ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಇಂದು ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ (ಇಂದು) ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ, ಚೆಸ್ ಆಟಗಾರ ಡಿ. ಗುಕೇಶ್, ಹಾಕಿ ಪ್ಲೇಯರ ಹರ್ಮನ್‌ಪ್ರೀತ್ ಸಿಂಗ್, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಮತ್ತು ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಬಾಕರ್ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
🏆#NationalSportsAwards🏆
— PIB India (@PIB_India) January 17, 2025
Double medalist at the #ParisOlympics @realmanubhaker receives Major Dhyan Chand Khel Ratna Award 2024 from President Droupadi Murmu @rashtrapatibhvn @YASMinistry #NationalSportsAwards2024 pic.twitter.com/CQkXIgYlVr
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು (NSA) ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ನೀಡಲಾಗುತ್ತದೆ. ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಹಿಂದಿನ ನಾಲ್ಕು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ.
🏆#NationalSportsAwards🏆
— PIB India (@PIB_India) January 17, 2025
President Droupadi Murmu confers Major Dhyan Chand Khel Ratna Award 2024 on World Chess Champion @DGukesh at Rashtrapati Bhavan
@rashtrapatibhvn @YASMinistry #NationalSportsAwards2024 pic.twitter.com/Y2J6vdu4yI
ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಡಿ. ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ ಎರಡು ಕಂಚಿನ ಪದಕ ವಶಪಡಿಸಿಕೊಂಡಿದ್ದರು.
🏆#NationalSportsAwards🏆
— PIB India (@PIB_India) January 17, 2025
President Droupadi Murmu confers Major Dhyan Chand Khel Ratna Award 2024 to Para-Athlete Praveen Kumar@rashtrapatibhvn @YASMinistry #NationalSportsAwards2024 pic.twitter.com/ZE6wWAQ97H
ಒಂದೇ ಆವೃತ್ತಿಯಲ್ಲಿ ಅವಳಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ದಾಖಲೆಯನ್ನು ಬರೆದಿದ್ದರು. ಮತ್ತೊಂದೆಡೆ ಇದೇ ಒಲಿಂಪಿಕ್ಸ್ನಲ್ಲಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ಹರ್ಮನ್‌ಪ್ರೀತ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದ್ದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರವೀಣ್ ಕುಮಾರ ಎತ್ತರ ಜಿಗಿತ T64 ವಿಭಾಗದಲ್ಲಿ ಚಿನ್ನ ಪಡೆದಿದ್ದರು. ಈ ನಾಲ್ವರು ಕ್ರೀಡಾಪಟುಗಳಿಗೆ ಅತ್ಯುನ್ನತ ಖೇಲ್ ರತ್ನ ನೀಡಿ ಗೌರವಿಸಲಾಗಿದೆ.
🏆#NationalSportsAwards🏆
— PIB India (@PIB_India) January 17, 2025
Men’s Hockey Team Captain Harmanpreet Singh (@13harmanpreet) receives the Major Dhyan Chand Khel Ratna Award 2024 from President Droupadi Murmu at Rashtrapati Bhavan@rashtrapatibhvn @YASMinistry #NationalSportsAwards2024 pic.twitter.com/5j4X13ffE2
32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ
ಇವರೊಂದಿಗೆ 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಹಾಗೂ ಐವರು ಕ್ರೀಡಾ ಸಾಧುಕರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಬ್ಯಾಡ್ಮಿಂಟನ್ ತಾರೆ ಮುರಳೀಧರನ್ ಮತ್ತು ಫುಟ್ಬಾಲ್ ಆಟಗಾರ ಅರ್ಮಾಂಡೋ ಆಗ್ನೆಲೊ ಕೊಲಾಕೊ ಲೈಫ್ಟೈಮ್ ಅಚಿವ್ಮೆಂಟ್ ಕೆಟಗರಿಯಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಅರ್ಜುನ ಪ್ರಶಸ್ತಿ ಪಡೆದ ಮೂವತ್ತೆರಡು ಕ್ರೀಡಾಪಟುಗಳಲ್ಲಿ ಹದಿನೇಳು ಪ್ಯಾರಾ ಅಥ್ಲೀಟ್‌ಗಳು ಸೇರಿದ್ದಾರೆ. ಈ ಪಟ್ಟಿಯಲ್ಲಿ ಜ್ಯೋತಿ ಯರ್ರಾಜಿ, ಅನು ರಾಣಿ, ನಿತು, ಸವೀತಿ, ವಂತಿಕಾ ಅಗರವಾಲ್, ಸಲೀಮಾ ಟೆಟೆ, ಅಭಿಷೇಕ್, ಸಂಜಯ್, ಜರ್ಮನ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ರಾಕೇಶ್ ಕುಮಾರ್, ಪ್ರೀತಿ ಪಾಲ್, ಜೀವನಜಿ ದೀಪ್ತಿ, ಅಜೀತ್ ಸಿಂಗ್, ಸಚಿನ್ ಸರ್ಜೆರಾವ್ ಖಿಲಾರಿ, ಪ್ರಣಾ ಸೊಂಬೀರ್ ಎಚ್ ಹೊಕಾಟೊ ಸೆಮಾ, ಸಿಮ್ರಾನ್, ನವದೀಪ್, ನಿತೇಶ್ ಕುಮಾರ್, ತುಳಸಿಮತಿ ಮುರುಗೇಶನ್, ನಿತ್ಯ ಶ್ರೀ ಸುಮತಿ ಶಿವನ್, ಮನಿಶಾ ರಾಮದಾಸ್, ಕಪಿಲ್ ಪರ್ಮಾರ್, ಮೋನಾ ಅಗರ್ವಾಲ್, ರುಬಿನಾ ಫ್ರಾನ್ಸಿಸ್, ಸ್ವಪ್ನಿಲ್ ಸುರೇಶ್ ಕುಸಾಲೆ, ಸರಬ್ಜೋತ್ ಸಿಂಗ್, ಅಭಯ್ ಸಿಂಗ್, ಸಜನ್ ಪ್ರಕಾಶ್ ಮತ್ತು ಅಮನ್ ಇದ್ದಾರೆ.
ಇದನ್ನೂ ಓದಿ: RCBಗರ ಟ್ರೋಲ್ ಮಾಡಿದ್ದ CSK ಕ್ಯಾಪ್ಟನ್ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಆರ್ಸಿಬಿ!