ಕರ್ನಾಟಕ

karnataka

ETV Bharat / sports

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್ ಗೆದ್ದ ಪಂದ್ಯ ರದ್ದು! ಕಾರಣವೇನು ಗೊತ್ತಾ? - Lakshya Sen

ಪ್ಯಾರಿಸ್ ಒಲಿಂಪಿಕ್ಸ್‌ನ ಗುಂಪು ಹಂತದಲ್ಲಿ ಭಾರತದ ಶಟ್ಲರ್ ಲಕ್ಷ್ಯ ಸೇನ್ ಗೆದ್ದ ಪಂದ್ಯದ ಫಲಿತಾಂಶವನ್ನು ಸಂಘಟಕರು ರದ್ದುಗೊಳಿಸಿದ್ದಾರೆ.

STAR INDIAN SHUTTLER LAKSHYA SEN  LAKSHYA WIN OVER CORDON  PARIS OLYMPICS 2024  OLYMPICS 2024
ಭಾರತದ ಶಟ್ಲರ್ ಲಕ್ಷ್ಯ ಸೇನ್ (IANS Photo)

By ETV Bharat Sports Team

Published : Jul 29, 2024, 11:45 AM IST

Updated : Jul 29, 2024, 11:55 AM IST

ಪ್ಯಾರಿಸ್‌: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ವಿಚಿತ್ರ ಸನ್ನಿವೇಶ ಎದುರಿಸಿದ್ದಾರೆ. ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ಗುಂಪು ಹಂತದಲ್ಲಿ ಪಂದ್ಯವೊಂದನ್ನು ಗೆದ್ದಿದ್ದರು. ಆದರೆ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ. ಎದುರಾಳಿ ಆಟಗಾರ ಗಾಯಗೊಂಡಿರುವುದೇ ಇದಕ್ಕೆ ಕಾರಣವಾಗಿದೆ.

ನಡೆದಿದ್ದೇನು?:ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಗ್ರೂಪ್ ಎಲ್ ಭಾಗವಾಗಿ ಲಕ್ಷ್ಯ ಸೇನ್ ಕಳೆದ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ಎದುರಿಸಿದ್ದರು. ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಮೆರೆದ ಲಕ್ಷ್ಯ ಸತತ 21-8, 22-20 ಸೆಟ್‌ಗಳಿಂದ ಗೆದ್ದರು. ಆದರೆ ಈ ಪಂದ್ಯದ ನಂತರ, ಎಡ ಮೊಣ ಕೈ ಗಾಯದಿಂದಾಗಿ ಕೆವಿನ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದರು.

ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಸಾಮಾನ್ಯ ಸ್ಪರ್ಧೆಯ ನಿಯಮಗಳ ಪ್ರಕಾರ, ಗುಂಪು ಹಂತದಲ್ಲಿ ಯಾರಾದರೂ ಗಾಯಗೊಂಡರೆ ಮತ್ತು ಪಂದ್ಯಾವಳಿಯಿಂದ ಹಿಂದೆ ಸರಿದರೆ, ಅವರು ಆಡಿದ ಅಥವಾ ಆಡಬೇಕಾದ ಪಂದ್ಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರ ಫಲಿತಾಂಶಗಳನ್ನು ಪಂದ್ಯಾವಳಿಯಿಂದ ತೆಗೆದುಹಾಕಲಾಗುತ್ತದೆ. ಈ ಅನುಕ್ರಮದಲ್ಲಿ, ಲಕ್ಷ್ಯ ಸೇನ್ ಅವರ ಮೊದಲ ಜಯವನ್ನು ಒಲಿಂಪಿಕ್ಸ್ ಸಂಘಟಕರು ದಾಖಲೆಗಳಿಂದ ತೆಗೆದುಹಾಕಿದರು. ಅಲ್ಲದೆ, ಕೆವಿನ್ ಆಡಬೇಕಿದ್ದ ಇನ್ನೆರಡು ಪಂದ್ಯಗಳು ರದ್ದಾಗಿವೆ.

ಕೆವಿನ್ ಹಿಂಪಡೆಯುವುದರೊಂದಿಗೆ ಈಗ ಎಲ್ ಗುಂಪಿನಲ್ಲಿ ಕೇವಲ ಮೂವರು ಆಟಗಾರರು ಉಳಿದಿದ್ದಾರೆ. ಲಕ್ಷ್ಯ ಇಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಘಿ ಅವರನ್ನು ಎದುರಿಸಲಿದ್ದಾರೆ. ಅದರ ನಂತರ, ಅವರು ಬುಧವಾರ ಇಂಡೋನೇಷ್ಯಾದ ಷಟ್ಲರ್ ಜೊನಾಥನ್ ಕ್ರಿಸ್ಟಿ ವಿರುದ್ಧ ಆಡಲಿದ್ದಾರೆ. ಪರಿಣಾಮ, ಈ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಆಡುವ ಏಕೈಕ ಆಟಗಾರ ಲಕ್ಷ್ಯ. ಶ್ರೇಯಾಂಕದ ಪ್ರಕಾರ, ಅಗ್ರಸ್ಥಾನದಲ್ಲಿರುವವರು ಮುಂದಿನ ಹಂತಕ್ಕೆ ಮುನ್ನಡೆಯುತ್ತಾರೆ.

ಸಾತ್ವಿಕ್-ಚಿರಾಗ್ ಜೋಡಿಯ ಪಂದ್ಯ ರದ್ದು: ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ಶಟ್ಲರ್‌ಗಳ ಜೋಡಿ ಸಾತ್ವಿಕ್-ಚಿರಾಕ್ ಅವರ ಎರಡನೇ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅವರು ಇಂದು ಮಾರ್ಕ್ ಲಮ್ಸ್‌ಫಸ್-ಮಾರ್ವಿನ್ ಸೀಡೆಲ್ ಜೋಡಿಯನ್ನು ಎದುರಿಸಬೇಕಿತ್ತು. ಆದರೆ, ಮೊಣಕಾಲಿನ ಗಾಯದಿಂದಾಗಿ ಮಾರ್ಕ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸುವುದಾಗಿ ಆಯೋಜಕರು ಘೋಷಿಸಿದ್ದಾರೆ.

ಇದನ್ನೂ ಓದಿ:ಒಲಿಂಪಿಕ್ಸ್‌ ಹಾಕಿ: 44 ವರ್ಷಗಳ ಹಿಂದೆ ಅರ್ಜೆಂಟೀನಾ ಮಣಿಸಿ ಚಿನ್ನ ಗೆದ್ದಿತ್ತು ಭಾರತ; ಇಂದು ಮತ್ತದೇ ಎದುರಾಳಿ - Indian Hockey Team

Last Updated : Jul 29, 2024, 11:55 AM IST

ABOUT THE AUTHOR

...view details