ಕಾನ್ಪುರ (ಉತ್ತರ ಪ್ರದೇಶ): ಭಾರತ ಮತ್ತು ಬಾಂಗ್ಲಾದೇಶ ನಡುವೆ 2ನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿರುವ ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಆದರೆ ಮೊದಲ ದಿನದ ಪಂದ್ಯವನ್ನು ನಿಗದಿತ ಸಮಯ 2 ಗಂಟೆಗೂ ಮೊದಲೇ ಮುಕ್ತಾಯಗೊಳಿಸಲಾಗಿದೆ.
ಹೌದು, ಇಂದು ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವೂ ಕೇವಲ 35 ಓವರ್ಗೆ ಮುಕ್ತಾಯಗೊಂಡಿದೆ. ಮಳೆ ಹಾಗೂ ಬೆಳಕಿನ ಕೊರತೆಯಿಂದಾಗಿ ಈ ಪಂದ್ಯವನ್ನು ನಿಗದಿತ ಸಮಯಕ್ಕೂ ಮೊದಲೇ ದಿನದಾಟವನ್ನು ಮುಕ್ತಾಯಗೊಳಿಸಿತು. ಇದಕ್ಕೂ ಮುನ್ನ ಪಂದ್ಯ ಆರಂಭವಾದ ಒಂದೂವರೆ ಗಂಟೆ ಬಳಿಕ ಮಳೆ ಬಂದು ಆಟ ನಿಲ್ಲಿಸಲಾಗಿತ್ತು.
ತಡರಾತ್ರಿ ಸುರಿದ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾಗಿತ್ತು. ಬೆಳಗ್ಗೆ 9ರ ಬದಲು 10 ಗಂಟೆಗೆ ಟಾಸ್ ಆಗಿತ್ತು. ನಂತರ ಪಂದ್ಯವು ಬೆಳಗ್ಗೆ 9:30ರ ಬದಲಾಗಿ 10:30ಕ್ಕೆ ಪ್ರಾರಂಭಗೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ಗೆ ಬಂದ ಬಾಂಗ್ಲಾ 35 ಓವರ್ಗಳಲ್ಲಿ 3ವಿಕೆಟ್ ನಷ್ಟಕ್ಕೆ 107 ರನ್ಗಳಿಸಿದೆ.
ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಬಾಂಗ್ಲಾ ಪರ ಆರಂಭಿಕ ಬ್ಯಾಟರ್ ಜಾಕಿರ್ ಹಸನ್ ಶೂನ್ಯಕ್ಕೆ ನಿರ್ಗಮಿಸಿದರೇ, 24 ಗಳಿಸಿ ಶದ್ಮನ್ ಇಸ್ಲಾಂ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನಾಯಕ ನಜ್ಮುಲ್ ಶಾಂಟೋ (31) ಎಲ್ಬಿ ಬಲೆಗೆ ಬಿದ್ದರು. ಸದ್ಯ ಮೊಮಿನಲ್ ಹಖ್ (40), ಮುಶಫಿಕರ್ ರಹೀಮ್ (6) ಮುಂದಿನ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ಬೌಲಿಂಗ್ನಲ್ಲಿ ಆಕಾಶ್ದೀಪ್ 10 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಉರುಳಿಸಿದರೇ, ಆರ್ ಅಶ್ವಿನ್ 9 ಓವರ್ಗಳಲ್ಲಿ 22 ರನ್ ನೀಡಿ 1 ವಿಕೆಟ್ ಕಿತ್ತಿದ್ದಾರೆ.
60 ವರ್ಷಗಳ ಬಳಿಕ ಇದೇ ಮೊದಲು:ಏತನ್ಮಧ್ಯೆ, ಈ ಟೆಸ್ಟ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕಾನ್ಪುರದಲ್ಲಿ ಇದು 24ನೇ ಟೆಸ್ಟ್ ಪಂದ್ಯವಾಗಿದ್ದು, ನಾಯಕನಾಗಿ ರೋಹಿತ್ ಶರ್ಮಾ ತವರಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮುನ್ನ 60 ವರ್ಷಗಳ ಹಿಂದೆ 1964ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂದಿನ ಭಾರತ ತಂಡದ ನಾಯಕ ಮಮನ್ಸೂರ್ ಅಲಿ ಖಾನ್ ಪಟೌಡಿ ಈ ನಿರ್ಧಾರ ತೆಗೆದುಕೊಂಡಿದ್ದರು.
ಇದನ್ನೂ ಓದಿ:2ನೇ ಟೆಸ್ಟ್‌ನಲ್ಲಿ ಶಾಕಿಂಗ್ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ: 60 ವರ್ಷದಲ್ಲೇ ಇದು ಎರಡನೇ ಬಾರಿ - Rohit Sharma shocking decision