India vs Australia, 5th Test: ಭಾರತ-ಆಸ್ಟ್ರೇಲಿಯಾ ತಂಡಗಳ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಸಿಡ್ನಿಯಲ್ಲಿ ನಡೆಯುತ್ತಿದೆ. ಸರಣಿಯಲ್ಲಿ ಸತತ ವೈಫಲ್ಯ ಪ್ರದರ್ಶಿಸಿ ತಂಡಕ್ಕೆ ಹೊರೆಯಾಗಿದ್ದ ರೋಹಿತ್ ಶರ್ಮಾ ಪಂದ್ಯದಿಂದ ದೂರ ಉಳಿದಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಟೀಂ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿದೆ. ರೋಹಿತ್ ಶರ್ಮಾ ಬದಲು ಯುವ ಬ್ಯಾಟರ್ ಶುಭಮನ್ ಗಿಲ್ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಓಪನರ್ ಆಗಿ ಬ್ಯಾಟಿಂಗ್‌ಗಿಳಿದು ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದೆಡೆ, ಬೆನ್ನು ನೋವಿನಿಂದ ಬಳಲುತ್ತಿರುವ ಆಕಾಶ್ ದೀಪ್ ಅವರ ಸ್ಥಾನವನ್ನು ಕರ್ನಾಟಕದ ಯುವ ವೇಗಿ ಪ್ರಸಿದ್ಧ ಕೃಷ್ಣ ತುಂಬಿದ್ದಾರೆ.
🚨 Toss Update 🚨#TeamIndia have elected to bat against Australia in the fifth & final Test.
— BCCI (@BCCI) January 2, 2025
UPDATES ▶️ https://t.co/cDVkwfEkKm#AUSvIND pic.twitter.com/4nZZfz33q0
ಪಂದ್ಯಕ್ಕೂ ಮುನ್ನ ಮಾತನಾಡಿದ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ, "ರೋಹಿತ್ ಶರ್ಮಾ ಅವರೇ ನಮ್ಮ ಕ್ಯಾಪ್ಟನ್. ಆದರೆ ಇಂದಿನ ಟೆಸ್ಟ್ ಪಂದ್ಯವನ್ನು ಅವರು ಆಡದಿರಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಮ್ಮ ತಂಡದಲ್ಲಿ ಒಗ್ಗಟ್ಟಿದೆ" ಎಂದರು.
ಈ ಮೂಲಕ ರೋಹಿತ್ ಶರ್ಮಾ, ಟೆಸ್ಟ್ ಸರಣಿಯ ಮಧ್ಯದಲ್ಲೇ ಹೊರಬಿದ್ದ ಮೊದಲ ಭಾರತೀಯ ನಾಯಕ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ.
Australia XI: Usman Khawaja, Sam Konstas, Marnus Labuschagne, Steve Smith, Travis Head, Beau Webster, Alex Carey (wk), Pat Cummins (c), Mitchell Starc, Nathan Lyon, Scott Boland
— cricket.com.au (@cricketcomau) January 2, 2025
ತಂಡಗಳು ಹೀಗಿವೆ-ಆಸ್ಟ್ರೇಲಿಯಾ: ಸ್ಯಾಮ್ ಕಾನ್ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮ್ಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
🚨 Here's #TeamIndia's Playing XI 🔽
— BCCI (@BCCI) January 2, 2025
UPDATES ▶️ https://t.co/cDVkwfEkKm#AUSvIND pic.twitter.com/BO2pofWZzx
ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ(ನಾ), ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಸಿಕ್ಸರ್ ಸಿಡಿಸಿ ಸಂಭ್ರಮಿಸುತ್ತಿರುವಾಗಲೇ ಹೃದಯಾಘಾತದಿಂದ ಕ್ರಿಕೆಟರ್ ಸಾವು: ಭಯಾನಕ ವಿಡಿಯೋ ವೈರಲ್