Bajrang Puniya on BJP: ದೇಶದ ತಾರಾ ಕುಸ್ತಿಪಟು ಹಾಗೂ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರ ವಿರುದ್ಧ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (NADA) ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ್ದು, ಈ ಸಲುವಾಗಿ ಪುನಿಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಬಿಜೆಪಿ ಸರ್ಕಾರ ಮತ್ತು ಫೆಡರೇಶನ್ ನನ್ನ ವೃತ್ತಿಜೀವನ ನಾಶಪಡಿಸಲು ಉದ್ದೇಶಪೂರ್ವಕವಾಗಿ ನಿಷೇಧ ಹೇರಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ಈ ನಾಲ್ಕು ವರ್ಷಗಳ ನಿಷೇಧ ನನ್ನ ವಿರುದ್ಧದ ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಪಿತೂರಿ. ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಚಳವಳಿಗೆ ಸೇಡು ತೀರಿಸಿಕೊಳ್ಳಲು ಇಂಥ ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ಚಳವಳಿಯಲ್ಲಿ ನಾವು ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದೆವು" ಎಂದು ತಿಳಿಸಿದ್ದಾರೆ.
यह चार साल का प्रतिबंध मेरे खिलाफ व्यक्तिगत द्वेष और राजनीतिक साजिश का परिणाम है। मेरे खिलाफ यह कार्रवाई उस आंदोलन का बदला लेने के लिए की गई है, जो हमने महिला पहलवानों के समर्थन में चलाया था। उस आंदोलन में हमने अन्याय और शोषण के खिलाफ अपनी आवाज़ बुलंद की थी।
— Bajrang Punia 🇮🇳 (@BajrangPunia) November 27, 2024
मैं यह स्पष्ट करना…
ಮುಂದುವರೆದು, "ಡೋಪಿಂಗ್ ಪರೀಕ್ಷೆಗೆ ಒಳಗಾಗಲು ನಾನೆಂದಿಗೂ ನಿರಾಕರಿಸಿಲ್ಲ. ನಾಡಾ ತಂಡ ಪರೀಕ್ಷೆಗೆಂದು ನನ್ನಲ್ಲಿಗೆ ಬಂದಾಗ ಅವರಲ್ಲಿದ್ದ ಡೋಪ್ ಕಿಟ್ ಅವಧಿ ಮುಗಿದಿತ್ತು. ಇದು ಗಂಭೀರ ನಿರ್ಲಕ್ಷ್ಯ. ಹಾಗಾಗಿ, ಮಾನ್ಯವಾದ ಮತ್ತು ಮೌಲ್ಯೀಕರಿಸಿದ ಕಿಟ್‌ನೊಂದಿಗೆ ಪರೀಕ್ಷೆ ಮಾಡುವಂತೆ ನಾನು ತಿಳಿಸಿದ್ದೆ. ಏಕೆಂದರೆ ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಸಹ ಅಗತ್ಯ. ಆದರೆ, ಇದನ್ನು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ" ಎಂದು ದೂರಿದ್ದಾರೆ.
NADA जब चाहे यहां चाहे मेरा डोपिंग टेस्ट ले सकती है वैध और मान्य किट के साथ। pic.twitter.com/hXC6nmKWsP
— Bajrang Punia 🇮🇳 (@BajrangPunia) November 27, 2024
ಅಷ್ಟೇ ಅಲ್ಲದೇ, "ಬಿಜೆಪಿ ಸರ್ಕಾರ ಮತ್ತು ಫೆಡರೇಷನ್ ನನ್ನನ್ನು ಬಲೆಗೆ ಬೀಳಿಸಲು ಮತ್ತು ನನ್ನ ವೃತ್ತಿಜೀವನವನ್ನು ನಾಶಮಾಡಲು ಈ ತಂತ್ರ ಮಾಡಿದೆ. ಇದು ನ್ಯಾಯೋಚಿತವಲ್ಲ. ನನ್ನನ್ನು ಮತ್ತು ನನ್ನಂತಹ ಇತರ ಆಟಗಾರರನ್ನು ಮೌನಗೊಳಿಸುವ ಪ್ರಯತ್ನ. ನಾಡಾದಂತಹ ಸಂಸ್ಥೆಗಳು ಸರ್ಕಾರದ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತವೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆಜೀವ ಪರ್ಯಂತ ಅಮಾನತುಗೊಂಡರೂ ನಾನು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಹೋರಾಟ ನನ್ನದು ಮಾತ್ರವಲ್ಲ, ಪ್ರತಿಯೊಬ್ಬ ಆಟಗಾರನದ್ದಾಗಿದೆ. ಈ ನಿರ್ಧಾರದ ವಿರುದ್ಧ ನಾನು ಮೇಲ್ಮನವಿ ಸಲ್ಲಿಸುತ್ತೇನೆ ಮತ್ತು ನನ್ನ ಹಕ್ಕುಗಳಿಗಾಗಿ ಕೊನೆಯವರೆಗೂ ಹೋರಾಟ ಮುಂದುವರಿಸುತ್ತೇನೆ" ಎಂದು ಪುನಿಯಾ ಬರೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಕಾಲ ಕುಸ್ತಿ ಮೈದಾನದಿಂದ ನಿಷೇಧಿಸಿ ಆದೇಶ ಹೊರಡಿಸಿದೆ. ಹರಿಯಾಣದ ಸೋನಿಪತ್‌ನಲ್ಲಿ ಡೋಪಿಂಗ್ ಪರೀಕ್ಷೆಗೆ ಮೂತ್ರದ ಮಾದರಿ ಸಲ್ಲಿಸಲು ನಿರಾಕರಿಸಿದ ಬೆನ್ನಲ್ಲೆ ಪುನಿಯಾ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಕುಸ್ತಿಪಟು ಬಜರಂಗ್ ಪೂನಿಯಾಗೆ ನಾಲ್ಕು ವರ್ಷ ನಿಷೇಧ ಶಿಕ್ಷೆ