ETV Bharat / bharat

ತನ್ನ ಉದ್ಯೋಗಿಗಳಿಗೆ 14.5 ಕೋಟಿ ರೂಪಾಯಿ ಬಂಪರ್‌ ಬೋನಸ್‌ ಕೊಟ್ಟ ಕಂಪೆನಿ! - IT COMPANY BONUS

ಲಾಭಾಂಶದಲ್ಲಿ ಉದ್ಯೋಗಿಗಳೂ ಭಾಗಿಯಾಗಬೇಕು ಎಂಬ ಉದ್ದೇಶದಿಂದ ಈ ರೀತಿಯ ಬೃಹತ್​ ಬೋನಸ್ ನೀಡಲಾಗಿದೆ ಎಂದು ಕೊಯಮತ್ತೂರಿನ ಐಟಿ ಕಂಪೆನಿ ಹೇಳಿದೆ.

Coimbatore Based IT Gives 14.5 crore Bonus for its employees
ಉದ್ಯೋಗಿಗಳಿಗೆ ಬಂಪರ್​ ಬೋನಸ್​ ಕೊಟ್ಟ IT ಕಂಪೆನಿ (ETV Bharat)
author img

By ETV Bharat Karnataka Team

Published : Feb 7, 2025, 5:21 PM IST

ಕೊಯಮತ್ತೂರ್(ತಮಿಳುನಾಡು): ಉದ್ಯೋಗಿಗಳು ಕೇವಲ ಸಂಸ್ಥೆಯಲ್ಲಿ ದುಡಿಯುವ ವರ್ಗವಲ್ಲ. ಅವರು ಸಂಸ್ಥೆಯ ಲಾಭದಲ್ಲೂ ಭಾಗೀದಾರರು ಎಂದು ಐಟಿ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ 14.5 ಕೋಟಿ ರೂ ಮೊತ್ತದ ಬೃಹತ್‌ ಬೋನಸ್​ ನೀಡಿದೆ.

ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿ ಮುಖ್ಯ ಕಚೇರಿ ಹೊಂದಿರುವ ಕೊವಯಿ​.ಕಾಮ್​ (Kovai.co) ಈ ಬಂಪರ್​ ಆಫರ್​ ಅನ್ನು ತನ್ನ ಸಿಬ್ಬಂದಿಗೆ ನೀಡಿದೆ. ಇಂಗ್ಲೆಂಡ್​ ಮತ್ತು ಚೆನ್ನೈನಲ್ಲಿ ಬ್ರ್ಯಾಂಚ್​ ಕಚೇರಿ ಹೊಂದಿರುವ ಸಂಸ್ಥೆಯಲ್ಲಿ ಒಟ್ಟು 260 ಸಿಬ್ಬಂದಿ ಇದ್ದಾರೆ. ಇದರಲ್ಲಿ 140 ಉದ್ಯೋಗಿಗಳಿಗೆ ಅಂದರೆ, ಸಂಸ್ಥೆಯಲ್ಲಿ ಕಳೆದ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಭಾರೀ ಮೊತ್ತದ ಬೋನಸ್​ ನೀಡಲು ನಿರ್ಧರಿಸಿ, ಸುದ್ದಿಯಾಗಿದೆ.

'ಟುಗೆದರ್​ ವಿ ಗ್ರೋ' (ಒಟ್ಟಾಗಿ ನಾವು ಬೆಳೆಯೋಣ) ಎಂಬ ಯೋಜನೆ ಅಡಿಯಲ್ಲಿ 2022 ಡಿ.21ಕ್ಕೆ ಮುಂಚೆ ಸೇರಿದ ಮೂರು ವರ್ಷ ಸೇವೆ ಪೂರೈಸಿದ ಉದ್ಯೋಗಿಗಳಿಗೆ ತಮ್ಮ ವಾರ್ಷಿಕ ವೇತನದಲ್ಲಿ ಶೇ 50ರಷ್ಟನ್ನು ಬೋನಸ್​ ಆಗಿ ನೀಡಲು ಸಂಸ್ಥೆ ನಿರ್ಧರಿಸಿದೆ. ಮೊದಲ ಹಂತದಲ್ಲಿ 80ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಈ ಬೋನಸ್​ ಹಣವನ್ನು ಜನವರಿ ತಿಂಗಳ ವೇತನದಲ್ಲಿ ನೀಡಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸರವಣಕುಮಾರ್​ ಮಾತನಾಡಿ, "ಸಂಸ್ಥೆಯ ಬೆಳವಣಿಗೆ ಮತ್ತು ಲಾಭಕ್ಕೆ ಕೊಡುಗೆ ನೀಡಿದ ಉದ್ಯೋಗಿಗಳನ್ನು ಪ್ರಶಂಸಿಸಬೇಕು ಎಂಬ ವಿಚಾರದಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಸಂಸ್ಥೆಯ ಸಂಪತ್ತನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು ಎಂಬುದು ನನ್ನ ದೀರ್ಘಕಾಲದ ಕನಸು" ಎಂದು ಹೇಳಿದ್ದಾರೆ.

"ನಾವು ಉದ್ಯೋಗಿಗಳಿಗೆ ಪ್ರತಿಫಲ ನೀಡುವ ದಾರಿ ಹುಡುಕುತ್ತಿದ್ದೆವು. ಆರಂಭದಲ್ಲಿ ಹಂಚಿಕೆ ಮಾಲಿಕತ್ವದ ಷೇರು ಅಥವಾ ಷೇರು ಸಂಬಂಧಿತ ಅವಕಾಶದ ಕುರಿತು ನೋಡಿದೆವು. ಆದರೆ ಅವು ಕೇವಲ ಪೇಪರ್​ ಹಣ. ಅವರಿಗೆ ನಿಜವಾದ ಪ್ರಯೋಜನ ಸಿಗಬೇಕು. ಸಂಸ್ಥೆಗೆ ಸಾರ್ವಜನಿಕ ಹೂಡಿಕೆದಾರರನ್ನು ಹೆಚ್ಚಿಸಬೇಕು ಅಥವಾ ಸಾರ್ವಜನಿಕರಿಗೆ ಷೇರುಗಳನ್ನು ನೀಡಬೇಕು. ಈ ಹಿನ್ನೆಲೆಯಲ್ಲಿ ಬೋನಸ್​ ಅನ್ನು ಹಣದ ರೂಪದಲ್ಲಿ ನೀಡಲು ನಿರ್ಧರಿಸಿದೆವು. ನಮ್ಮ ಉದ್ಯೋಗಿಗಳು ಇದನ್ನು ಅವರ ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಬಹುದು. ಇದನ್ನು ಅವರು ಬ್ಯಾಂಕ್​ ಲೋನ್​ ತೀರಿಸಲು, ಮನೆಗೆ ಡೌನ್​ಪೇಮೆಂಟ್​ ಮಾಡಲು ಅಥವಾ ಅವರ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡಬಹುದು" ಎಂದು ತಿಳಿಸಿದರು.

ಬೋನಸ್​ ಕುರಿತು ಮಾತನಾಡಿರುವ ಉದ್ಯೋಗಿಗಳು, "ಸಂಸ್ಥೆಗಾಗಿ ದುಡಿದ ನಮಗೆ ಅದ್ಬುತವಾದ ಅಚ್ಚರಿ ಸಿಕ್ಕಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಸಂಸ್ಥೆ ಹೆಚ್ಚು ಬೋನಸ್​ ನೀಡಿದೆ. ಇತರೆ ರಾಜ್ಯಗಳಲ್ಲಿ ಮಾತ್ರ ಈ ರೀತಿಯ ಆಫರ್​ಗಳು ಸಿಗುತ್ತದೆ ಎಂದು ಕೇಳಿದ್ದೆವು. ಇದೀಗ ನಮಗೂ ಸಿಕ್ಕಿರುವುದು ಖುಷಿ ತಂದಿದೆ. ಸಂಸ್ಥೆಯ ಬೆಳವಣಿಗೆಗೆ ನಾವು ಮತ್ತಷ್ಟು ಶ್ರಮವಹಿಸಲಿದ್ದೇವೆ" ಎಂದರು.

2023ರಲ್ಲಿ ಕೊವಯಿ.ಕಾಮ್​ ಸಂಸ್ಥೆಯ ಒಟ್ಟಾರೆ​ ವಾರ್ಷಿಕ ಆದಾಯ 16 ಮಿಲಿಯನ್​ ಡಾಲರ್​ ಇದ್ದು, ಇತ್ತೀಚೆಗೆ ಬೆಂಗಳೂರು ಮೂಲದ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಇದನ್ನೂ ಓದಿ: ಮಹಿಳೆಯರಿಗೆ ಅಷ್ಟೇ ಅಲ್ಲ ಇನ್ಮುಂದೆ ಪುರುಷರಿಗೂ ಸ್ವಸಹಾಯ ಸಂಘ: ಉಳಿತಾಯದ ಆರುಪಟ್ಟು ಸಾಲ ಸೌಲಭ್ಯ! ಏನೆಲ್ಲ ನಿಯಮ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.