ಹೈದರಾಬಾದ್:ಓಲಿ ಪೋಪ್ (196) ಅವರ ಅಬ್ಬರದ ಆಟದ ಫಲವಾಗಿ ಇಂದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 420 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಮೊದಲ ಟೆಸ್ಟ್ ಗೆಲುವಿಗೆ 231 ರನ್‌ಗಳು ಬೇಕಿವೆ. ಅಮೋಘ ಪ್ರದರ್ಶನ ತೋರಿದ ಪೋಪ್ ದ್ವಿಶತಕದ ಹೊಸ್ತಿನಲ್ಲಿ ವಿಕೆಟ್ ಕಳೆದುಕೊಂಡರು.
ಮೂರನೇ ದಿನವಾದ ನಿನ್ನೆ ಕ್ರೀಸ್ಗೆ ಬಂದಿದ್ದ ಪೋಪ್ ನಾಲ್ಕನೇ ದಿನವಾದ ಇಂದೂ ತನ್ನ ಜವಾಬ್ದಾರಿಯುತ ಆಟ ಮುಂದುವರೆಸಿದರು. ಆದರೆ ಭಾರತ ವೇಗದ ಬೌಲರ್ ಜಸ್ರೀತ್ ಬುಮ್ರಾ ಪೋಪ್ ಆಟಕ್ಕೆ ಬ್ರೇಕ್ ಹಾಕಿದರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದರು. ಅಶ್ವಿನ್ ಪ್ರಮುಖ 3 ವಿಕೆಟ್ ಕಬಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆಯ ಹೊಸ್ತಿಲಿನಲ್ಲಿದ್ದಾರೆ. ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆಯುವಲ್ಲಿ ಯಶ ಕಂಡರು. ಮೊಹಮ್ಮದ್ ಸಿರಾಜ್ ಮೊದಲ ಟೆಸ್ಟ್‌ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.