ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ 2024ರ ಮೂರನೇ ದಿನದಂದು, ಪುರುಷರ ಸಿಂಗಲ್ಸ್‌ನ ಗುಂಪು ಹಂತದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಬೆಲ್ಜಿಯಂನ ಜೂಲಿಯನ್ ಕ್ಯಾರಾಗಿ ವಿರುದ್ಧ 2-0 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಎದುರಾಳಿಯನ್ನು 21-19, 21-14 ಅಂಕಗಳಿಂದ ಸೋಲಿಸಿದ್ದಾರೆ.
ಈ ಪಂದ್ಯದ ಮೊದಲ ಸೆಟ್‌ನಲ್ಲಿ ಲಕ್ಷ್ಯ ಮತ್ತು ಜೂಲಿಯನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಇಬ್ಬರೂ ಸಮಾನ ಅಂಕಗಳೊಂದಿಗೆ ಮುನ್ನಡೆದಿದ್ದರು. ಆದರೆ, ಕೊನೆಯಲ್ಲಿ ಲಕ್ಷ್ಯ ಸೇನ್ ಮೇಲುಗೈ ಸಾಧಿಸಿ ಮೊದಲ ಸೆಟ್ ಅನ್ನು 21-19 ರಿಂದ ಗೆದ್ದುಕೊಂಡರು. ಈ ಸೆಟ್‌ನಲ್ಲಿ ಬೆಲ್ಜಿಯಂನ ಜೂಲಿಯನ್ ಲಕ್ಷ್ಯಗೆ ಕಠಿಣ ಪೈಪೋಟಿ ನೀಡಿದರು.
ಎರಡನೇ ಸೆಟ್‌ನಲ್ಲೂ ಗೆಲುವು:ಎರಡನೇ ಸೆಟ್‌ನಲ್ಲಿ ಲಕ್ಷ್ಯ ಸೇನ್ ಮತ್ತೊಮ್ಮೆ ಉತ್ತಮ ಆರಂಭ ಮಾಡಿದರು. ಎದುರಾಳಿ ಮೇಲೆ ಆರಂಭದಿಂದಲೂ ಪ್ರಾಬಲ್ಯ ಸಾಧಿಸುತ್ತಾ ಬಂದರು ಪಂದ್ಯದ ಎರಡನೇ ಸೆಟ್‌ನ ಮಧ್ಯ ವಿರಾಮದ ವೇಳೆಗೆ 11-5 ಸ್ಕೋರ್ ಮಾಡಿದ್ದರು. ಇದಾದ ಬಳಿಕ ಜೂಲಿಯನ್ ಮೇಲೆ ಹೆಚ್ಚಿನ ಒತ್ತಡ ಹೇರಿದ ಲಕ್ಷ್ಯ ಸೇನ್ ಎರಡನೇ ಸೆಟ್ ಅನ್ನು 21 - 14 ಅಂತರದಿಂದ ಗೆದ್ದುಕೊಂಡರು.
ಇದರೊಂದಿಗೆ ಲಕ್ಷ್ಯ ಸೇನ್ ನೇರ ಸೆಟ್‌ಗಳಿಂದ 21-19 ಮತ್ತು 21-15 ಅಂತರದಿಂದ ಗೆಲುವು ಸಾಧಿಸಿದರು. 2024ರ ಪ್ಯಾರಿಸ್ ಒಲಿಂಪಿಕ್ನಲ್ಲಿ ಇದು ಲಕ್ಷ್ಯ ಅವರ ಎರಡನೇ ಗೆಲುವಾಗಿದೆ. ಇದಕ್ಕೂ ಮೊದಲು, ಅವರು ಗ್ವಾಟೆಮಾಲಾದ ಆಟಗಾರ ಕೆವಿನ್ ಕಾರ್ಡನ್ ವಿರುದ್ಧ ತಮ್ಮ ಮೊದಲ ಗೆಲುವು ದಾಖಲಿಸಿದ್ದರು. ಆದರೆ, ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಕೆವಿನ್ ಹೊರಗುಳಿದರು. ಇದಾದ ಬಳಿಕ ಲಕ್ಷ್ಯ ಅವರೊಂದಿಗಿನ ಪಂದ್ಯ ರದ್ದಾಯಿತು. ಆ ಪಂದ್ಯದ ಅಂಕಗಳು ಲಕ್ಷ್ಯ ಸೇನ್ ಖಾತೆಗೆ ಸೆರ್ಪಡೆಗೊಂಡಿವೆ. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.
ಇದನ್ನೂ ಓದಿ:ಬ್ಯಾಡ್ಮಿಂಟನ್: ಜಪಾನ್ ವಿರುದ್ಧ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪಗೆ ಸೋಲು - Paris olympics 2024