INDW vs WIW:ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವೆ ಏಕದಿನ ಸರಣಿ ಪ್ರಾರಂಭವಾಗಲಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುಕ್ತಾಯಗೊಂಡ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತದ ವನಿತೇಯರು ಗೆಲುವು ಸಾಧಿಸಿದ್ದರು. ಇದರೊಂದಿಗೆ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದ್ದಾರೆ. ಇದೀಗ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ.
ಭಾನುವಾರ (ನಾಳೆ)ಯಿಂದ ಉಭಯ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಈ ಮೂರು ಪಂದ್ಯಗಳಿಗೆ ವಡೋದರದ ಕೊಟಾಂಬಿ ಮೈದಾನ ಆತಿಥ್ಯವಹಿಸಿಕೊಂಡಿದೆ.
ಹೆಡ್ ಟು ಹೆಡ್:ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಈ ವರೆಗೆ 26 ODI ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಒಟ್ಟು 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ಕೇವಲ ಐದರಲ್ಲಿ ಮಾತ್ರ ಜಯಭೇರಿ ಭಾರಿಸಿದೆ. 2013 ರಿಂದ ಉಭಯ ತಂಡಗಳ ನಡುವೆ ಒಟ್ಟು ಒಂಬತ್ತು ಏಕದಿನ ಪಂದ್ಯಗಳು ನಡೆದಿದ್ದು ಇದರಲ್ಲಿ ಭಾರತ ಎಂಟರಲ್ಲಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ನವೆಂಬರ್ 2019 ರಲ್ಲಿ ಭಾರತದ ವಿರುದ್ಧ ಏಕದಿನ ಪಂದ್ಯವನ್ನಾಡಿತ್ತು.
ವೇಳಾಪಟ್ಟಿ:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಪಂದ್ಯ ಡಿ.21ಕ್ಕೆ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಡಿಸೆಂಬರ್ 24 ಮತ್ತು 3ನೇ ಪಂದ್ಯ ಡಿಸೆಂಬರ್ 27 ರಂದು ನಡೆಯಲಿವೆ.
ಸಮಯ:1:30 PM (1 ನೇ & 2 ನೇ ODI); 9:30 AM (3ನೇ ODI)