Kieron Pollard 900 Sixes:ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕೀರನ್ ಪೊಲಾರ್ಡ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ವಿಶ್ವಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅದರಲ್ಲೂ ಟಿ -20 ಕ್ರಿಕೆಟ್ನಲ್ಲಿ ತಮ್ಮ ವೇಗದ ಬ್ಯಾಟಿಂಗ್ ಮೂಲಕವೇ ಚಿರಪರಿಚಿತರಾಗಿರುವ ಪೊಲಾರ್ಡ್ ಹಲವಾರು ದಾಖಲೆಗಳನ್ನು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಇದೀಗ ಈ ಚುಟುಕು ಸ್ವರೂಪದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಸಧ್ಯ ಅಂತಾರಾಷ್ಟ್ರೀಯ ಲೀಗ್ ಟಿ20 (ILT20)ಯಲ್ಲಿ ಎಮಿರೇಟ್ಸ್ ತಂಡದ ಪರ ಆಡುತ್ತಿರುವ ಪೊಲಾರ್ಡ್ ಗುರುವಾರ ನಡೆದ ಡೆಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟ್ ಮಾಡಿದ ಪೊಲಾರ್ಡ್ 23 ಎಸೆತಗಳಲ್ಲಿ 36 ರನ್ ಚಚ್ಚಿದ್ದರು. ಇದರಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ಗಳು ಕಲೆ ಹಾಕಿದರು.
900+ ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್:ಮೂರು ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಂತೆ ಪೊಲಾರ್ಡ್ ಟಿ-20 ಕ್ರಿಕೆಟ್ನಲ್ಲಿ 900+ ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಮೊದಲ ಇನ್ನಿಂಗ್ಸ್ನ 19ನೇ ಓವರ್ನಲ್ಲಿ ಲ್ಯೂಕಿ ಫರ್ಗುಸನ್ ಬೌಲಿಂಗ್ನಲ್ಲಿ ಪೊಲಾರ್ಡ್ 900ನೇ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.
ಪೊಲಾರ್ಡ್ 2006ರಲ್ಲಿ ತಮ್ಮ T20 ವೃತ್ತಿಜೀವನ ಪ್ರಾರಂಭಿಸಿದರು. ಈವರೆಗೂ ಅವರು ಅಂತಾರಾಷ್ಟ್ರೀಯ ಮತ್ತು ದೇಶೀಯ ಲೀಗ್ ಸೇರಿ ಒಟ್ಟು 690 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 901 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ 31.23ರ ಸರಾಸರಿಯಲ್ಲಿ 13,429 ರನ್ಗಳನ್ನು ಪೂರ್ಣಗೊಳಿಸಿದ್ದು, 150.38 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಪೊಲಾರ್ಡ್ ಟಿ20 ಸ್ವರೂಪದಲ್ಲಿ ಒಂದು ಶತಕ ಮತ್ತು 60 ಅರ್ಧಶತಕಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಪೊಲಾರ್ಡ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ವಿದೇಶದಲ್ಲಿ ಟಿ-20 ಲೀಗ್‌ಗಳಲ್ಲಿ ಆಡಿದ ಪೊಲಾರ್ಡ್, ತಾವು ಪ್ರತಿನಿಧಿಸುತ್ತಿದ್ದ ತಂಡಗಳನ್ನು ಚಾಂಪಿಯನ್ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಪಡೆದಿರುವ ಪೊಲಾರ್ಡ್, ಆದರೆ ಇತರ ಟಿ20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು