ETV Bharat / bharat

ಗಣತಂತ್ರ ದಿನದಲ್ಲಿ ಮಿಂಚಿದ 'ಮನ್​​ ಕಿ ಬಾತ್​'ನಲ್ಲಿ ಪ್ರಸ್ತಾಪಿಸಲಾದ ಸಾಧಕರು - SPOTLIGHT ON MANN KI BAAT

ಪ್ರಧಾನಿ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾದ ಸಾಧಕರನ್ನು ಗಣತಂತ್ರ ದಿವಸ ಆಚರಣೆಗೆ ಆಹ್ವಾನಿಸಲಾಗಿತ್ತು.

ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಸಾಧಕರು
ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಸಾಧಕರು (ANI)
author img

By PTI

Published : Jan 26, 2025, 9:27 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್​ನಲ್ಲಿ ಪ್ರಸ್ತಾಪಿಸಿದ ಸಾಧಕರು ಮತ್ತು ತೆರೆಮರೆಯ ಸಾಧಕರು ಭಾನುವಾರ ಇಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದರು.

ಕರ್ತವ್ಯ ಪಥದಲ್ಲಿ ನಡೆದ ದೇಶದ ಸಾಂಸ್ಕೃತಿಕತೆಯನ್ನು ಬಿಂಬಿಸುವ ಮೆರವಣಿಗೆಯ ಕಾರ್ಯಕ್ರಮದಲ್ಲಿ ಸುಮಾರು 400 ಮಂದಿ ಪಾಲ್ಗೊಂಡಿದ್ದರು. ಎಲ್ಲ ಸಾಧಕರನ್ನು ಸರ್ಕಾರವು ಗಣರಾಜ್ಯೋತ್ಸವ ಕಾಯಕ್ರಮಕ್ಕೆ ಆಹ್ವಾನ ನೀಡಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾದ ಗಣ್ಯರು ಗಣರಾಜ್ಯೋತ್ಸವ ದಿನದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅತಿಥಿಗಳಿಗೆ ಆಕಾಶವಾಣಿ ಭವನದಲ್ಲಿ ಊಟದ ಆತಿಥ್ಯ ನೀಡಲಾಯಿತು. ಮನ್ ಕಿ ಬಾತ್ ಮೂಲಕ ದೇಶಾದ್ಯಂತ ನಡೆಯುತ್ತಿರುವ ಉತ್ತಮ ಕಾರ್ಯಗಳು ಜಾಗತಿಕ ವೇದಿಕೆಗೆ ತಲುಪಿವೆ ಎಂದು ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳನ್ನು ಗುರುತಿಸಲು ಮನ್​ ಕಿ ಬಾತ್​ ಉತ್ತಮ ವೇದಿಕೆಯಾಗಿದೆ. ಪ್ರಧಾನಿ ಮೋದಿ ಅವರು ಈ ತೆರೆಮರೆಯ ಸಾಧಕರನ್ನು ಹೆಕ್ಕಿ ತೆಗೆದು ಅವರನ್ನು ದೇಶವಾಸಿಗಳಿಗೆ ಪರಿಚಯಿಸುತ್ತಿದ್ದಾರೆ. ಇದಕ್ಕಾಗಿ ನಾನು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಸೆಹಗಲ್, ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ಮತ್ತು ಆಕಾಶವಾಣಿ ಮಹಾನಿರ್ದೇಶಕ ಪ್ರಜ್ಞಾ ಪಲಿವಾಲ್ ಗೌರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಶ್ರೀನಗರದಲ್ಲಿ 6 ವರ್ಷಗಳ ಬಳಿಕ ಹಾರಾಡಿದ ರಾಷ್ಟ್ರಧ್ವಜ : ಧ್ವಜಾರೋಹಣ ಮಾಡಿದ ಡಿಸಿಎಂ ಸುರೀಂದರ್​ ಚೌಧರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.