BMW MOTORRAD INDIA: ಪ್ರೀಮಿಯಂ ಬೈಕ್ ತಯಾರಕ BMW Motorrad India ತನ್ನ ಎಲ್ಲಾ ಮಾದರಿಗಳ ಬೆಲೆಯನ್ನು ಜನವರಿ 1, 2025 ರಿಂದ ಶೇಕಡಾ 2.5 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಒಟ್ಟಾರೆ ಇನ್‌ಪುಟ್ ವೆಚ್ಚಗಳು ಮತ್ತು ಹಣದುಬ್ಬರದ ಒತ್ತಡದಿಂದಾಗಿ ತನ್ನ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ.
ಪರಿಷ್ಕೃತ ಬೆಲೆಗಳು BMW ಇಂಡಿಯಾ ಪೋರ್ಟ್‌ಫೋಲಿಯೊದಲ್ಲಿನ ಎಲ್ಲಾ ಮಾದರಿಗಳ ಎಕ್ಸ್-ಶೋರೂಂ ಬೆಲೆಗಳಿಗೆ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. BMW Motorrad ಇಂಡಿಯಾ ಅಧಿಕೃತವಾಗಿ BMW ಗ್ರೂಪ್‌ನ ಭಾರತೀಯ ಅಂಗಸಂಸ್ಥೆಯ ಭಾಗವಾಗಿ ಏಪ್ರಿಲ್ 2017 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
BMW Motorrad ಇಂಡಿಯಾ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಥಳೀಯವಾಗಿ ಉತ್ಪಾದಿಸಲಾದ 310 ಮಾಡೆಲ್, BMW G 310 R, BMW G 310 GS ಮತ್ತು BMW G 310 RR ಮಾದರಿಗಳನ್ನು ಮಾರಾಟ ಮಾಡುತ್ತಿದೆ.. ಇದರ ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (CBU) ಲೈನ್‌ಅಪ್‌ನಲ್ಲಿ M ಮಾಡೆಲ್‌ಗಳು, ಅಡ್ವೆಂಚರ್ ಮೋಟಾರ್ ಸೈಕಲ್‌ಗಳು, ರೋಡ್‌ಸ್ಟರ್‌ಗಳು, ಟೂರಿಂಗ್ ಬೈಕ್‌ಗಳು ಮತ್ತು ಇತರ ಅನೇಕ ಮೋಟಾರ್ ಸೈಕಲ್‌ಗಳು ಸೇರಿವೆ. ಇದಲ್ಲದೆ, ಕಂಪನಿಯು CE 02 ಮತ್ತು CE 04 ಹೆಸರಿನ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸಹ ಮಾರಾಟ ಮಾಡುತ್ತದೆ.
ಪ್ರಸ್ತುತ, ಭಾರತದಲ್ಲಿನ ಎಲ್ಲಾ BMW ದ್ವಿಚಕ್ರ ವಾಹನಗಳು ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ. ಭಾರತದಲ್ಲಿ ಕಂಪನಿಯ ಕೊನೆಯ ದ್ವಿಚಕ್ರ ವಾಹನವೆಂದರೆ CE 02 ಎಲೆಕ್ಟ್ರಿಕ್ ಸ್ಕೂಟರ್, ಇದರ ಬೆಲೆ ರೂ 4.50 ಲಕ್ಷ (ಎಕ್ಸ್ ಶೋ ರೂಂ). ಅಗ್ಗದ BMW ದ್ವಿಚಕ್ರ ವಾಹನ BMW G 310 R ಆಗಿದೆ. ಇದರ ಬೆಲೆ 2.90 ಲಕ್ಷ ರೂ. ಇದೆ. ಕಂಪನಿಯ ಅತ್ಯಂತ ದುಬಾರಿ ಮೋಟಾರ್ ಸೈಕಲ್ M1000 RR ಆಗಿದೆ. ಇದರ ಬೆಲೆ 49 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇದೆ.
ಓದಿ: ಮೊಟೊ ಎಐ ಬೀಟಾ ಪ್ರೋಗ್ರಾಂ ಘೋಷಿಸಿದ ಮೊಟೊರೊಲಾ, ಭಾರತದಲ್ಲಿಯೂ ಲಭ್ಯ