Mahindra EV Cars Launched: ಎಲೆಕ್ಟ್ರಿಕ್ ವಾಹನಪ್ರಿಯರಿಗೆ ಒಳ್ಳೆಯ ಸುದ್ದಿ. ಎರಡು ಹೊಸ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ದೇಶೀಯ ಕಾರು ತಯಾರಕ ಕಂಪೆನಿ ಮಹೀಂದ್ರ ಆ್ಯಂಡ್ ಮಹೀಂದ್ರ ತನ್ನ ಎರಡು ಹೊಸ ಇವಿಗಳನ್ನು ಬಿಡುಗಡೆ ಮಾಡಿದೆ. ಇವುಗಳಿಗೆ 'Mahindra XEV 9e' ಮತ್ತು 'Mahindra BE 6e' ಎಂದು ಹೆಸರಿಡಲಾಗಿದೆ.
'ಮಹೀಂದ್ರಾ XEV 9e' ಡಿಸೈನ್: ಹೊಸ XEV 9e ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳ ಜೊತೆ ಈ ಕಾರಿನಲ್ಲಿ ಟ್ರೈಯಾಂಗಲ್ ಹೆಡ್‌ಲೈಟ್‌ಗಳು, ಇನ್ವರ್ಟೆಡ್ ಎಲ್-ಶೇಪ್ ಎಲ್‌ಇಡಿ ಡಿಆರ್‌ಎಲ್‌ಗಳು, ಮುಂಭಾಗದಲ್ಲಿ ಎಲ್‌ಇಡಿ ಲೈಟ್ ಬಾರ್, ಬ್ಯಾಕ್ ಆ್ಯಂಡ್ ಫ್ರಂಟ್ ಬಂಪರ್‌ಗಳು, ಬ್ಲಾಂಕ್ಡ್-ಆಫ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಇದೆ. ಕಾಂಟ್ರಾಸ್ಟ್ ಕಲರ್ನ ORVMಗಳನ್ನು ಹೊಂದಿದೆ. ಇವುಗಳ ಹೊರತಾಗಿ, ರಿಫ್ರೆಶ್ ಮಾಡಿದ ಎಲ್‌ಇಡಿ ಟೈಲ್‌ಲೈಟ್‌ಗಳು, ಇಂಟಿಗ್ರೇಟೆಡ್ ಸ್ಪಾಯ್ಲರ್, ಸಿ-ಪಿಲ್ಲರ್-ಮೌಂಟೆಡ್ ರಿಯರ್ ಡೋರ್ ಹ್ಯಾಂಡಲ್, ಕನೆಕ್ಟೆಡ್ ಟೈಲ್‌ಲೈಟ್ ಸೆಟಪ್, ಏರೋ ಇನ್ಸರ್ಟ್‌ಗಳೊಂದಿಗೆ ಹೊಸ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ.
'ಮಹೀಂದ್ರ XEV 9e' ಇಂಟೀರಿಯರ್: ಈ ಕಾರು ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಪನೋರಮಿಕ್ ಸನ್‌ರೂಫ್, ಲೆವೆಲ್ 2 ಎಡಿಎಎಸ್ ಸೂಟ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ತ್ರೀ-ಸ್ಕ್ರೀನ್ ಸೆಟಪ್, ಡ್ಯಾಶ್‌ಬೋರ್ಡ್, ಟ್ವೀಕ್ಡ್ ಸೆಂಟರ್ ಕನ್ಸೋಲ್, ನ್ಯೂ ಗೇರ್ ಲಿವರ್ ಮತ್ತು ರೋಟರಿ ಡಯಲ್ ಒಳಗೊಂಡಿದೆ.
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), 1400-ವ್ಯಾಟ್ ಹರ್ಮನ್-ಕಾರ್ಡನ್ ಮೂಲದ 16-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಆಟೋ ಪಾರ್ಕ್ ಫಂಕ್ಷನ್, ವೈರ್‌ಲೆಸ್ ಮೊಬೈಲ್ ಪ್ರೊಜೆಕ್ಷನ್, ಸವೆನ್ ಏರ್‌ಬ್ಯಾಗ್ಸ್, 65W ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಶೆಡೂಲ್ಡ್ ಚಾರ್ಜಿಂಗ್ ಜೊತೆ ಫಂಕ್ಷನ್ ಆ್ಯಂಡ್ ಕ್ಯಾಬಿನ್ ಪ್ರಿ-ಕೂಲಿಂಗ್ ಫಂಕ್ಷನ್ ಕಾರಿನಲ್ಲಿದೆ.
'ಮಹೀಂದ್ರ XEV 9e' ಪವರ್‌ಟ್ರೇನ್: ಈ ಕಾರು 59kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ವಿದ್ಯುತ್ ಮೋಟರ್‌ಗೆ ಸಂಪರ್ಕ ಹೊಂದಿದೆ. 228bhp ಪವರ್ ಮತ್ತು 380Nm ಟಾರ್ಕ್ ಉತ್ಪಾದಿಸುತ್ತದೆ. ಫುಲ್ ಚಾರ್ಜ್‌ನಲ್ಲಿ 656 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬ್ಯಾಟರಿಯನ್ನು 140kW DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 20 ನಿಮಿಷಗಳಲ್ಲಿ ಶೇ 20-80ರಷ್ಟು ಚಾರ್ಜ್ ಮಾಡಬಹುದು. 0-100 kmph ವೇಗವನ್ನು ಈ ಕಾರು 6.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.
'ಮಹೀಂದ್ರ BE 6e' ಡಿಸೈನ್: 'ಮಹೀಂದ್ರ BE 6e' ಕಾರನ್ನು 'BE 05' ಎಂದು ಕರೆಯಲಾಗುತ್ತದೆ. ಇದು ಕೂಪೆ ಎಸ್‌ಯುವಿ. ಆಭರಣದಂತಹ ಹೆಡ್‌ಲೈಟ್‌ಗಳು, ಹಿಂಭಾಗದ ಎಲ್ಇಡಿ ಲೈಟ್ ಬಾರ್, ಟಾಪ್-ಸ್ಪೆಕ್ ರೂಪಾಂತರಕ್ಕಾಗಿ 20-ಇಂಚಿನ ವ್ಹೀಲ್ಸ್ನಂತಹ ಸ್ಟೈಲಿಂಗ್ ಎಲಿಮೆಂಟ್ಸ್ ಹೊಂದಿದೆ. 'XEV 9e' ಗಿಂತ ಸ್ವಲ್ಪ ಚಿಕ್ಕದಾದ ಬೂಟ್ ಸ್ಪೇಸ್ ಅಂದ್ರೆ ಇದು 455 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದಲ್ಲದೆ, 45 ಲೀಟರ್ ಫ್ರಂಕ್ ಹೊಂದಿದೆ.
'ಮಹೀಂದ್ರ BE 6e' ಇಂಟೀರಿಯರ್: ಇದರ ಕ್ಯಾಬಿನ್ ಡ್ರೈವರ್-ಸೆಂಟ್ರಿಕ್, ಫೈಟರ್ ಜೆಟ್‌ಗಳಂತಹ ಥ್ರಸ್ಟರ್‌ಗಳಿಂದ ಪ್ರೇರಿತವಾಗಿದೆ. 'XEV 9e'ನಂತೆ ವೈಶಿಷ್ಟ್ಯಪೂರ್ಣ ಮಾದರಿಯಾಗಿದೆ. ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿಪಲ್ ಡ್ರೈವ್ ಮೋಡ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೈ-ಎಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಮಹೀಂದ್ರಾ ಸೋನಿಕ್ ಸ್ಟುಡಿಯೋ), ಪನೋರಮಿಕ್ ಸನ್‌ರೂಫ್, ಕನೆಕ್ಟ್ ಕಾರ್ ತಂತ್ರಜ್ಞಾನ, AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಇಂಟರ್ಫೇಸ್‌ನಂತಹ ವೈಶಿಷ್ಟ್ಯಗಳನ್ನು ಈ ಕಾರು ಒಳಗೊಂಡಿದೆ.
ಕುತೂಹಲಕಾರಿ ಅಂಶವೆಂದರೆ, ಇದು ಸುಮಾರು ಮೂರು ಕಿಲೋಮೀಟರ್ ಉದ್ದದ ವೈರಿಂಗ್ ಸರಂಜಾಮು ಹೊಂದಿದೆ. 2,000ಕ್ಕೂ ಹೆಚ್ಚು ಸರ್ಕ್ಯೂಟ್‌ಗಳು ಮತ್ತು 36 ECUಗಳನ್ನು ಅಳವಡಿಸಲಾಗಿದೆ. ಏಳು ಏರ್ ಬ್ಯಾಗ್‌ಗಳು, ADAS, 360 ಡಿಗ್ರಿ ಕ್ಯಾಮೆರಾ ಮತ್ತು ಅನೇಕ ಸುರಕ್ಷತಾ ವೈಶಿಷ್ಟ್ಯಗಳಿವೆ.
'ಮಹೀಂದ್ರ BE 6e' ಪವರ್‌ಟ್ರೇನ್: ಈ ಎರಡು ಕಾರುಗಳ ಪವರ್‌ಟ್ರೇನ್ ಅನ್ನು ಕಂಪನಿಯ INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. 59kWh ಮತ್ತು 79kWh ಸಪೋರ್ಟ್ನೊಂದಿಗೆ ಈ ಕಾರುಗಳು ಬರುತ್ತವೆ. 'BE 6e' ಎರಡು ಬ್ಯಾಟರಿ ಆಯ್ಕೆಗಳು ಹೊಂದಿದೆ. ಇದರ ಗರಿಷ್ಠ ವ್ಯಾಪ್ತಿ 682 ಕಿ.ಮೀ. ಆಗಿದೆ. ಮೋಟಾರ್ 288bhp ಪವರ್ ಮತ್ತು 380nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬ್ಯಾಟರಿಯನ್ನು 175kWh DC ಫಾಸ್ಟ್ ಚಾರ್ಜರ್‌ನೊಂದಿಗೆ 20 ನಿಮಿಷಗಳಲ್ಲಿ 20-80 ಪ್ರತಿಶತದಿಂದ ಚಾರ್ಜ್ ಮಾಡಬಹುದು. ಇದು ದೊಡ್ಡ ಬ್ಯಾಟರಿಯೊಂದಿಗೆ 500 ಕಿ.ಮೀ. ವ್ಯಾಪ್ತಿಯನ್ನು ಒದಗಿಸುವ ನಿರೀಕ್ಷೆಯಿದೆ.
ಬೆಲೆ: 'XEV 9e' ಅನ್ನು ₹21.9 ಲಕ್ಷ (ಎಕ್ಸ್ ಶೋ ರೂಂ) ಇದ್ದು, ಮಾರುಕಟ್ಟೆಯಲ್ಲಿ 'BE 6e' ಬೆಲೆ ₹18.9 ಲಕ್ಷ (ಎಕ್ಸ್ ಶೋ ರೂಂ) ಇದೆ.
ಇದನ್ನೂ ಓದಿ: ಮಾರಾಟದಲ್ಲಿ ಅದ್ಭುತ ಸಾಧನೆ ಮಾಡಿದ ಟಾಟಾ ಮೋಟಾರ್ಸ್ನ ಈ ಕಾರು ಗ್ರಾಹಕರಿಗೆ ಅಚ್ಚುಮೆಚ್ಚು