ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ 2024 ಅಂತಿಮ ಘಟಕ್ಕೆ ತಲುಪಿದೆ. ಭಾನುವಾರ (ಆಗಸ್ಟ್ 11) ಒಲಿಂಪಿಕ್ 2024ರ ಸಮಾರೋಪ ಸಮಾರಂಭ ನಡೆಯಲಿದೆ. ಈ ವರ್ಷ ಒಲಿಂಪಿಕ್ನಲ್ಲಿ ಭಾರತದ ಕ್ರೀಡಾಪಟುಗಳು ನಿರಾಶದಾಯಕ ಪ್ರದರ್ಶನ ನೀಡಿದ್ದು, ಒಂದೇ ಒಂದು ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಟೇಬಲ್ ಪಟ್ಟಿಯಲ್ಲೂ ಭಾರತವು ಪಾಕಿಸ್ತಾನಕ್ಕಿಂತ ಹಿಂದಿದೆ. 40 ವರ್ಷಗಳ ಬಳಿಕ ಪಾಕಿಸ್ತಾನವು ಪದಕ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದೆ.
ಇದಕ್ಕೂ ಮುನ್ನ 1992ರಲ್ಲಿ ಪದಕ ಪಟ್ಟಿಯಲ್ಲಿ ಪಾಕಿಸ್ತಾನ ಭಾರತಕ್ಕಿಂತ ಮೇಲಿತ್ತು. ಆ ವರ್ಷ ಪಾಕಿಸ್ತಾನ ಕಂಚಿನ ಪದಕ ಗೆದ್ದಿತ್ತು ಮತ್ತು ಭಾರತಕ್ಕೆ ತನ್ನ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. 1992ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತಕ್ಕಿಂತ ಮೇಲುಗೈ ಸಾಧಿಸಿದೆ. ಪ್ರಸ್ತುತ ಪದಕ ಪಟ್ಟಿಯಲ್ಲಿ ಪಾಕಿಸ್ತಾನ 58ನೇ ಸ್ಥಾನದಲ್ಲಿದ್ದು, ಭಾರತ 69ನೇ ಸ್ಥಾನದಲ್ಲಿದೆ. 1984ರಲ್ಲಿ ಪಾಕಿಸ್ತಾನ 25ನೇ ಸ್ಥಾನಕ್ಕೆ ಅರ್ಹತೆ ಪಡೆದಿತ್ತು.
ನದೀಮ್ ಗೆದ್ದ ಚಿನ್ನ ಭಾರತವನ್ನು ಹಿಂದಿಕ್ಕಿತು: ಭಾರತ ಈ ವರ್ಷ ಇದುವರೆಗೆ ಕೇವಲ 6 ಪದಕಗಳನ್ನು ಗೆದ್ದಿದೆ. ಇದರಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು ಸೇರಿರುವುದನ್ನು ಹೊರತುಪಡಿಸಿದರೇ ಒಂದೇ ಒಂದು ಚಿನ್ನದ ಪದಕವನ್ನು ಗೆದ್ದಿಲ್ಲ. ಇದೇ ಸಮಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದರು ಮತ್ತು ಭಾರತದ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದರು. ನದೀಮ್ ಚಿನ್ನ ಗೆಲ್ಲುವುದರೊಂದಿಗೆ ಪಾಕಿಸ್ತಾನ ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲುಗೈ ಸಾಧಿಸಿತು.