ETV Bharat / state

ಹೆಚ್​ಎಎಲ್ ನಿರ್ಮಿತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ರೋಮಾಂಚನಕಾರಿ ಶಕ್ತಿ ಪ್ರದರ್ಶನಕ್ಕೆ ಮನಸೋತ ಜನ - AERO INDIA 2025

ಹೆಚ್​ಎಎಲ್ ನಿರ್ಮಿತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಶಕ್ತಿ ಪ್ರದರ್ಶನಕ್ಕೆ ನೋಡುಗರು ಮನಸೂರೆಗೊಂಡಿದ್ದಾರೆ.

light-utility-helicopter
ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ETV Bharat)
author img

By ETV Bharat Karnataka Team

Published : Feb 10, 2025, 7:53 PM IST

Updated : Feb 10, 2025, 8:03 PM IST

ಬೆಂಗಳೂರು : ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ (ಫೆ.10) ಆರಂಭಗೊಂಡಿರುವ ಏರೋ ಇಂಡಿಯಾದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವತಿಯಿಂದ ನಿರ್ಮಾಣಗೊಂಡಿರುವ ಹಗುರ ಹಾಗೂ ಲಘು ಹೆಲಿಕಾಪ್ಟರ್​ಗಳು ವೈಮಾನಿಕ ಪ್ರದರ್ಶನದಲ್ಲಿ ನೋಡುಗರಿಗೆ ಬೆರಗು ಮೂಡಿಸಿದವು. ಪ್ರಮುಖವಾಗಿ ತುಮಕೂರಿನ ಗುಬ್ಬಿ ತಾಲೂಕಿನ ಬಿದರೆ ಕಾವಲ್ ಸಂದ್ರ ಉತ್ಪಾದಕ ಘಟಕದಲ್ಲಿ ತಯಾರಿಸಿರುವ ಎಲ್​ಯುಹೆಚ್ ಹೆಲಿಕಾಪ್ಟರ್​ ವೀಕ್ಷಕರ ಮನಸೊರೆಗೊಳಿಸಿತು.

ಮೇಕ್ ಇನ್ ಇಂಡಿಯಾ ರೀತಿ ಮೇಕ್ ಕರ್ನಾಟಕ ಎಂಬಂತೆ ಸರ್ಕಾರಿ ಸ್ವಾಮ್ಯದ ಹೆಚ್ಎಎಲ್ ಸಂಪೂರ್ಣ ದೇಶಿಯ ತಂತ್ರಜ್ಞಾನ ಬಳಸಿಕೊಂಡಿರುವ ನೂತನ ಹೆಲಿಕಾಪ್ಟರ್​ ಅಭಿವೃದ್ಧಿಪಡಿಸಿದ್ದು, ವೈಮಾನಿಕ ಪ್ರದರ್ಶನದಲ್ಲಿ ತನ್ನ ಶಕ್ತಿಯನ್ನ ಪ್ರದರ್ಶಿಸಿತು.

ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ರೋಮಾಂಚನಕಾರಿ ಶಕ್ತಿ ಪ್ರದರ್ಶನಕ್ಕೆ ಮನಸೋತ ಜನ (ETV Bharat)

ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್​ ; ತುಮಕೂರಿನ ಹೆಚ್ಎಎಲ್ ಕಾರ್ಖಾನೆಯಲ್ಲಿ ನಿರ್ಮಿಸಿರುವ ನೂತನ ಹೆಲಿಕಾಪ್ಟರ್​ ಉತ್ಪಾದನೆಗೆ ವಿದೇಶದ ಮೇಲೆ ಅವಲಂಬಿಸದೆ, ಸ್ವದೇಶಿಯವಾಗಿ ಪ್ರತಿಯೊಂದು ಬಿಡಿಭಾಗಗಳನ್ನ ಇಲ್ಲಿಯೇ ತಯಾರಿಸಲಾಗಿದೆ. ಸದ್ಯ ಭಾರತೀಯ ವಾಯುಸೇನೆಯಲ್ಲಿ ಹಳೆಯದಾಗಿರುವ ಚೀತಾ, ಚೇತಕ್ ಹೆಲಿಕಾಪ್ಟರ್ ಬಳಕೆಯನ್ನ ಕಡಿಮೆ ಮಾಡಲಾಗುತ್ತಿದೆ. ಕ್ಲಿಷ್ಟಕರ ಸಂದರ್ಭದಲ್ಲಿ ಬಳಸಲಾಗುವ ಎಲ್​ಯುಹೆಚ್​ನ್ನ ಉಪಯೋಗಿಸಲು ರಕ್ಷಣಾ ಇಲಾಖೆ ನಿರ್ಧರಿಸಿರುವುದರಿಂದ ಎಚ್ಎಎಲ್ ತಯಾರಿಸಿದ ಹೆಲಿಕಾಪ್ಟರ್​ಗೆ ಬೇಡಿಕೆ ಸೃಷ್ಟಿಯಾಗಿದೆ.

5G ತಂತ್ರಜ್ಞಾನ ಅಳವಡಿಕೆ ; ಐದನೇ ತಲೆಮಾರಿನ ಎಲ್​ಯುಹೆಚ್ ಹೆಲಿಕಾಪ್ಟರ್​ನಲ್ಲಿ ಗಾಜಿನ ಕಾಕ್ ಪಿಟ್​ ಹಾಗೂ ಹೊಸ ಡಿಸ್ ಪ್ಲೇಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿವೆ. ಪ್ರತಿ ಗಂಟೆಗೆ 235 ಕಿಲೋಮೀಟರ್ ವೇಗದಲ್ಲಿ ಚಲಿಸಲಿದ್ದು, ಗರಿಷ್ಠ 350 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ದೇಶದ ಸೇನಾಪಡೆಗಳಿಗೆ 20 ಸಾವಿರ ಅಡಿಗಳಿಗಿಂತ ಎತ್ತರ ಮಟ್ಟದಲ್ಲಿ ಹಾರಾಟ ನಡೆಸುವ ಬೆರಳೆಣಿಕೆ ಹೆಲಿಕಾಪ್ಟರ್​ಗಳ ಪೈಕಿ ಎಲ್​​ಯುಹೆಚ್ ಒಂದಾಗಿದೆ.

ಯಾವೆಲ್ಲಾ ಕಾರ್ಯಾಚರಣೆಗೆ ಬಳಕೆ : ಸಿಯಾಚಿನ್​ನಂಥ ಪ್ರದೇಶದಲ್ಲಿ ಹಾರುವ ಹಾಗೂ ಶಾರ್ಟ್ ಲ್ಯಾಂಡಿಂಗ್ ಮಾಡಬಹುದಾಗಿದೆ. ಇದು ಗರಿಷ್ಠ 500 ಕೆ.ಜಿ. ಭಾರ ಹೊತ್ತೊಯ್ಯಲಿದೆ. ನಾಗರಿಕರ ರಕ್ಷಣೆ, ವಸ್ತುಗಳ ಸಾಗಣೆ ಹಾಗೂ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ವಿಭಿನ್ನ ಕಾರ್ಯಾಚರಣೆಗಳನ್ನು ನಡೆಸುವ ಉದ್ದೇಶದಿಂದ ಈ ಯುದ್ಧ ಹೆಲಿಕಾಪ್ಟರ್ ಅಭಿವೃದ್ಧಿಪಡಿಸಿದೆ. ಲೈಟ್ ಯುಟಿಲಿಟಿ ಕಾಪ್ಟರ್ ನಲ್ಲಿ ಪೈಲಟ್ ಜೊತೆಗೆ ಸಹ ಪೈಲಟ್ ಒಳಗೊಂಡಂತೆ 10 ಮಂದಿ ಕೂರಬಹುದಾಗಿದೆ. ಮುಂದಿನ 20 ವರ್ಷಗಳಲ್ಲಿ 1 ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರ್ ತಯಾರಿಕೆ ಗುರಿಯನ್ನು ಹೆಚ್​ಎಎಲ್ ಹೊಂದಿದೆ.

ಇದನ್ನೂ ಓದಿ : ಏರೋ ಇಂಡಿಯಾ 2025: ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಲ್ಲಿ ಕನ್ನಡಿಗ - AERO INDIA 2025

Last Updated : Feb 10, 2025, 8:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.