Ind vs Aus 2nd Test: ಭಾರತ ವಿರುದ್ದ ಎರಡನೇ ಟೆಸ್ಟ್ಗಾಗಿ ಆಸ್ಟ್ರೇಲಿಯಾ ಇಂದು ಬಲಿಷ್ಟ ತಂಡವನ್ನು ಪ್ರಕಟಿಸಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 295 ರನ್ಗಳ ಬೃಹತ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲೂ 1-0 ಅಂತರದಿಂದ ಮುನ್ನಡೆ ಪಡೆದಿದೆ. ಇದೀಗ 2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಮಣಿಸಿಲು ಯೋಜನೆ ರೂಪಿಸಿಕೊಂಡಿರುವ ಆಸೀಸ್ ಪಡೆ ಡೇಂಜರಸ್ ಆಲ್ರೌಂಡರ್ನನ್ನು ತಂಡಕ್ಕೆ ಕರೆತಂದಿದೆ.
ಅಡಿಲೇಡ್‌ನಲ್ಲಿ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ, ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮಿಚೆಲ್ ಮಾರ್ಷ್ ಅವರು ಫಿಟ್ನೆಸ್ನಿಂದ ಬಳಲುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ದರ್ಜೆ ಕ್ರಿಕೆಟರ್ ಬ್ಯೂ ವೆಬ್ಸ್ಟರ್ಗೆ ಇದು ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ.
JUST IN: A fresh face confirmed for the Aussie Test squad heading to Adelaide! #AUSvIND
— cricket.com.au (@cricketcomau) November 28, 2024
Details: https://t.co/436boXikq6 pic.twitter.com/pcXntNLsVH
30 ವರ್ಷದ ಈ ಆಲ್ ರೌಂಡರ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅವರು 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12 ಶತಕ ಮತ್ತು 24 ಅರ್ಧ ಶತಕಗಳೊಂದಿಗೆ 5,297 ರನ್ ಗಳಿಸಿದ್ದಾರೆ. ಅಲ್ಲದೇ ಬೌಲಿಂಗ್ನಲ್ಲೂ 148 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್ - ಎ ಮತ್ತು ಟಿ20ಯಲ್ಲಿಯೂ ಅವರು ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 54 ಲಿಸ್ಟ್ - ಎ ಪಂದ್ಯಗಳಲ್ಲಿ 1317 ರನ್ ಮತ್ತು 44 ವಿಕೆಟ್ ಪಡೆದಿದ್ದರೇ, 89 ಟಿ-20 ಪಂದ್ಯಗಳನ್ನಾಡಿರುವ ಈ ಸ್ಟಾರ್ ಆಲ್ರೌಂಡರ್ 21 ವಿಕೆಟ್ ಪಡೆದಿದ್ದಾರೆ. ಒಟ್ಟಾರೆಯಾಗಿ, ಅವರು ದೇಶೀಯ ಕ್ರಿಕೆಟ್‌ನಲ್ಲಿ 8000 ಕ್ಕೂ ಹೆಚ್ಚು ರನ್ ಮತ್ತು 200+ ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಎರಡನೇ ಟೆಸ್ಟ್ ಯಾವಾಗ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಡಿಸೆಂಬರ್ 6 ರಂದು ನಡೆಯಲಿದೆ. ಹಗಲು - ರಾತ್ರಿ ಟೆಸ್ಟ್ ಪಂದ್ಯವಾಗಿರುವ ಇದರಲ್ಲಿ ಪಿಂಕ್ ಬಾಲ್ ಬಳಕೆ ಮಾಡಲಾಗುತ್ತದೆ. ಈ ಪಂದ್ಯಕ್ಕೆ ಅಡಿಲೇಡ್ನ ಓವಲ್ ಮೈದಾನ ಆತಿಥ್ಯ ವಹಿಸಿಕೊಳ್ಳಲಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಸ್ಕಾಟ್ ಬೋಲ್ಯಾಂಡ್, ಟ್ರಾವಿಸ್ ಹೆಡ್, ಜೋಶ್ ಹ್ಯಾಜಲ್‌ವುಡ್, ಉಸ್ಮಾನ್ ಖವಾಜಾ, ಜೋಶ್ ಇಂಗ್ಲಿಸ್, ಬ್ಯೂ ವೆಬ್‌ಸ್ಟರ್, ನಾಥನ್ ಲಿಯಾನ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಮೆಕ್‌ಸ್ವೀನಿ, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ ಕೀ), ಸರ್ಫರಾಝ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ (ಉಪನಾಯಕ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣ, ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್.
ಇದನ್ನೂ ಓದಿ: 2ನೇ ಟೆಸ್ಟ್ನಲ್ಲಿ ದೊಡ್ಡ ದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ: ಕ್ರಿಕೆಟ್ ಚರಿತ್ರೆಯಲ್ಲೇ ಇದು ಮೊದಲು!.. ಏನದು?