಿಸುತ್ತಾರೆ. ಏಕೆಂದರೆ.. ಇವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಬೇಗ ಹಸಿವಾಗದಂತೆ ಮಾಡುತ್ತದೆ. ಹೆಚ್ಚಿನ ಕ್ಯಾಲೋರಿಗಳನ್ನು ನೀಡಿದರೆ ದೇಹವು ಚೈತನ್ಯಯುತವಾಗಿ ಇರುತ್ತದೆ.
- ಪರಿಪೂರ್ಣ ಆರೋಗ್ಯ ನೀಡುವ ಈ ರೀತಿಯ ಆಹಾರದಿಂದ ಜೀರ್ಣಶಕ್ತಿಯೂ ಉತ್ತಮ ಆಗಿರುತ್ತದೆ.. ಬಿಪಿ, ಶುಗರ್, ಕೆಟ್ಟ ಕೊಲೆಸ್ಟ್ರಾಲ್ ಇತ್ಯಾದಿಗಳು ಬಾಧಿಸುವುದಿಲ್ಲ. ಇದೆಲ್ಲವೂ ಅವರ ತ್ವಚೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
- ಕೊರಿಯನ್ನರು ಸಾಂಪ್ರದಾಯಿಕ ಆಹಾರ ಪದ್ಧತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ತಾಜಾ ತರಕಾರಿಗಳಿಗೆ ಮೊದಲ ಆದ್ಯತೆ ಕೊಡುತ್ತಾರೆ. ಕಿಮ್ಚಿ ಎಂದು ಕರೆಯಲ್ಪಡುವ ನೆನೆಸಿದ ಎಲೆಕೋಸು ಅನ್ನದೊಂದಿಗೆ ತಿನ್ನಲಾಗುತ್ತದೆ.
- ಮೊಟ್ಟೆ, ಮಾಂಸ, ಮೀನು, ಗೋಧಿ ರಹಿತ ಪ್ಯಾನ್‌ಕೇಕ್‌ಗಳು ಮತ್ತು ನೂಡಲ್ಸ್‌ಗಳನ್ನು ಅವರ ಆಹಾರದಲ್ಲಿ ಸೇರಿರುತ್ತದೆ. ಕೆಲವು ಸಂದರ್ಭಗಳಲ್ಲಿ ಊಟವು ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸುತ್ತಾರೆ. ಅವರು ಡೈರಿ ಉತ್ಪನ್ನಗಳು, ಐಸ್ ಕ್ರೀಮ್, ಪಾಸ್ತಾ, ಬೇವು ಮತ್ತು ಎಣ್ಣೆ ಆಧಾರಿತ ಉತ್ಪನ್ನಗಳಿಂದ ದೂರವಿರುತ್ತಾರೆ ಎಂದು ತಜ್ಞರು ತಿಳಿಸುತ್ತಾರೆ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 9ಗಂಟೆಯೊಳಗೆ ಈ ಐದು ಕೆಲಸ ಮಾಡಿದರೆ, ದೇಹವು ನಿರ್ವಿಶೀಕರಣ ಆಗುತ್ತೆ!