ETV Bharat / bharat

ನೈನಿತಾಲ್​ ಅರಣ್ಯದಲ್ಲೊಂದು ಅಚ್ಚರಿ: ಇದು ಮುಟ್ಟಿದ್ರೆ ನಗುವ ಮರ - LAUGHING TREE NAINITAL FOREST

ರಾಂಡಿಯಾ ಡುಮಿಟೋರಮ್​ ಎಂಬ ಜಾತಿಯ ಈ ಮರ 'ಲಾಫಿಂಗ್​​ ಟ್ರಿ' ಎಂಬ ಹೆಸರು ಗಳಿಸಿದೆ.

plant-named-randia-dumetorum-or-thanela-laughs-when-tickled-in-ramnagar-nainital-forest
ಮುಟ್ಟಿದ್ರೆ ನಗುವ ಮರ (ETV Bharat)
author img

By ETV Bharat Karnataka Team

Published : Nov 28, 2024, 11:22 AM IST

ರಾಮನಗರ(ಉತ್ತರಾಖಂಡ್​): 'ನಗು' ಎಂಬುದು ಎಲ್ಲಾ ಸಮಸ್ಯೆಗೂ ರಾಮಬಾಣವಂತೆ. ಪ್ರಕೃತಿದತ್ತವಾದ ಈ ನಗು ಕೇವಲ ಮನುಷ್ಯರಿಗೆ ಮಾತ್ರ ಒಲಿದ ವರವಲ್ಲ ಎಂಬುದನ್ನು ಉತ್ತರಾಖಂಡದ ಮರ ಕೂಡಾ ಸಾಬೀತುಪಡಿಸಿದೆ. ಮುಟ್ಟಿದ್ರೆ ಮುನಿ ಸಸ್ಯದಂತೆ ಈ ಮರಕ್ಕೆ ನಯವಾಗಿ ಕಚಗುಳಿ ಇಟ್ಟರೆ ಎಲೆಗಳು ಹಸನ್ಮುಖಿಯಾಗಿ ಕಂಗೊಳಿಸುವುದಲ್ಲದೇ, ಎಲೆಗಳು ನಿಧಾನವಾಗಿ ಅಲುಗಾಡಿ, ಕೊಂಬೆ ನಗುವಿನಲ್ಲಿ ನಡುಗುವ ಅನುಭವವಾಗುತ್ತದೆ. ಇದೇ ಕಾರಣಕ್ಕೆ ಈ ಮರಕ್ಕೆ 'ನಗುವ ಮರ' ಎಂದು ಹೆಸರಿಡಲಾಗಿದೆ.

ರಾಮನಗರದ ಅರಣ್ಯದಲ್ಲಿ ಈ ಮರವನ್ನು ನೀವು ಕಾಣಬಹುದು. ರಾಂಡಿಯಾ ಡುಮಿಟೋರಮ್​ ಎಂಬ ಜಾತಿಯ ಈ ಮರಕ್ಕೆ 'ಲಾಫಿಂಗ್​​ ಟ್ರಿ' ಎಂಬ ಹೆಸರಿದೆ. ಅಷ್ಟು ಮಾತ್ರವಲ್ಲ, ಔಷಧೀಯ ಗುಣವನ್ನೂ ಹೊಂದಿದ್ದು, ಪರಿಸರದಲ್ಲಿನ ಅಶುದ್ಧ ಗಾಳಿಯನ್ನು ಶುದ್ಧೀಕರಿಸುತ್ತದಂತೆ. ಮರಗಳ ಎಲೆ, ಕೊಂಬೆ ಮತ್ತು ತೊಗಟೆಗಳನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಸ್ಥಳೀಯ ಭಾಷೆಯಲ್ಲಿ 'ಥಾನೈಲ್' ಎಂದೂ ಕರೆಯಲ್ಪಡುವ ಈ ಮರಗಳನ್ನು ನೈನಿತಾಲ್‌ನ ಛೋಟಿ ಹಲ್ದ್ವಾನಿ ಮತ್ತು ಕಾರ್ಬೆಟ್ ನಗರದಲ್ಲಿ ಹೆಚ್ಚಾಗಿ ಕಾಣಬಹುದು. ಇವು ಸುಮಾರು 300ರಿಂದ 1,300 ಮೀಟರ್ ಎತ್ತರ ಬೆಳೆಯುತ್ತದೆ.

plant-named-randia-dumetorum-or-thanela-laughs-when-tickled-in-ramnagar-nainital-forest
ಮುಟ್ಟಿದ್ರೆ ನಗುವ ಮರ (ETV Bharat)

ಜೀವವೈವಿಧ್ಯತೆಯ ತಾಣವಾಗಿ ರಾಮನಗರ ಖ್ಯಾತಿ ಗಳಿಸಿದೆ. ಇಲ್ಲಿನ ದಟ್ಟಾರಣ್ಯದಲ್ಲಿ ಎಲ್ಲಾ ರೀತಿಯ ಮರಗಿಡಗಳನ್ನು ಕಾಣಬಹುದು. ಈ ಪೈಕಿ ನಗುವ ಮರ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಾಣಿಗಳ ಕೆಚ್ಚಲಿನಲ್ಲಿ ಗುಳ್ಳೆಯಾದಾಗ ಅಥವಾ ಇನ್ನಿತರ ಸಮಸ್ಯೆ ಕಾಣಿಸಿಕೊಂಡಾಗ ಈ ಮರದ ತೊಗಟೆಯನ್ನು ಪೇಸ್ಟ್​ ರೂಪದಲ್ಲಿ ಹಚ್ಚುವುದರಿಂದ ಉಪಶಮನವಾಗುತ್ತದೆ ಎಂದು ಹೇಳಲಾಗುತ್ತಿದೆ.

"ಪ್ರವಾಸಿಗರನ್ನು ನಾವು ಈ ಮರದ ಬಳಿ ಕರೆತಂದು ವೈಶಿಷ್ಟ್ಯವನ್ನು ತಿಳಿಸಿದಾಗ ಅವರು ಚಕಿತರಾಗುತ್ತಾರೆ. ಇದರ ಕೊಂಬೆಗಳು ನಗುವಿನಿಂದ ನಡುಗುವುದರಿಂದ ಶಿವರಿಂಗ್​ ಟ್ರೀ ಎಂದೂ ಕೂಡ ಕರೆಲಾಗುವುದು" ಎಂದು ಸ್ಥಳೀಯ ಗೈಡ್​ ಮೋಹನ್​ ಪಾಂಡೆ ತಿಳಿಸಿದರು.

ರಾಮನಗರ್​ ಕಾಲೇಜಿನ ಸಸ್ಯಶಾಸ್ತ್ರ ಪ್ರೊಫೆಸರ್​ ಎಸ್.​ಎಸ್.ಮೌರ್ಯ ಮಾತನಾಡಿ, "ಪೊದೆಯಂತಿರುವ ಮರವು ಇಲ್ಲಿನ ಅನೇಕ ಕಾಡುಗಳಲ್ಲಿ ಕಂಡುಬರುತ್ತಿದೆ. ಅಸ್ತಮಾ, ನೆಗಡಿ ಮತ್ತು ಸುಟ್ಟಗಾಯಗಳಂತಹ ಅನೇಕ ರೋಗಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲೂ ಈ ಮರಗಳು ಕಂಡುಬರುತ್ತದೆ. ಉಷ್ಣವಲಯದ ಮತ್ತು ನಾಸ್ಟಿಕ್ ಚಲನೆಗಳಿಂದಾಗಿ ಅವು ಬಾಹ್ಯ ಪ್ರಚೋದಕದಂತೆ ಪ್ರತಿಕ್ರಿಯಿಸುತ್ತದೆ" ಎಂದು ಹೇಳಿದರು.

ರಾಮನಗರ ಅರಣ್ಯ ವಿಭಾಗದ ಡಿಎಫ್‌ಒ ದಿಗಂತ್ ನಾಯಕ್ ಮಾತನಾಡಿ, "ರಾಮನಗರದ ಕಲಾಧುಂಗಿ ಮತ್ತು ಫಾಟೊ ಶ್ರೇಣಿಯಲ್ಲೂ ಈ ಮರಗಳಿವೆ. ಆಗ್ನೇಯ ದೇಶಗಳು ಇದರ ಆವಾಸಸ್ಥಾನ. ಡಿಸೆಂಬರ್, ಜನವರಿ ತಿಂಗಳಲ್ಲಿ ಹಣ್ಣು ಬಿಡುತ್ತದೆ. ಮೆನ್ಫಾಲ್, ರಾಧಾ ಮತ್ತು ಮದನ್ಫಾಲ್ ಎಂಬ ಹೆಸರಿನಿಂದಲೂ ಇವುಗಳನ್ನು ಗುರುತಿಸಲಾಗುವುದು" ಎಂದರು.

ಇದನ್ನೂ ಓದಿ: ಸಿಂಧೂ ನಾಗರಿಕತೆಯ ಸ್ಥಳ ಲೋಥಾಲ್‌ನಲ್ಲಿ ಸಂಶೋಧನೆ: ಹಠಾತ್ ಮಣ್ಣು ಕುಸಿದು IIT ದೆಹಲಿಯ ಪಿಹೆಚ್‌ಡಿ ವಿದ್ಯಾರ್ಥಿನಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.