ಹುಬ್ಬಳ್ಳಿ:ಇಲ್ಲಿನ ಉದಯೋನ್ಮುಖ ಆಟಗಾರ್ತಿರೋಲರ್ ಡರ್ಬಿ ಸ್ಕೇಟರ್ ತ್ರಿಶಾ ಪ್ರವೀಣ ಜಡಾಲಾ ಅವರು ಸೆ.18ರಿಂದ ಸೆ.22ರವರೆಗೆ ಇಟಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಸ್ಕೇಟ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ತ್ರಿಶಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ್ದಾರೆ. ಕೆಎಲ್‌ಇ ಜೆಜಿ ಕಾಲೇಜಿನಲ್ಲಿ ಬಿಕಾಂ ವಿದ್ಯಾರ್ಥಿನಿಯಾಗಿರುವ ಇವರು ಸ್ಕೇಟಿಂಗ್ ಜೊತೆಗೆ ಶೈಕ್ಷಣಿಕವಾಗಿಯೂ ಮುಂದಿದ್ದಾರೆ.
ಉನ್ನತ-ಆಕ್ಟೇನ್ ಈವೆಂಟ್‌ಗಳ ಸರಣಿಯಲ್ಲಿ ಸ್ಪರ್ಧಿಸುವ ಜಗತ್ತಿನೆಲ್ಲೆಡೆಯ ಅತ್ಯುತ್ತಮ ಕ್ರೀಡಾಪಟುಗಳನ್ನು ವಿಶ್ವ ಸ್ಕೇಟ್ ಚಾಂಪಿಯನ್‌ಶಿಪ್ ಒಳಗೊಂಡಿದೆ.
ಇಟಲಿಯಲ್ಲಿ ವಿಶ್ವ ಸ್ಕೇಟ್ ಚಾಂಪಿಯನ್‌ಶಿಪ್ (www.indiaskate.com) ತ್ರಿಶಾ ಪ್ರತಿಕ್ರಿಯಿಸಿ, "ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಒಂದು ಕನಸು. ನನ್ನ ಪೋಷಕರು, ತರಬೇತುದಾರರು, ಕುಟುಂಬ ಮತ್ತು ಸ್ನೇಹಿತರ ಬೆಂಬಲಕ್ಕೆ ನಾನು ಕೃತಜ್ಞಳಾಗಿದ್ದೇನೆ. ಸ್ಪರ್ಧೆಯಲ್ಲಿ ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ತ್ರಿಶಾ ಸ್ಪರ್ಧೆಗೆ ಆಯ್ಕೆ ಆಗಿರುವುದು ಇತರೆ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ ಮತ್ತು ಆಕೆಯ ಉತ್ಸಾಹಕ್ಕೆ ಜಾಗತಿಕ ವೇದಿಕೆಯಲ್ಲಿ ಯಶಸ್ಸು ಸಿಗಲಿ" ಎಂದು ತ್ರಿಶಾ ಅವರ ತಂದೆ ಪ್ರವೀಣ ಜಡಾಲ ತಿಳಿಸಿದರು.
ಇದನ್ನೂ ಓದಿ:ಮಂಗಳೂರು: ಬಿದಿರಿನಲ್ಲಿ ಸುಂದರ ಮನೆ ಕಟ್ಟಿಸಿದ ವೈದ್ಯೆ, ಆಕರ್ಷಿಸುತ್ತಿದೆ ಪರಿಸರಸ್ನೇಹಿ ನಿವಾಸ - World Bamboo Day