ಹೈದರಾಬಾದ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಜುಲೈ 25 ರಿಂದ ಪ್ರಾರಂಭ ಆಗಲಿರುವ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ನಮಗೆಲ್ಲ ತಿಳಿದೆ ಇದೆ. ಆದರೆ, ಮತ್ತೊಂದು ವಿಶೇಷ ಎಂದರೆ ಈ ಬಾರಿಯ ಒಲಿಪಿಂಕ್ಸ್ನಲ್ಲಿ ಭಾರತದ ಮೂಲದವರೂ ಆಗಿರುವ ಕ್ರೀಡಾಪಟುಗಳು ಇತರ ದೇಶಗಳಿಂದ ಸ್ಪರ್ಧಿಸುತ್ತಿದ್ದಾರೆ.
ಹೌದು ಒಟ್ಟು 5 ಜನ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್ ಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕರ್ನಾಟಕ ಮೂಲದ ಒಬ್ಬ ಆಟಗಾರ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಯಾವ ದೇಶದಿಂದ ಪ್ರತಿನಿಧಿಸುತ್ತಿದ್ದಾರೆ ಮತ್ತು ಯಾವ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದರ ಕುರಿತು ಇದೀಗ ತಿಳಿಯೋಣ.
ರಾಜೀವ್ ರಾಮ್:ರಾಜೀವ್ ರಾಮ್ ಅವರ ತಂದೆ ಮತ್ತು ತಾಯಿ ಕರ್ನಾಟಕ ಮೂಲದವರಾಗಿದ್ದು, 40 ವರ್ಷಗಳ ಹಿಂದೆ ಭಾರತ ತೊರೆದು ಅಮೆರಿಕಕ್ಕೆ ವಲಸೆ ಹೋಗಿದ್ದರು. ಬಳಿಕ ಅವರು ಅಮೆರಿಕದ ಡೆನ್ವರ್ನಲ್ಲಿ ರಾಜೀವ್ ರಾಮ್ ಅವರು ಜನನವಾಯಿತು. ಸಸ್ಯಶಾಸ್ತ್ರಜ್ಞರಾಗಿದ್ದ ರಾಜೀವ್ ಅವರ ತಂದೆ 2019ರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ಗೆ ತುತ್ತಾಗಿ ನಿಧನ ಹೊಂದಿದರು. ರಾಜೀವ್ ತಾಯಿ ಸುಷ್ಮಾ ವೈಜ್ಞಾನಿಕ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೂ ಟೆನಿಸ್ನಲ್ಲಿ ಆಸಕ್ತಿ ಹೊಂದಿದ ರಾಜೀವ್ ಟೆನಿಸ್ ಕ್ರೀಡೆಯ ಕಡೆ ಹೆಚ್ಚಿನ ಗಮನ ಹರಿಸತೊಡಗಿದರು. ಅದರಂತೆ ಯಶಸ್ವಿಯೂ ಆಗಿದ್ದಾರೆ.
ಭಾರತೀಯ - ಅಮೆರಿಕನ್ ರಾಜೀವ್ ರಾಮ್ ಟೆನಿಸ್ ಡಬಲ್ಸ್ ಸ್ಪೆಷಲಿಸ್ಟ್ ಆಗಿದ್ದು ಇದೂವರೆಗೂ ನಾಲ್ಕು ಪುರುಷರ ಡಬಲ್ಸ್ ಮತ್ತು ಒಂದು ಮಿಶ್ರ ಡಬಲ್ಸ್ ಸೇರಿದಂತೆ ಐದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2016 ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ವೀನಸ್ ವಿಲಿಯಮ್ಸ್ ಜೊತೆಗೂಡಿ ಮಿಶ್ರ ಡಬಲ್ಸ್ನಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಪುರುಷರ ಡಬಲ್ಸ್ ಟೆನ್ನಿಸ್ನಲ್ಲಿ ಸ್ಪರ್ಧಿಸಲಿದ್ದಾರೆ.
ಶಾಂತಿ ಪಿರೇರಾ:ಸಿಂಗಾಪುರದ ಸ್ಪ್ರಿಂಟ್ ಕ್ವೀನ್ ಎಂದು ಕರೆಯಲ್ಪಡುವ ಶಾಂತಿ ಪಿರೇರಾ ಕೇರಳ ಮೂಲದವರಾಗಿದ್ದಾರೆ. ಶಾಂತಿ ಅಜ್ಜಿ ಮತ್ತು ಅಜ್ಜ ತಿರುವನಂತಪುರಂ ಸಮೀಪದ ವೆಟ್ಟುಕಾಡ್‌ನವರು. ಆದರೆ ಶಾಂತಿಯ ಅಜ್ಜನಿಗೆ ಸಿಂಗಾಪುರದಲ್ಲಿ ಕೆಲಸ ಸಿಕ್ಕಿದ ನಂತರ ದಂಪತಿಗಳು ಭಾರತ ತೊರೆದು ಸಿಂಗಾಪುರ ಸೇರಿದರು.