Sunil Gavaskar On Pant: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 26ರನ್ ಗಳಿಸಿ ಬೋಲ್ಯಾಂಡ್ ಬೌಲಿಂಗ್ನಲ್ಲಿ ಔಟಾದರು. ಆದರೆ ಮನ ಬಂದಂತೆ ಬ್ಯಾಟ್ ಬೀಸಿದ ಪಂತ್ ಅನಗತ್ಯವಾಗಿ ವಿಕೆಟ್ ಒಪ್ಪಿಸಿದ್ದು ಗವಾಸ್ಕರ್ ಕೋಪಕ್ಕೆ ಕಾರಣವಾಗಿದೆ.
ಈ ಪಂದ್ಯದಲ್ಲಿ ಪಂತ್ ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾಗಿದ್ದರು. 2 ರನ್ ಗಳಿಸಿದ್ದಾಗ ಕ್ಯಾಚ್ ನಿಂದ ಪಾರಾದ ಪಂತ್ ನಂತರ ರನೌಟ್ ಅಪಾಯದಿಂದಲೂ ಪಾರಾಗಿದ್ದರು. ಎರಡು ಬಾರಿ ಜೀವದಾನ ಪಡೆದರೂ ಸುಧಾರಿಸಿಕೊಳ್ಳದ ಪಂತ್ ಬೋಲ್ಯಾಂಡ್ ಎಸೆದ 56ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸ್ಕೂಪ್ ಶಾಟ್ ಆಡಲು ಹೋಗಿ ನೇರವಾಗಿ ಥರ್ಡ್ ಮ್ಯಾನ್ ಕಡೆ ಫೀಲ್ಡಿಂಗ್ ಮಾಡುತ್ತಿದ್ದ ನಾಥನ್ ಲಿಯಾನ್ ಕೈಗೆ ಕ್ಯಾಚಿತ್ತರು.
ರಿಷಬ್ ಔಟಾದ ರೀತಿಗೆ ಸುನಿಲ್ ಗವಾಸ್ಕರ್ ಕೋಪಗೊಂಡರು. ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲೈವ್ ಕಾಮೆಂಟರಿಯಲ್ಲಿ ಟೀಕಿಸಿದರು. ನಿಮ್ಮ ಶಾಟ್ ಆಯ್ಕೆ ತುಂಬಾ ಕೆಟ್ಟದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ತಂಡ ಅಂತಹ ಹೊಡೆತವನ್ನು ಆಡುವ ಸ್ಥಿತಿಯಲ್ಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.