Khel Ratna Award List: ಕ್ರೀಡಾ ಸಾಧಕರನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಲ್ವರ ಹೆಸರನ್ನು ಪ್ರಕಟಿಸಲಾಗಿದೆ. ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ ಮನುಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್, ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಘೋಷಿಸಲಾಗಿದೆ.
ಇದಲ್ಲದೇ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 32 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 17 ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
🚨 KHEL RATNA AWARD 2024 ANNOUNCED 🇮🇳
— The Khel India (@TheKhelIndia) January 2, 2025
1. Gukesh Dommaraju - Chess
2. Harmanpreet Singh - Hockey
3. Praveen Kumar - Para Athletics
4. Manu Bhaker - Shooting
Huge congratulations to all the awardees 🙌 pic.twitter.com/Jlj2yhowFH
ಏತನ್ಮಧ್ಯೆ, ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮನು ಭಾಕರ್ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ವಿವಾದ ಹುಟ್ಟಿಕೊಂಡಿತ್ತು. ಅಲ್ಲದೇ ಮನು ಅವರ ತಂದೆ ರಾಮ್ ಕಿಶನ್ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಮನುವನ್ನು ಶೂಟರ್ ಮಾಡುವ ಬದಲು ಕ್ರಿಕೆಟಿಗನನ್ನಾಗಿ ಮಾಡಿದ್ದರೆ ಚೆನ್ನಾಗಿತ್ತು. ಆಗ ಎಲ್ಲ ಪ್ರಶಸ್ತಿ, ಪುರಸ್ಕಾರಗಳು ಹರಿದು ಬರುತ್ತಿದ್ದವು ಎಂದು ಆರೋಪಿಸಿದ್ದರು. ಅಲ್ಲದೇ ಪ್ರಶಸ್ತಿಗಾಗಿ ಭಿಕ್ಷೆ ಬೇಡುವುದರಲ್ಲಿ ಅರ್ಥವಿಲ್ಲ ಎಂದಿದ್ದರು.
ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ಮನು, ಪ್ರಶಸ್ತಿಗಾಗಿ ಸಲ್ಲಿಸುವ ಅರ್ಜಿಯಲ್ಲಿ ಕೆಲ ತಪ್ಪುಗಳು ಆಗಿದ್ದು, ಸರಿ ಪಡಿಸಿ ಮತ್ತೊಮ್ಮೆ ಅರ್ಜಿಸಲ್ಲಿಸುವುದಾಗಿ ಹೇಳಿದ್ದರು. ಇದೀಗ 2024ರ ಖೇಲ್ ರತ್ನ ಪ್ರಶಸ್ತಿಗೆ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಆದರೆ, ಈ ಬಾರಿ ಕ್ರಿಕೆಟ್ ಆಟಗಾರರಿಗೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಧ್ಯಾನ್ ಚಂದ್ರ ಖೇಲ್ ರತ್ನ ಪ್ರಶಸ್ತಿಗಳಲ್ಲಿ ಯಾವುದೇ ಕ್ರಿಕೆಟ್ ಆಟಗಾರರನ್ನು ಸೇರಿಸದೇ ಇರುವುದು ಅಚ್ಚರಿ ಮೂಡಿಸಿದೆ. ಆಟಗಾರನಿರಲಿ, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಹೆಸರನ್ನು ಕೋಚ್ ವಿಭಾಗದಲ್ಲೂ ಸೇರಿಸಲಾಗಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಧ್ಯಾನ್ ಚಂದ್ ಖೇಲ್ ರತ್ನ 2024 ಪ್ರಶಸ್ತಿ ಪಡೆದವರು
ಮನು ಭಾಕರ್ | ಶೂಟಿಂಗ್ |
ಹರ್ಮನ್‌ಪ್ರೀತ್ ಸಿಂಗ್ | ಹಾಕಿ |
ಪ್ರವೀಣ್ ಕುಮಾರ್ | ಪ್ಯಾರಾ ಅಥ್ಲೀಟ್ |
ಡಿ.ಗುಕೇಶ್ | ಚೆಸ್ |
ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳು
ಕ್ರಮ ಸಂಖ್ಯೆ | ಕ್ರೀಡಾಪಟುವಿನ ಹೆಸರು | ಕ್ರೀಡೆ |
ಜ್ಯೋತಿ ಯರ್ರಾಜಿ | ಅಥ್ಲೆಟಿಕ್ಸ್ | |
2. | ಅಣ್ಣು ರಾಣಿ | ಅಥ್ಲೆಟಿಕ್ಸ್ |
3. | ನೀತು | ಬಾಕ್ಸಿಂಗ್ |
4. | ಸವೀಟಿ | ಬಾಕ್ಸಿಂಗ್ |
5. | ವಂತಿಕಾ ಅಗರವಾಲ್ | ಚದುರಂಗ |
6. | ಸಲೀಮಾ ಟೆಟೆ | ಹಾಕಿ |
7. | ಅಭಿಷೇಕ್ | ಹಾಕಿ |
8. | ಸಂಜಯ್ | ಹಾಕಿ |
9. | ಜರ್ಮನ್ಪ್ರೀತ್ ಸಿಂಗ್ | ಹಾಕಿ |
10. | ಸುಖಜೀತ್ ಸಿಂಗ್ | ಹಾಕಿ |
11. | ರಾಕೇಶ್ ಕುಮಾರ್ | ಪ್ಯಾರಾ-ಆರ್ಚರಿ |
12. | ಪ್ರೀತಿ ಪಾಲ್ | ಪ್ಯಾರಾ-ಅಥ್ಲೆಟಿಕ್ಸ್ |
13. | ಜೀವನಜಿ ದೀಪ್ತಿ | ಪ್ಯಾರಾ-ಅಥ್ಲೆಟಿಕ್ಸ್ |
14. | ಅಜೀತ್ ಸಿಂಗ್ | ಪ್ಯಾರಾ-ಅಥ್ಲೆಟಿಕ್ಸ್ |
15. | ಸಚಿನ್ ಸರ್ಜೆರಾವ್ ಖಿಲಾರಿ | ಪ್ಯಾರಾ-ಅಥ್ಲೆಟಿಕ್ಸ್ |
16. | ಧರಂಬೀರ್ | ಪ್ಯಾರಾ-ಅಥ್ಲೆಟಿಕ್ಸ್ |
17. | ಪ್ರಣವ್ ಸೂರ್ಮ | ಪ್ಯಾರಾ-ಅಥ್ಲೆಟಿಕ್ಸ್ |
17. | ಹೆಚ್ ಹೊಕಾಟೊ ಸೆಮಾ | ಪ್ಯಾರಾ-ಅಥ್ಲೆಟಿಕ್ಸ್ |
18. | ಸಿಮ್ರಾನ್ | ಪ್ಯಾರಾ-ಅಥ್ಲೆಟಿಕ್ಸ್ |
19. | ನವದೀಪ್ | ಪ್ಯಾರಾ-ಅಥ್ಲೆಟಿಕ್ಸ್ |
20. | ನಿತೇಶ್ ಕುಮಾರ್ | ಪ್ಯಾರಾ-ಬ್ಯಾಡ್ಮಿಂಟನ್ |
21. | ತುಳಸಿಮತಿ ಮುರುಗೇಶನ್ | ಪ್ಯಾರಾ-ಬ್ಯಾಡ್ಮಿಂಟನ್ |
22. | ನಿತ್ಯ ಶ್ರೀ ಸುಮತಿ ಶಿವನ್ | ಪ್ಯಾರಾ-ಬ್ಯಾಡ್ಮಿಂಟನ್ |
23. | ಮನಿಷಾ ರಾಮದಾಸ್ | ಪ್ಯಾರಾ-ಬ್ಯಾಡ್ಮಿಂಟನ್ |
24. | ಕಪಿಲ್ ಪರ್ಮಾರ್ | ಪ್ಯಾರಾ-ಜೂಡೋ |
25. | ಮೋನಾ ಅಗರ್ವಾಲ್ | ಪ್ಯಾರಾ-ಶೂಟಿಂಗ್ |
26. | ರುಬಿನಾ ಫ್ರಾನ್ಸಿಸ್ | ಪ್ಯಾರಾ-ಶೂಟಿಂಗ್ |
27. | ಸ್ವಪ್ನಿಲ್ ಸುರೇಶ ಕುಸಲೆ | ಶೂಟಿಂಗ್ |
28. | ಸರಬ್ಜೋತ್ ಸಿಂಗ್ | ಶೂಟಿಂಗ್ |
29. | ಅಭಯ್ ಸಿಂಗ್ | ಸ್ಕ್ವ್ಯಾಷ್ |
30. | ಸಜನ್ ಪ್ರಕಾಶ್ | ಈಜು |
31. | ಅಮನ್ | ಕುಸ್ತಿ |
ಇದನ್ನೂ ಓದಿ: ಸಿಕ್ಸರ್ ಸಿಡಿಸಿ ಸಂಭ್ರಮಿಸುತ್ತಿರುವಾಗಲೇ ಹೃದಯಾಘಾತದಿಂದ ಕ್ರಿಕೆಟರ್ ಸಾವು: ಭಯಾನಕ ವಿಡಿಯೋ ವೈರಲ್