ETV Bharat / state

ವಿದೇಶದಲ್ಲಿದ್ದ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಆಸ್ತಿ ವರ್ಗಾವಣೆಯಾದಲ್ಲಿ ಅವರ ಪಾತ್ರ ನಿರಾಕರಿಸಲಾಗದು: ಹೈಕೋರ್ಟ್ - HIGH COURT

ವಿದೇಶದಲ್ಲಿದ್ದ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಆಸ್ತಿ ವರ್ಗಾವಣೆಯಾದಲ್ಲಿ ಅವರ ಪಾತ್ರವನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Dec 1, 2024, 7:34 AM IST

ಬೆಂಗಳೂರು: ವಿದೇಶದಲ್ಲಿರುವ ವ್ಯಕ್ತಿ ಸೇರಿ ಮತ್ತಿತರರ ಹೆಸರಿಗೆ ಅಕ್ರಮವಾಗಿ ಆಸ್ತಿ ವರ್ಗಾವಣೆಯಾಗಿದ್ದು, ಅದರ ಕಡತಗಳು ನಾಪತ್ತೆಯಾಗಿದ್ದಲ್ಲಿ ಆ ವ್ಯಕ್ತಿಯ ಪಾತ್ರವನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೇಲೂರು ತಾಲೂಕಿನ ಜಯಪ್ರಕಾಶ್ ಎಂ. ಆರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆಸ್ತಿ ಖುಲಾಸೆ ಪತ್ರ ಸಿದ್ಧಗೊಂಡ ದಿನದಂದು ಅರ್ಜಿದಾರರು ವಿದೇಶದಲ್ಲಿದ್ದಾರೆ. ಆಸ್ತಿ ವರ್ಗಾವಣೆಯಾದ 2023ರ ಜನವರಿ 1ರಂದು ಅವರು ಭಾರದಲ್ಲಿಯೇ ಇದ್ದರು. ಈ ಕುರಿತ ಆಸ್ತಿ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗ ಕಂದಾಯ ಇಲಾಖೆಯಲ್ಲಿ ಕಾಣೆಯಾಗಿವೆ ಮತ್ತು ಅದರ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಇಲಾಖಾ ವಿಚಾರಣೆ ನಡೆಯುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದರೆ ಅರ್ಜಿದಾರರು ವಿದೇಶದಲ್ಲಿದ್ದರೂ ನಿರಪರಾಧಿ, ಈ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂಬ ವಾದವನ್ನು ಒಪ್ಪಲಾಗದು ಎಂದು ಪೀಠ ತಿಳಿಸಿದೆ.

ಅಲ್ಲದೆ, ಆಸ್ತಿಯ ದಾಖಲೆಗಳು ಅರ್ಜಿದಾರರ ಹೆಸರಿನಲ್ಲಿದ್ದು, ಅವು ಕಾಣೆಯಾಗಿವೆ. ಈ ಪ್ರಕ್ರಿಯೆಯಲ್ಲಿ ಅರ್ಜಿದಾರರ ಪಾತ್ರ ಏನು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ಎಲ್ಲ ಆರೋಪಿಗಳು ಆಸ್ತಿ ಖುಲಾಸೆ ಒಪ್ಪಂದ ಮಾಡಿಕೊಳ್ಳಲು ಕೈ ಜೋಡಿಸಿದ್ದಾರೆ. ದೂರುದಾರರ ತಂದೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಅರ್ಜಿದಾರರ ಮತ್ತವರ ಸಹೋದರನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲಾಗಿದೆ. ಎಲ್ಲ ಆರೋಪಿಗಳು ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಈ ಕೃತ್ಯವೆಸಗಿದ್ದಾರೆ. ಆರೋಪ ಪಟ್ಟಿಯಲ್ಲಿಯೂ ಎಲ್ಲ ಆರೋಪಿಗಳು ದೂರುದಾರರಿಗೆ ವಂಚಿಸಿದ್ದಾರೆ ಎಂಬ ಅಂಶ ಸ್ಪಷ್ಟವಾಗಿದೆ.

ಜೊತೆಗೆ, ತಪ್ಪು ಮಾಹಿತಿ ನೀಡಿ ಜಮೀನನ್ನು ಮತ್ತೊಬ್ಬರ ಹೆಸರಿಗೆ ಮಾಡಿರುವ ಆರೋಪದಲ್ಲಿ ದೂರುದಾರರು ಸ್ವಂತ ತಂದೆಯ ವಿರುದ್ಧವೂ ದೂರು ನೀಡಿದ್ದಾರೆ. ಆದರೆ, ಆಸ್ತಿ ಮಾತ್ರ ಅರ್ಜಿದಾರ ಮತ್ತವರ ಸಹೋದರನ ಪರವಾಗಿ ವರ್ಗಾವಣೆಯಾಗಿದೆ. ಆದ್ದರಿಂದ ಈ ಅಕ್ರಮ ಆರೋಪದ ಪ್ರಕ್ರಿಯೆ ಅರ್ಜಿದಾರರು ಭಾಗಿಯಾಗಿದ್ದಾರೆ ಅಥವಾ ಇಲ್ಲವೇ ಎಂಬುದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಸಾಬೀತು ಪಡಿಸಿಕೊಳ್ಳಬೇಕು. ಅದರ ಹೊರತಾಗಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಅರ್ಜಿದಾರರನ್ನು ಪ್ರಕರಣದಿಂದ ಕೈ ಬಿಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ನವೀನ್ ಎಂಬುವರ ಅಜ್ಜ ಸಿದ್ದೇಗೌಡ ಮತ್ತು ಅರ್ಜಿದಾರರ ತಂದೆ ರೇವಣ್ಣ ಎಂಬುವರು ಜಂಟಿಯಾಗಿ ಎರಡು ಸರ್ವೇ ಸಂಖ್ಯೆಗಳಲ್ಲಿ 0.39 ಗುಂಟೆ ಜಮೀನನ್ನು ಖರೀದಿಸಿದ್ದರು. ಆದರೆ, ಸಿದ್ದೇಗೌಡ 1996ರ ಏಪ್ರಿಲ್ 25ರಂದು ಮೃತಪಟ್ಟಿದ್ದರು. ಈ ನಡುವೆ ಸಿದ್ದೇಗೌಡನ ಮಗ ಕಲ್ಯಾಣ್ ಕುಮಾರ್ (ದೂರುದಾರರ ತಂದೆ) ಅರ್ಜಿದಾರರೊಂದಿಗೆ ಸೇರಿ, ತಾನೇ ಸಿದ್ದೇಗೌಡ ಎಂಬುದಾಗಿ ಹೇಳಿ 2007ರಲ್ಲಿ ಆ ಜಮೀನಿನ ಹಕ್ಕು ಖುಲಾಸೆ ಪತ್ರ ಸೃಷ್ಟಿಸಿ 0.39 ಗುಂಟೆ ಜಮೀನನ್ನು ರೇವಣ್ಣನವರ ಮಕ್ಕಳಾದ ಎಂ.ಆರ್.ವಿಶ್ವೇಶಯ್ಯ ಮತ್ತು ಎಂ.ಆರ್.ಜಯಪ್ರಕಾಶ್ ಅವರ ಹೆಸರಿಗೆ ಮಾಡಿಸಿರುತ್ತಾರೆ. ಈ ಹೆಸರುಗಳು ಪಹಣಿಯಲ್ಲಿಯೂ ಉಲ್ಲೇಖವಾಗಿದೆ.

ಸಿದ್ದೇಗೌಡ ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಲ್ಲಿ ಅರ್ಜಿದಾರ ಜಯಪ್ರಕಾಶ್ ಮತ್ತಿತರರು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪದಲ್ಲಿ 2019ರ ಆಗಸ್ಟ್ 2 ರಂದು ನವೀನ್ ಕುಮಾರ್ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧ ಪೊಲೀಸರು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು 2005ರಿಂದ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2006ರ ಜೂನ್ ತಿಂಗಳಿನಿಂದ 2008ರ ಡಿಸೆಂಬರ್ ವರೆಗೂ ಭಾರತಕ್ಕೆ ಭೇಟಿ ನೀಡಿಲ್ಲ. ಅಲ್ಲದೆ, ವಿದೇಶದಲ್ಲಿರುವ ಸಂಬಂಧದ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೂ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಪ್ರಕರಣ ಸಿವಿಲ್ ಪ್ರಕರಣವಾಗಿದ್ದು, ಈ ಸಂಬಂಧ ದಾಖಲಾಗಿರುವ ಪ್ರಕರಣ ವಿಚಾರಣಾ ಹಂತದಲ್ಲಿದೆ. ಈ ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿಯೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಕಿರುಕುಳ ನೀಡುವ ತಂತ್ರಗಾರಿಕೆಯಾಗಿದೆ. ಆದ್ದರಿಂದ ಅರ್ಜಿಯನ್ನು ಪರಿಗಣಿಸಿ ಪ್ರಕರಣದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಇದನ್ನೂ ಓದಿ: 13 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆ ; 242.5 ಕೋಟಿ ಮೌಲ್ಯದ ಆಸ್ತಿ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.