ಕರ್ನಾಟಕ

karnataka

ETV Bharat / sports

ಭಾರತ-ನ್ಯೂಜಿಲೆಂಡ್​ 2ನೇ ಟೆಸ್ಟ್​: ಭಾರತ ತಂಡದಿಂದ ಪಂತ್​ ಹೊರಗುಳಿಯುವ ಸಾಧ್ಯತೆ

ನ್ಯೂಜಿಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಿಂದ ರಿಷಭ್​ ಪಂತ್ ಹೊರಗುಳಿಯುವ ಸಾಧ್ಯತೆ ಕಂಡುಬಂದಿದೆ. ಈ ಬಗ್ಗೆ ರೋಹಿತ್​ ಶರ್ಮಾ ಮಾತನಾಡಿದ್ದಾರೆ.

ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​
ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​ (IANS And AFP)

By ETV Bharat Sports Team

Published : 10 hours ago

ಹೈದರಾಬಾದ್​: ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್​ಗಳಿಂದ ಸೋಲನುಭವಿಸಿತು. ಇದರೊಂದಿಗೆ ಸರಣಿಯಲ್ಲಿ 1-0ರ ಹಿನ್ನಡೆ ಅನುಭವಿಸಿದ್ದು, ಅ.24ರಿಂದ ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ತಂಡದ ಮ್ಯಾನೇಜ್ಮೆಂಟ್​ ಕೂಡ ರಣತಂತ್ರ ರೂಪಿಸುತ್ತಿದೆ.

ಆದರೆ 2ನೇ ಟೆಸ್ಟ್​ ಆರಂಭಕ್ಕೂ ಮೊದಲೇ ಭಾರತಕ್ಕೆ ಆಘಾತ ಎದುರಾಗಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಕಿವೀಸ್​ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ್ದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್​ ಮುಂದಿನ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ಪಂತ್​ ನಾಲ್ಕನೇ ದಿನದಾಟದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು.

ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್​ ಬಂದ ಪಂತ್​ (99) ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಸಂಪೂರ್ಣ ಫಿಟ್​ ಆಗಿರುವಂತೆ ಕಂಡುಬಂದಿರಲಿಲ್ಲ. 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾತ್ರ ಮಾಡಿದ್ದ ಅವರು ಪಂದ್ಯದುದ್ದಕ್ಕೂ ವಿಕೆಟ್ ಕೀಪಿಂಗ್‌ ಮಾಡಲಿಲ್ಲ.

ರೋಹಿತ್​ ಶರ್ಮಾ ಹೇಳಿಕೆ:ಪುಣೆ ಟೆಸ್ಟ್‌ನಲ್ಲಿ ಪಂತ್​ ಆಡುವ ಕುರಿತು ನಾಯಕ ರೋಹಿತ್ ಶರ್ಮಾ ಪ್ರಮುಖ ಅಪ್‌ಡೇಟ್ ನೀಡಿದರು. "ಪಂತ್​ ಮೊಣಕಾಲಿಗೆ ಆಪರೇಷನ್​ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಎಚ್ಚರಿಕೆ ವಹಿಸಬೇಕಿದೆ. ಹೀಗಾಗಿ ಮುಂದಿನ ಟೆಸ್ಟ್‌ಗೂ ಮುನ್ನ ಅವರಿಗೆ ಹೆಚ್ಚುವರಿ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.

ಶತಕ ವಂಚಿತ:ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್​ನಲ್ಲಿ ಪಂತ್​ ಉತ್ತಮ ಬ್ಯಾಟಿಂಗ್​ ಮಾಡಿದ್ದರು. 99 ರನ್​ಗಳಿಸಿದ್ದ ಅವರು ವಿಲಿಯಂ ಓ'ರೂರ್ಕ್​ ಎಸೆತದಲ್ಲಿ ಬೌಲ್ಡ್​ ಆಗಿ ಕೇವಲ 1 ರನ್​ನಿಂದ ಶತಕ ತಪ್ಪಿಸಿಕೊಂಡರು.

ಮೊದಲ ಟೆಸ್ಟ್ ವಿವರ​:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯಲ್ಲಿ ಟಾಸ್​ ಗೆದ್ದ ಬ್ಯಾಟಿಂಗ್​ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46ರನ್​ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕೆ ಪ್ರತಿಯಾಗಿ ಕಿವೀಸ್​​ 462 ರನ್​ಗಳನ್ನು ಕಲೆಹಾಕಿ 356 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಸರ್ಫರಾಜ್​ ಖಾನ್​ (150), ರಿಷಭ್​ ಪಂತ್​ ಬ್ಯಾಟಿಂಗ್​ ನೆರವಿನಿಂದ 462 ರನ್‌ ದಾಖಲಿಸಿತು. ಆದರೆ, 356 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್​ಗೆ ಕೇವಲ 107 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಗಿತ್ತು.

ಇದನ್ನೂ ಓದಿ:ರಣಜಿಯಲ್ಲಿ ಶತಕ ಸಿಡಿಸಿದ ಪೂಜಾರ: ಕ್ರಿಕೆಟ್​ ದಿಗ್ಗಜ ಬ್ರಿಯನ್​ ಲಾರಾ ರೆಕಾರ್ಡ್ ಬ್ರೇಕ್​!

ABOUT THE AUTHOR

...view details