ಬಾರ್ಬಡೋಸ್: ಹದಿನೇಳು ವರ್ಷಗಳು - ಮೂವರು ನಾಯಕರು ಮತ್ತು ಒಂದು ಶತಕೋಟಿಗೂ ಹೆಚ್ಚು ಜನರ ಪ್ರಾರ್ಥನೆಗಳ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತವು T20 ವಿಶ್ವಕಪ್ ಎಂಬ ಪ್ರಶಸ್ತಿಯ ಗರಿಯನ್ನು ತನ್ನ ಕಿರೀಟಕ್ಕೆ ಸಿಕ್ಕಿಸಿಕೊಂಡಿದೆ.
ಇದೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಟೀಂ ಇಂಡಿಯಾದ ಪ್ರತಿಯೊಬ್ಬರೂ ನೀಡಿದ ಅಸೈನ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ್ದು ಕಂಡು ಬಂತು. ಫೈನಲ್‌ನಲ್ಲಿ ವಿರಾಟ್ ಕೊಹ್ಲಿ, ಸೆಮಿಫೈನಲ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಅದ್ಬುತ ಪ್ರದರ್ಶನ ತೋರಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾದರು.
ಇನ್ನು ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ತಂಡವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಈ ಬಾರಿ ಕಪ್ ಕೈ ತಪ್ಪದಂತೆ ಯೋಜನೆ ರೂಪಿಸಿ ಅಂತಿಮವಾಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಇದರ ಹೊರತಾಗಿ ವಿಶ್ವದಲ್ಲೇ ಅತ್ಯುತ್ತಮವಾಗಿ ಹೊರಹೊಮ್ಮಿದ ಬೌಲಿಂಗ್ ಪಡೆಯನ್ನು ಟೀಂ ಇಂಡಿಯಾ ಇದೀಗ ಹೊಂದಿದೆ. ಬುಮ್ರಾ ಅವರಂತಹ ವೇಗಿಗಳನ್ನು ಸೃಷ್ಟಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಪಿಚ್ ಗಳಲ್ಲೂ ಭಾರತ ತಂಡ ಶ್ರೇಷ್ಠ ಆಟವನ್ನು ಆಡಿದೆ. ಅಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳುವಂತೆ ತಂಡವನ್ನು ರೂಪಿಸಿಕೊಂಡಿದ್ದು ಟೀಂ ಇಂಡಿಯಾಕ್ಕೆ ಪ್ಲಸ್ ಪಾಯಿಂಟ್ ಆಯಿತು.