ಕೋಲ್ಕತ್ತಾ:ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸುನಿಲ್ ನರೈನ್ ಮತ್ತೊಮ್ಮೆ ಮಿಂಚಿದ್ದಾರೆ. ಸ್ಪೋಟಕ ಬ್ಯಾಟಿಂಗ್ನಿಂದ ರಾಜಸ್ಥಾನದ ಬೌಲರ್ಗಳ ಮೇಲೆ ಸವಾರಿ ಮಾಡಿದ ಅವರು ಐಪಿಎಲ್‌ನಲ್ಲಿ ಮೊದಲ ಶತಕ ದಾಖಲಿಸಿದರು. ಕೇವಲ 49 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್‌ಸಹಿತ 109 ರನ್ ಪೇರಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಕೆಕೆಆರ್‌ಗೆ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಬ್ಯಾಟರ್ ಫಿಲಿಫ್ ಸಾಲ್ಟ್ ಕೇವಲ 10 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಇದಾದ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆಂಗ್‌ಕ್ರಿಶ್ ರಘುವಂಶಿ ಎರಡನೇ ವಿಕೆಟ್‌ಗೆ ನರೈನ್ ಜೊತೆ 85 ರನ್‌ಗಳ ಜೊತೆಯಾಟ ನಡೆಸಿದರು. ಯುವ ಬ್ಯಾಟರ್ ರಾಜಸ್ಥಾನ ವಿರುದ್ಧ ಐದು ಬೌಂಡರಿಗಳ ಸಹಾಯದಿಂದ 30 ರನ್ ಗಳಿಸಿದರು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 11 ರನ್, ಆಂಡ್ರೆ ರಸೆಲ್ 13 ರನ್ ಮತ್ತು ವೆಂಕಟೇಶ್ ಅಯ್ಯರ್ ಎಂಟು ರನ್ ಗಳಿಸಿದರು.
ರಾಜಸ್ಥಾನ ಪರ ಅವೇಶ್ ಖಾನ್ ಮತ್ತು ಕುಲದೀಪ್ ಸೇನ್ ತಲಾ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಯಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು 3 ಓವರ್ಗೆ 35 ರನ್ಗಳಿಸಿರುವ ಆರ್ಆರ್ 1 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರೆಸಿದೆ.
ಪ್ರಸಕ್ತ ಋತುವಿನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಆರ್ಆರ್ ಈವರೆಗೆ 6 ಪಂದ್ಯಗಳನ್ನಾಡಿದ್ದು 5ರಲ್ಲಿ ಗೆಲುವು ಕಂಡು 1ರಲ್ಲಿ ಸೋಲನುಭವಿಸಿದೆ. ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದು ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1ರಲ್ಲಿ ಸೋತು ಎರಡನೇ ಸ್ಥಾನದಲ್ಲಿದೆ.