ಮಂಗಳೂರು: ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡ ನಗರದ ಎಸ್ಸೆಲ್ ವಿಲ್ಕನ್ ಎಂಬ ಸಂಸ್ಥೆಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ವಲಸಿಗರ ರಕ್ಷಕ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೆಂಗಳೂರಿನಿಂದ ದೂರು ಬಂದಿತ್ತು. ಮಂಗಳೂರಿನ ಬೆಂದೂರುವೆಲ್ನ ಎಸ್ಸೆಲ್ ವಿಲ್ಕಾನ್ ಎಂಬ ಕಚೇರಿಯಲ್ಲಿ ಶ ಮಸಿಯುಲ್ಲಾ ಅತಿಯುಲ್ಲಾ ಖಾನ್ ಎಂಬವರು ನಿರ್ದೇಶಕರಾಗಿ ನಡೆಸುತ್ತಿರುವ M/S ಹಿರೆಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಶನಲ್ (OPC) ಪ್ರೈವೇಟ್ ಎಂಬ ಏಜೆನ್ಸಿಯ ಈ ಕೃತ್ಯ ಎಸಗಿದೆ.
ಎಮಿಗ್ರೇಷನ್ ಆ್ಯಕ್ಟ್ 1983ರಡಿಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ, ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ನೇಮಕಗೊಂಡ ಅಭ್ಯರ್ಥಿಗಳಿಂದ ಅನಧಿಕೃತವಾಗಿ ನಿಯಮಬಾಹಿರವಾಗಿ ಪಾಸ್ಪೋರ್ಟ್ಗಳನ್ನು ಸಂಗ್ರಹಿಸಿಕೊಂಡಿರುತ್ತಾರೆ. ಆದ್ದರಿಂದ ಈ ಏಜೆನ್ಸಿ ವಿದೇಶಾಂಗ ಸಚಿವಾಲಯದಲ್ಲಿ ನಿಯಮದ ಪ್ರಕಾರ ನೋಂದಣಿಯಾಗಿಲ್ಲದ ಕಾರಣ ಎಮಿಗ್ರೇಷನ್ ಆ್ಯಕ್ಟ್ 1983ಯನ್ನು ಉಲ್ಲಂಘಿಸಿರುತ್ತಾರೆ ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ: ಎರಡು ಪ್ರಮುಖ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಿಗೆ ₹40 ಸಾವಿರ ದಂಡ