ಬೆನೋನಿ(ದಕ್ಷಿಣ ಆಫ್ರಿಕಾ):ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಯುವ ಕ್ರಿಕೆಟ್ ತಂಡ ಮತ್ತೊಮ್ಮೆ ಪ್ರಾಬಲ್ಯ ಮೆರೆಯಿತು. ಮಂಗಳವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತವರಿನ ತಂಡ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್ಗಳಿಂದ ಬಗ್ಗುಬಡಿದು 9ನೇ ಬಾರಿಗೆ ಫೈನಲ್ ತಲುಪಿತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನೀಡಿದ 244 ರನ್ಗಳ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಭಾರತ ಆರಂಭಿಕ ಆಘಾತ ಅನುಭವಿಸಿತು. 32 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ, ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಗಟ್ಟಿಯಾಗಿ ನೆಲೆಯೂರಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಉದಯ್ ಸಹರನ್ ತಂಡಕ್ಕೆ ಆರಂಭಿಕ ಪೆಟ್ಟು ನೀಡಿದ್ದು, ಹರಿಣಗಳ ತಂಡದ ವೇಗಿ ಟ್ರಿಸ್ಟಾನ್ ಲೂಸ್. ಓಪನರ್ ಅರ್ಶಿನ್ ಕುಲಕರ್ಣಿ (12), ಮುಶೀರ್ ಖಾನ್ (4), ಪ್ರಿಯಾಂಶು ಮೋಲಿಯಾರನ್ನು (5) ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ಗೆ ಅಟ್ಟಿದರು. ಕ್ವೆನ ಮಪಾಕರ ಮೊದಲ ಎಸೆತದಲ್ಲಿ ಆರಂಭಿಕ ಆದರ್ಶ್ ಸಿಂಗ್ ವಿಕೆಟ್ ನೀಡಿದರು. ಇದು 6ನೇ ಸಲ ವಿಶ್ವಕಪ್ ಎತ್ತಿಹಿಡಿಯುವ ಭಾರತದ ಕನಸು ಕಮರುವ ಭೀತಿ ತಂದಿತ್ತು.
ಗುಡುಗಿದ ಮರಿ ಸಚಿನ್:9.2 ಓವರ್ಗಳಲ್ಲಿ 32 ರನ್ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ತಂಡವನ್ನು ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಕೆಚ್ಚೆದೆಯ ಆಟವಾಡಿ ಮೇಲೆತ್ತಿದರು. ನಾಯಕ ಉದಯ್ ತಾಳ್ಮೆಯ ಆಟವಾಡಿದರೆ, ಇನ್ನೊಂದು ತುದಿಯಲ್ಲಿ ಎಚ್ಚರಿಕೆಯೊಂದಿಗೆ ಹರಿಣಗಳ ಬೌಲಿಂಗ್ ಪಡೆಯನ್ನು ಸಚಿನ್ ಬೆಂಡೆತ್ತಿದರು. ಮರಿ ಸಚಿನ್ 95 ಎಸತೆಗಳಲ್ಲಿ 96 ರನ್ ಚಚ್ಚಿದರು. ಇದರಲ್ಲಿ 11 ಬೌಂಡರಿ 1 ಭರ್ಕರಿ ಸಿಕ್ಸರ್ ಇತ್ತು. ಶತಕದ ಅಂಚಿನಲ್ಲಿದ್ದ ಸಚಿನ್, ಟ್ರಿಸ್ಟಾನ್ ಲೂಸ್ರ ಲೂಸ್ ಬೌಲಿಂಗ್ಗೆ ವಿಕೆಟ್ ಕಳೆದುಕೊಂಡರು.