ಕರ್ನಾಟಕ

karnataka

ETV Bharat / sports

ಕೈತಪ್ಪಿದ ಡೈಮಂಡ್​ ಲೀಗ್​ ಟ್ರೋಫಿ: ಎಕ್ಸ್​-ರೇ ಸಮೇತ ಅಸಲಿ ಕಾರಣ ತಿಳಿಸಿದ ನೀರಜ್​ ಚೋಪ್ರಾ - Neeraj Chopra - NEERAJ CHOPRA

ಡೈಮಂಡ್​ ಲೀಗ್​ನಲ್ಲಿ ನೀರಜ್​ ಚೋಪ್ರಾ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಸಾಕ್ಷಿ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ (IANS)

By ETV Bharat Sports Team

Published : Sep 15, 2024, 6:35 PM IST

ನವದೆಹಲಿ: ಭಾರತದ ಸ್ಟಾರ್​ ಜಾವೆಲಿನ್​ ಎಸೆತೆಗಾರ ನೀರಜ್​ ಚೋಪ್ರಾ ಡೈಮೆಂಡ್​ ಲೀಗ್​ನಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಶನಿವಾರ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್​ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಕೇವಲ 1 ಸೆಂ.ಮೀ ಹಿನ್ನಡೆಯಿಂದ ಎರಡನೇ ಸ್ಥಾನಕ್ಕೆ ತಲುಪಿ ಟ್ರೋಫಿಯನ್ನು ಕೈಚೆಲ್ಲಿದರು. ಈ ಅಂತಿಮ ಹಣಾಹಣಿಯಲ್ಲಿ 87.86 ಮೀಟರ್‌ ದೂರಕ್ಕೆ ಭರ್ಚಿ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೇ, ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ 87.87 ಮೀಟರ್‌ ದೂರಕ್ಕೆ ಜಾವೆಲಿನ್​ ಎಸೆದು ಡೈಮಂಡ್ ಲೀಗ್‌ನ ವಿಜೇತರಾಗಿ ಹೊರಹೊಮ್ಮಿದರು.

ಈ ಹಿಂದೆ ಕೂಡ ಡೈಮಂಡ್​ ಲೀಗ್​ನಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ನೀರಜ್​ ಈ ಬಾರಿಯೂ ಅದೇ ಸ್ಥಾನದಲ್ಲಿ ಮುಂದುವರೆದರು. ಆದರೆ ಈ ಲೀಗ್​ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನೆಂದು ಚೋಪ್ರಾ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅಥ್ಲೀಟ್​, ಎಡಗೈ ಗಾಯದ ನಡುವೆಯೆ ಟೂರ್ನಿಯಲ್ಲಿ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ, "ಸೋಮವಾರ, ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದೇನೆ. ನನ್ನ ಎಡಗೈನ ನಾಲ್ಕನೇ ಮೆಟಾಕಾರ್ಪಲ್ ಮೂಳೆ ಮುರಿದಿರುವುದು ಎಕ್ಸ್​-ರೇನಲ್ಲಿ ಬೆಳಕಿಗೆ ಬಂದಿದೆ. ಇದು ನನಗೆ ಮತ್ತೊಂದು ನೋವಿನ ಸವಾಲಾಗಿತ್ತಾದರೂ ನನ್ನ ತಂಡದ ಸಿಬ್ಬಂದಿಯಿಂದ ಈ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಇದು ವರ್ಷದ ಕೊನೆಯ ಸ್ಪರ್ಧೆಯಾಗಿದ್ದು ಮತ್ತು ನನ್ನ ಈ ಸೀಸನ್ ಅನ್ನು ಈ ಟ್ರ್ಯಾಕ್‌ನಲ್ಲಿ ಕೊನೆಗೊಳಿಸುತ್ತಿದ್ದೇನೆ. ಈ ವರ್ಷ ಸ್ವತಃ ನಾನು ಇಟ್ಟುಕೊಂಡಿದ್ದ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಲಿಲ್ಲ".

"ಆದರೂ ಈ ಋತುವಿನಲ್ಲಿ ಬಹಳಷ್ಟು ಪಾಠ ಕಲಿತುಕೊಂಡಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡು ಟ್ರ್ಯಾಕ್​ಗೆ ಹಿಂತಿರುಗುತ್ತೇನೆ. ನಿಮ್ಮ ಈ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025ರಲ್ಲಿ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಡೈಮೆಂಡ್​ ಲೀಗ್​ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ನೀರಜ್​ ಚೋಪ್ರಾ: ಅದಕ್ಕೆ ಕಾರಣ ಇದೇ ನೋಡಿ - Neeraj Chopra

ABOUT THE AUTHOR

...view details