ETV Bharat / state

ದಾವಣಗೆರೆ ಥೀಮ್ ಪಾರ್ಕ್ ಸಿದ್ಧ: ಡಿಸೆಂಬರ್​​ 1ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ, ಟಿಕೆಟ್ ದರ ಹೀಗಿದೆ - DAVANAGERE THEME PARK

5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ದಾವಣಗೆರೆ ಥೀಮ್​ ಪಾರ್ಕ್​ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿದ್ದು, ಜನರಿಗೆ ಹೊರೆಯಾಗದಂತೆ ಟಿಕೆಟ್​ ದರ ನಿಗದಿಪಡಿಸಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೂರುಲ್ಲಾ ಅವರ ವಿಶೇಷ ವರದಿ.

Davanagere Theme Park
ದಾವಣಗೆರೆ ಥೀಮ್ ಪಾರ್ಕ್ (ETV Bharat)
author img

By ETV Bharat Karnataka Team

Published : Nov 30, 2024, 7:21 PM IST

Updated : Nov 30, 2024, 8:05 PM IST

ದಾವಣಗೆರೆ: ದಾವಣಗೆರೆ ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಥೀಮ್ ಪಾರ್ಕ್ ಸಿದ್ಧವಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಂದೂವರೆ ಎಕರೆಯಲ್ಲಿ ನಿರ್ಮಾಣ ಆಗಿರುವ ಥೀಮ್ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ಹಾಗೂ ಗ್ರೀಕ್ ಶೈಲಿಯ ಬಯಲು ರಂಗಮಂದಿರದ ಬಳಕೆಗೆ ಇಂದಿನಿಂದ (ಡಿ.1) ಅವಕಾಶ ಕಲ್ಪಿಸಲಾಗಿದೆ.

ಶಾಲಾ ಮಕ್ಕಳಿಗೂ ಉಪಯುಕ್ತವಾಗಿರುವ ಈ ಪಾರ್ಕ್​ಗೆ ಬೆಳಗ್ಗೆ 10 ರಿಂದ ಸಂಜೆ 6 ರ ತನಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ‌ಇನ್ನು ಟಿಕೆಟ್ ದರವನ್ನು ಜನರಿಗೆ ಹೊರೆಯಾಗದಂತೆ ಪುಟ್ಟ ಮಕ್ಕಳಿಗೆ 10 ರೂ. ಹಾಗೂ ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ದಾವಣಗೆರೆ ಥೀಮ್ ಪಾರ್ಕ್ (ETV Bharat)

ಆಕರ್ಷಕ ಕಲಾಕೃತಿಗಳು: ಥೀಮ್ ಪಾರ್ಕ್​​​ನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಗ್ರಾಮೀಣ ಜನರ ಬದುಕು, ದೇಸಿ ಕ್ರೀಡೆಗಳ ಕಲರವ, ದಾವಣಗೆರೆ ಜನರ ಸಂಪ್ರಾಯದ, ಗ್ರಾಮೀಣ ಪರಿಸರದ ವೈವಿಧ್ಯ ಜೀವನಶೈಲಿ ಬಿಂಬಿಸುವ ಮಕ್ಕಳ ಗ್ರಾಮೀಣ ಕ್ರೀಡೆ, ಜಾನಪದ ಕಲೆ ಎಲ್ಲವನ್ನೂ ಕಲಾವಿದರು ಕಲಾಕೃತಿಗಳ ಮೂಲಕ ಕಟ್ಟಿಕೊಡಲಾಗಿದೆ. ದುಗ್ಗಮ್ಮನ‌ ಜಾತ್ರೆ ವೇಳೆ ದೇವಿ ಪೂಜೆಗೆ ಹೊರಡುವ ಮೆರವಣಿಗೆ, ಕುಂಭ ಹೊತ್ತ ಮಹಿಳೆಯರು, ದೀಡ್ ನಮಸ್ಕಾರ ಹಾಕ್ತಿರುವ ಭಕ್ತರ ಕಲಾಕೃತಿಗಳು ಆಕರ್ಷಿಸುತ್ತಿವೆ. ಟಗರುಗಳು ಹುಡ್ಡಿ ಆಡ್ತಿರುವುದು, ಕುರಿ ಕಾಳಗ ಜನ ವೀಕ್ಷಣೆ ಮಾಡುತ್ತಿರುವ ಶೈಲಿ, ಕಾಳಗ ವೇಳೆ ಯಜಮಾನ್ರು, ಯುವಕರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದು, ಕುಸ್ತಿ ಅಖಾಡದಲ್ಲಿ ಸೆಣಸಾಟ ನಡೆಸುತ್ತಿರುವ ಪೈಲ್ವಾನ್​ಗಳು, ಅಪ್ಪಿಕೋ ಚಳವಳಿ, ಕಬಡ್ಡಿ ಆಟ ಆಡುತ್ತಿರುವುದು, ಹಗ್ಗ ಜಿಗಿದಾಟ, ಕುಂಟೆಬಿಲ್ಲೆ‌, ಚಿನ್ನಿದಾಂಡು, ಯೋಗಾಸನ, ದೊಡ್ಡಾಟ‌, ಹುಲಿ ಕುಣಿತ, ತಮಟೆ ವಾದ್ಯ, ಗೊಂದಲಿಗರು, ಸೂತ್ರದ ಗೊಂಬೆ ಆಟ, ಜೋಗತಿ ಎಲ್ಲಮ್ಮ, ಜಾನಪದ ಹಾಡುವವರು, ಲಂಬಾಣಿ ನೃತ್ಯ ಮಾಡುತ್ತಿರುವ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿರುವ ಒಂದೊಂದು ಕಲಾಕೃತಿಗಳು ಒಂದೊಂದು ಸಂದೇಶ ಸಾರುತ್ತಿವೆ.

Davanagere Theme Park Artwork
ದಾವಣಗೆರೆ ಥೀಮ್ ಪಾರ್ಕ್ ಕಲಾಕೃತಿ (ETV Bharat)

ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ. ಡಿ. ಕುಂಬಾರ ಅವರು ಪ್ರತಿಕ್ರಿಯಿಸಿ "ದೃಶ್ಯ ಕಲಾ ಮಹಾವಿದ್ಯಾಲಯ ಕಾಲೇಜು ಆವರಣದಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಈ ಥೀಮ್ ಪಾರ್ಕ್ ಸಿದ್ಧಪಡಿಸಲಾಗಿದೆ. ಡಿ.1 ರಿಂದ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಗ್ರೀಕ್‌ ಶೈಲಿಯ ಬಯಲು ರಂಗಮಂದಿರ ಬಳಕೆಗೆ ಅವಕಾಶ ಕಲ್ಪಿಸುತ್ತೇವೆ" ಎಂದರು.

ಕುಡಿಯುವ ನೀರು, ಶೌಚಗೃಹಗಳ ವ್ಯವಸ್ಥೆ: "ಥೀಮ್ ಪಾರ್ಕ್ ದಾವಣಗೆರೆ ಜಿಲ್ಲೆಯ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪಾರ್ಕ್ ಹೊರಭಾಗದಲ್ಲಿ ಉಪಹಾರ ಸೇವಿಸಲು ಕ್ಯಾಂಟೀನ್ ನಿರ್ಮಿಸಲು ಚಿಂತಿಸಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಜೋಗದಲ್ಲಿ ಬರಲಿದೆ ಗ್ಲಾಸ್​​ ಹೌಸ್​, ರೈನ್​ ಡ್ಯಾನ್ಸ್, ವಂಡರ್​ಲಾದಂತಹ ವಾಟರ್​​ ಪಾರ್ಕ್!

Last Updated : Nov 30, 2024, 8:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.