ETV Bharat / state

ಮಂಗಳೂರಿನ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್​: ಪ್ರಕರಣ ದಾಖಲು - SENIOR STUDENTS RAGGING

ಮಂಗಳೂರಿನ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್​ ಮಾಡಿದ್ದಲ್ಲದೇ, ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್
ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್ (ETV Bharat)
author img

By ETV Bharat Karnataka Team

Published : Nov 28, 2024, 10:54 PM IST

ಮಂಗಳೂರು: ಮುಕ್ಕದ ಶ್ರೀನಿವಾಸ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್, ಹಲ್ಲೆ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಲಾಗಿದೆ.

ನವೆಂಬರ್ 25 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಸಿದಾಯಿಸ್ ಎಂಬಾತ ಲೊಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ತಿಳಿಸಿದ್ದಾನೆ. ಆತ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ನಿಗದಿತ ಸ್ಥಳಕ್ಕೆ ತೆರಳಿದ್ದಾನೆ.

ಹಿರಿಯ ವಿದ್ಯಾರ್ಥಿಯ ಕೊಠಡಿಯೊಳಗೆ ಹೋದ ಬಳಿಕ, ಅಲ್ಲಿಯೇ ಇದ್ದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜೀದ್ ಅವರುಗಳು ಅವಾಚ್ಯ ಶಬ್ದಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ರೇಗಿಸಿದ್ದಾರೆ. ನಂತರ, ಕೊಠಡಿಯ ಬಾಗಿಲನ್ನು ಮುಚ್ಚಿದ್ದಾರೆ. ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ನೃತ್ಯ ಮಾಡಲು ಹೇಳಿದ್ದಾರೆ.

ಪ್ರತಿರೋಧ ಒಡ್ಡಿ ಕಿರಿಯ ವಿದ್ಯಾರ್ಥಿ, ಹಿರಿಯರಿಂದ ಹಲ್ಲೆ: ಇದಕ್ಕೆ ಕಿರಿಯ ವಿದ್ಯಾರ್ಥಿ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳಾದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜಿದ್ ಆತನ ಕೆನ್ನೆಗೆ ಹೊಡೆದಿದ್ದಾರೆ. ನಂತರ ಶಿಬಿನ್, ಅಜೀಮ್ ಶಾ, ಆಡಮ್, ಫಹಾದ್, ಅತುಲ್.ಕೆ, ದಿಲೀಪ್ ಹಾಗೂ ಅಬ್ಜಲ್ ಅವರು ಕೂಡ ಕೊಠಡಿಗೆ ಬಂದು, ಇಲ್ಲಿ ನಡೆದ ವಿಷಯವನ್ನು ಕಾಲೇಜು ಮಂಡಳಿ ಹಾಗೂ ಪೊಲೀಸರಿಗೆ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.

ಅಲ್ಲಿಂದ ಮನೆಗೆ ಬಂದ ಕಿರಿಯ ವಿದ್ಯಾರ್ಥಿ ಭಯದಿಂದ ಯಾರ ಬಳಿಯೂ ಈ ವಿಷಯವನ್ನು ಹಂಚಿಕೊಂಡಿಲ್ಲ. ಮರುದಿನ ಬೆಳಿಗ್ಗೆ ಎಚ್ಚರವಾದಾಗ ಆತನ ಎಡಕಿವಿಯಲ್ಲಿ ರಕ್ತ ಬಂದಿದ್ದು ಕಂಡು ಬಂದಿದೆ. ಕಾಲೇಜಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ವಿದ್ಯಾರ್ಥಿ ಕಾಲೇಜಿನ ಡೀನ್ ಹಾಗೂ ಆ್ಯಂಟಿ ರ‍್ಯಾಗಿಂಗ್ ಕಮಿಟಿಗೆ ದೂರು ನೀಡಿದ್ದಾನೆ.

ಕಿರಿಯ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಶಿಂದೆ, ಪವಾರ್​, ಫಡ್ನವೀಸ್​​ ಅಲ್ಲ: ಮಹಾರಾಷ್ಟ್ರ ಸಿಎಂ ಸ್ಥಾನಕ್ಕಾಗಿ ಬಿಜೆಪಿಯ ಈ ನಾಯಕರ ಮಧ್ಯೆ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.