ಕರ್ನಾಟಕ

karnataka

ETV Bharat / sports

ರಿಯಾನ್ ಪರಾಗ್ ಅಮೋಘ ಬ್ಯಾಟಿಂಗ್; ಡೆಲ್ಲಿ ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್ - Rajasthan Royals Victory - RAJASTHAN ROYALS VICTORY

IPL 2024 RR vs DC: ರಿಯಾನ್ ಪರಾಗ್ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅ​ನ್ನು ಮಣಿಸಿತು.

IPL 2024  Rajasthan Royals  Delhi Capitals  RR vs DC
ರಿಯಾನ್ ಪರಾಗ್, ಅವೇಶ್ ಖಾನ್ ನೆರವಿನಿಂದ ದೆಹಲಿ ವಿರುದ್ಧ ರಾಜಸ್ಥಾನಗೆ ಗೆಲವು

By PTI

Published : Mar 29, 2024, 7:28 AM IST

ಜೈಪುರ (ರಾಜಸ್ಥಾನ):ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು 12 ರನ್​ಗಳಿಂದ ಮಣಿಸಿತು. ರಾಜಸ್ಥಾನ ಮೊದಲು ಬ್ಯಾಟಿಂಗ್​ ಮಾಡಿ 185 ರನ್ ಗಳಿಸಿತು. ರಿಯಾನ್ ಪರಾಗ್ 45 ಎಸೆತಗಳಲ್ಲಿ 84 ರನ್ ಪೇರಿಸಿದರು.

ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ರಿಷಬ್ ಪಂತ್ ಹಾಗೂ ಡೇವಿಡ್ ವಾರ್ನರ್ 67 ರನ್​ಗಳ ಜೊತೆಯಾಟ ನೀಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಕೊನೆಯ 5 ಓವರ್‌ಗಳಲ್ಲಿ ಗೆಲುವಿಗೆ 66 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಯಾವುದೇ ಬ್ಯಾಟರ್‌ಗಳು ನೆರವಿಗೆ ಬರಲಿಲ್ಲ. ಆದ್ದರಿಂದ ಡೆಲ್ಲಿ 12 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.

ರಾಜಸ್ಥಾನ ಇನಿಂಗ್ಸ್​:ರಾಜಸ್ಥಾನ ರಾಯಲ್ಸ್ ಬ್ಯಾಟರ್‌ಗಳು ಆರಂಭದಲ್ಲಿ ಎಡವಿದರು. ತಂಡ 36 ರನ್ ಗಳಿಸುವಷ್ಟರಲ್ಲೇ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರ ವಿಕೆಟ್ ಪತನವಾಗಿತ್ತು. ಈ ವೇಳೆ ಕಣಕ್ಕಿಳಿದ ರಿಯಾನ್ ಪರಾಗ್‌ ನಿಧಾಗತಿ ಬ್ಯಾಟ್‌ ಬೀಸಲಾರಂಭಿಸಿದರು. ನಂತರದಲ್ಲಿ ಹೊಡಿ ಬಡಿ ಆಟಕ್ಕಿಳಿದ ಅವರು ರನ್ ರೇಟ್ ಹೆಚ್ಚಿಸುತ್ತಲೇ ಸಾಗಿದರು. ಪರಾಗ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡು 84 ರನ್ ಗಳಿಸಿದರು.

ರವಿಚಂದ್ರನ್ ಅಶ್ವಿನ್ 19 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ 29 ರನ್ ಸೇರಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ 12 ಎಸೆತಗಳಲ್ಲಿ 20 ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ 7 ಎಸೆತಗಳಲ್ಲಿ 14 ರನ್ ಕೊಡುಗೆ ನೀಡಿದರು. ಅಂತಿಮ 5 ಓವರ್‌ಗಳಲ್ಲಿ ಡೆಲ್ಲಿ ಬೌಲರ್‌ಗಳು ಭಾರೀ ನಿರಾಸೆ ಅನುಭವಿಸಿದರು. ಮುಖೇಶ್ ಕುಮಾರ್ ಕೊನೆಯ 2 ಓವರ್‌ಗಳಲ್ಲಿ 30 ರನ್ ಮತ್ತು ಆನ್ರಿಚ್ ನಾರ್ಟ್ಜೆ ಕೊನೆಯ ಓವರ್‌ನಲ್ಲಿ 25 ರನ್ ಗಳಿಸಿದರು. ಇದರಿಂದಾಗಿ ಆರ್​ಆರ್​ ತಂಡ 185 ರನ್ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 2 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. 30 ರನ್ ಆಗುವಷ್ಟರಲ್ಲಿ ಮಿಚೆಲ್ ಮಾರ್ಷ್ ಮತ್ತು ರಿಕಿ ಭುಯಿ ಪೆವಿಲಿಯನ್​ಗೆ ಮರಳಿದರು. ಡೇವಿಡ್ ವಾರ್ನರ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 49 ರನ್ ಗಳಿಸಿದರು. ನಾಯಕ ರಿಷಬ್ ಪಂತ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಆದರೆ, ಇದು ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾಗಲಿಲ್ಲ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್ ಪರ 100 ಸಿಕ್ಸರ್​ ಬಾರಿಸಿದ ಹಾರ್ದಿಕ್ ಪಾಂಡ್ಯ; ಹೊಸ ದಾಖಲೆ - IPL 2024

ABOUT THE AUTHOR

...view details