Nitish Kumar Reddy:ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ.
ಬಲಿಷ್ಟ ಆಸ್ಟ್ರೇಲಿಯನ್ ಬೌಲಿಂಗ್ ಪಡೆ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿರುವ ನಿತೀಶ್ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ 83ನೇ ಓವರ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಅರ್ಧಶತಕ ಪೂರೈಸಿದರು. ಮಿಚೆಲ್ ಸ್ಟಾರ್ಕ್ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. 50ರನ್ ಪೂರ್ಣಗೊಳಿಸುತ್ತಿದ್ದಂತೆ ನಿತೀಶ್ ಪುಷ್ಪ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಬಿಸಿಸಿಐ ಕೂಡ ನಿತೀಶ್ ಅವರ ಪೋಸ್ಟ್ ಹಂಚಿಕೊಂಡಿದ್ದು, ನಿತೀಶ್ ಫ್ಲವರ್ ಅಲ್ಲ ಫೈರ್ ಎಂದು ಬರೆದುಕೊಂಡಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟರ್ಗಳಿಗೂ ಆಕರ್ಷಿಸಿದೆ. ಈ ಹಿನ್ನೆಲೆ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಪುಷ್ಪ ಶೈಲಿಯಲ್ಲಿ ಸಂಭ್ರಮಿಸುವುದನ್ನು ಆಗಾಗ ಕಾಣಬಹುದಾಗಿದೆ. ಇತ್ತೀಚೆಗೆ ಪುಷ್ಪ ಸಿನಿಮಾದ ಎರಡನೇ ಭಾಗ ಕೂಡ ಬಿಡುಗಡೆಯಾಗಿದ್ದು ಮುಂದಿನ ವರ್ಷ ಪುಷ್ಪ ಪಾರ್ಟ್ 3 ಬರುವ ಸಾಧ್ಯತೆ ಇದೆ.