ಕರ್ನಾಟಕ

karnataka

ETV Bharat / sports

U-17 ವಿಶ್ವ ಚಾಂಪಿಯನ್‌ಶಿಪ್ ಕುಸ್ತಿ ಪಂದ್ಯದಲ್ಲಿ ಚಿನ್ನ ಗೆದ್ದ ಯುವ ಮಹಿಳಾ ಕುಸ್ತಿಪಟು ಕಾಜಲ್! - world championship wrestling

ಯುವ ಮಹಿಳಾ ಕುಸ್ತಿಪಟು ಕಾಜಲ್ ​ವಿಶ್ವ ಚಾಂಪಿಯನ್‌ಶಿಪ್ ಕುಸ್ತಿ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಕುಸ್ತಿಪಟು ಕಾಜಲ್​
ಕುಸ್ತಿಪಟು ಕಾಜಲ್​ (IANS Photos)

By ETV Bharat Sports Team

Published : Aug 24, 2024, 7:03 PM IST

ನವದೆಹಲಿ: ಹರಿಯಾಣದ ಯುವ ಕುಸ್ತಿಪಟು ವಿದೇಶಿ ನೆಲದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಜೋರ್ಡಾನ್‌ನಲ್ಲಿ ನಡೆದ 17 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್​ನ 69 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಯುವ ಕುಸ್ತಿಪಟು ಕಾಜಲ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಚಿನ್ನದ ಪದಕ ಗೆದ್ದ ನಂತರ ಕುಟುಂಬದಲ್ಲಿ ಸಂತಸದ ವಾತಾವರಣವಿದ್ದು ಸೋನಿಪತ್‌ನಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ. ಸ್ವದೇಶಕ್ಕೆ ಬಂದ ಬಳಿಕ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ಕಾಜಲ್​ ತಯಾರಿ ನಡೆಸಲಿದ್ದಾರೆ ಎಂದು ಅವರ ಗುರು ಮತ್ತು ಚಿಕ್ಕಪ್ಪ ಕೃಷ್ಣ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೃಷ್ಣ, ಕಾಜಲ್ ತನ್ನ 7ನೇ ವಯಸ್ಸಿನಲ್ಲಿ ಕುಸ್ತಿ ಆರಂಭಿಸಿದ್ದಾಳೆ. ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ಇದೀಗ ದೇಶಕ್ಕಾಗಿ ಒಲಿಂಪಿಕ್ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತರಬೇಕು. ಮುಂಬರುವ ಒಲಿಂಪಿಕ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿನೇಶ್ ಫೋಗಟ್ ಅವರ ಈಡೇರದ ಕನಸನ್ನು ಕಾಜಲ್ ಈಡೇರಿಸಲಿದ್ದಾರೆ ಎಂದು ಕೃಷ್ಣ ತಿಳಿಸಿದ್ದಾರೆ.

ಕಾಜಲ್ ಚಿಕ್ಕಪ್ಪ ಕೃಷ್ಣ ಕುಸ್ತಿ ಪಂದ್ಯವನ್ನಾಡುತ್ತಿದ್ದರು. ಆಗ ಕಾಜಲ್​ಗೆ ಕೇವಲ 7 ವರ್ಷಗಳು ಮಾತ್ರ. ತನ್ನ ಚಿಕ್ಕಪ್ಪನನ್ನು ನೋಡಿ ಈ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಕಾಜಲ್​ ನಂತರ ತನ್ನ ಚಿಕ್ಕಪ್ಪನಿಂದ ಕುಸ್ತಿಯ ತಂತ್ರಗಳನ್ನು ಕಲಿಯಲು ಪ್ರಾರಂಭಿಸಿದಳು. ಇದೀಗ ಕಾಜಲ್ ವಿದೇಶಿ ನೆಲದಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ:ಟಿಕೆಟ್​ ದರ 15 ರೂ. ಮಾಡಿದರೂ ಪಾಕ್​ನಲ್ಲಿ ಪಂದ್ಯ ವೀಕ್ಷಣೆಗೆ ಬಾರದ ಜನ: ಉಚಿತ ಪ್ರವೇಶ ಘೋಷಿಸಿದ ಪಿಸಿಬಿ! - PCB Announce Free Ticket

ABOUT THE AUTHOR

...view details