ETV Bharat / state

ಸಚಿವಾಲಯ ಸಿಬ್ಬಂದಿಗಾಗಿ ವಿಧಾನಸೌಧದ ಆವರಣದಲ್ಲಿ ಇವಿ ವಾಹನ ಮೇಳ - EV VEHICLE FAIR

ಮೇಳದಲ್ಲಿ ಇವಿ ಸೈಕಲ್, ದ್ವಿಚಕ್ರ ವಾಹನ ಹಾಗೂ ಕಾರು ಅದರಲ್ಲೂ ರಿಮೋಟ್ ಕಾರು ಸಿಬ್ಬಂದಿಯ ಗಮನ ಸೆಳೆದವು.

Etv Bharat
Etv Bharat (Etv Bharat)
author img

By ETV Bharat Karnataka Team

Published : Jan 17, 2025, 9:08 PM IST

ಬೆಂಗಳೂರು: ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಬೆಸ್ಕಾಂ ಹಾಗೂ ಸಚಿವಾಲಯ ನೌಕರರ ಸಂಘ ಜಂಟಿಯಾಗಿ ಇಂದಿನಿಂದ ಎರಡು ದಿನಗಳ ವಿಶೇಷ ಇವಿ ಮೇಳ ಆಯೋಜಿಸಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮುಂದಿರುವ ಆವರಣದಲ್ಲಿ ಆಯೋಜನೆ ಮಾಡಿರುವ ಇವಿ ಮೇಳವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಇಂದು ಉದ್ಘಾಟಿಸಿದರು.

ವಾಯು ಮಾಲಿನ್ಯ ನಿಯಂತ್ರಣಕ್ಕೆ ಇದುವೇ ಮಾರ್ಗ: ನಂತರ ಮಾತನಾಡಿದ ಸಚಿವರು, "ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ಇಲೆಕ್ಟ್ರಿಕ್ ವಾಹನಗಳು ಪರಿಹಾರವಾಗಿದೆ. ಇವಿ ಬಳಕೆ ಉತ್ತೇಜಿಸಲು ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಕರ್ನಾಟಕ ಮಾದರಿಯಾಗಿದೆ. 2017ರಲ್ಲೇ ಇವಿ ನೀತಿ ಘೋಷಿಸುವ ಮೂಲಕ ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿದೆ. 2017ರಲ್ಲಿ ವಾರ್ಷಿಕ 11 ಸಾವಿರದಷ್ಟಿದ್ದ ಇಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಸ್ತುತ ಅಂದಾಜು ವಾರ್ಷಿಕ 1,50,000ಕ್ಕೇರಿದೆ. ಇದು ನಮ್ಮ ಇವಿ ನೀತಿಗೆ ಸ್ಪಷ್ಟ ಪುರಾವೆಯಾಗಿದೆ" ಎಂದು ಅಭಿಪ್ರಾಯಪಟ್ಟರು.

EV vehicle fair
ಇವಿ ವಾಹನ ಮೇಳ (ETV Bharat)

ಕರ್ನಾಟಕ ದೇಶದಲ್ಲೇ ನಂಬರ್​ ಒನ್​: "ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಒಟ್ಟು 5,765 ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 4,462 ಚಾರ್ಜಿಂಗ್ ಕೇಂದ್ರಗಳಿವೆ. ಇದು ಇಂಧನ ಇಲಾಖೆ ಇವಿಗಳಿಗೆ ನೀಡುತ್ತಿರುವ ಪ್ರೋತ್ಸಾಹದ ಸಂಕೇತವಾಗಿದೆ" ಎಂದರು.

EV vehicle fair
ಇವಿ ವಾಹನ ಮೇಳ (ETV Bharat)

ಶುದ್ಧ ಇಂಧನದ ಬಳಕೆಗೆ ಒತ್ತು ನೀಡಲಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, "ಸಚಿವಾಲಯದ ನೌಕರರು ಶುದ್ಧ ಇಂಧನದ ಬಳಕೆಗೆ ಒತ್ತು ನೀಡಲಿ ಎಂಬ ಉದ್ದೇಶದಿಂದ ಇವಿ ಮೇಳ ಆಯೋಜಿಸಲಾಗಿದೆ. ಇವಿ ಬಳಸುವ ಮೂಲಕ ಅವರು ಇತರರಿಗೂ ಮಾದರಿಯಾಗಲಿ. ನಮ್ಮ ಸಚಿವಾಲಯದ ನೌಕರರು ಇವಿ ವಾಹನಗಳನ್ನು ಖರೀದಿಸಲು ಇವಿ ತಯಾರಕರು ವಿಶೇಷ ರಿಯಾಯಿತಿ ನೀಡಿದ್ದರೆ, ಬ್ಯಾಂಕಿನವರು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದೆ ಬಂದಿದ್ದಾರೆ" ಎಂದರು.

EV vehicle fair
ಇವಿ ವಾಹನ ಮೇಳ (ETV Bharat)

ವಿಶೇಷ ರಿಯಾಯಿತಿ: ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, "ಪರಿಸರ ಸ್ನೇಹಿ ಇವಿಗಳನ್ನು ಸಚಿವಾಲಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂಬ ಉದ್ದೇಶದಿಂದ ಇವಿ ಮೇಳ ಆಯೋಜಿಸಲಾಗಿದೆ. ಇವಿ ಮಾರಾಟಗಾರರು ವಿಶೇಷ ರಿಯಾಯಿತಿಗಳ್ನು ನೀಡುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಿ" ಎಂದು ಹೇಳಿದರು.

EV vehicle fair
ಇವಿ ವಾಹನ ಮೇಳ (ETV Bharat)

"ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲ ಸೌಕರ್ಯವನ್ನು ಕಲ್ಪಿಸುವ ನೋಡಲ್ ಏಜನ್ಸಿಯಾಗಿರುವ ಬೆಸ್ಕಾಂ, ಇವಿ ಚಾರ್ಜಿಂಗ್ ಸಂಪರ್ಕ ಜಾಲ ವಿಸ್ತರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಮೂಲ ಸೌಕರ್ಯವನ್ನು ಹೆಚ್ಚಿಸಲು ಬೆಸ್ಕಾಂನ ಪ್ರಯತ್ನಗಳು ಇಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕಾರಣವಾಗಿವೆ‌‌" ಎಂದು ತಿಳಿಸಿದರು.

ಇವಿ ವಾಹನ ಮೇಳ (ETV Bharat)

ಡೌನ್ ಪೇಮೆಂಟ್ ಇಲ್ಲದೇ ಮತ್ತು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ: ಬೆಸ್ಕಾಂ ವ್ಯವಸ್ಥಾಪಕ‌ ನಿರ್ದೇಶಕ ಮಹಾಂತೇಶ ಬೀಳಗಿ ಮಾತನಾಡಿ, "ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಮೇಳದಲ್ಲಿ ಸಚಿವಾಲಯ ಉದ್ಯೋಗಿಗಳು ಯಾವುದೇ ಡೌನ್ ಪೇಮೆಂಟ್ ಇಲ್ಲದೇ ಮತ್ತು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯದೊಂದಿಗೆ ವಾಹನ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಮೇಳದಲ್ಲಿ 16 ಇವಿ ಕಂಪನಿಗಳು ಭಾಗವಹಿಸಿದ್ದು, ಈ ರಿಯಾಯಿತಿ ಮಾರಾಟ ಮುಂದುವರಿಯಲಿದೆ" ಎಂದು ಹೇಳಿದರು.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ ಮಾತನಾಡಿ, "ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನೆರವಾಗಲು ಬೆಸ್ಕಾಂ ಸಹಯೋಗದೊಂದಿಗೆ ಈ ಮೇಳ ಆಯೋಜಿಸಲಾಗಿದೆ. ಸಚಿವಾಲಯ ಉದ್ಯೋಗಿಗಳಲ್ಲಿ ಶೇ. 5 ರಷ್ಟು ಮಂದಿ ಇವಿ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಈ ಮೇಳದ ಮಲಕ ಇತರೂ ಇವಿ ವಾಹನಗಳನ್ನು ಖರೀದಿಸಬೇಕು" ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ನಿರ್ದೇಶಕ ತಾಂತ್ರಿಕ ರಮೇಶ್ ಎಚ್.ಜೆ., ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್.ದಯಾನಂದ್, ಬೆಸ್ಕಾಂ ಮತ್ತು ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೇಳದ ವಿಶೇಷತೆ: ಮೇಳದಲ್ಲಿ ಒಟ್ಟು 18 ಮಳಿಗೆಗಳಿದ್ದು, ಅವುಗಳಲ್ಲಿ ಕಾರುಗಳಿಗೆ ಸಂಬಂಧಿಸಿದ ನಾಲ್ಕು ಮತ್ತು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ 10 ಮಳಿಗೆಗಳಿವೆ. ಇದಲ್ಲದೇ ಎರಡು ಬ್ಯಾಂಕ್​ಗಳು, ಬೆಸ್ಕಾಂನ ಒಂದು ಮಳಿಗೆಗಳಿವೆ. ಎರಡು ದಿನಗಳಲ್ಲಿ 5 ಸಾವಿರ ವಾಹನಗಳು ಮಾರಾಟವಾಗುವ ನಿರೀಕ್ಷೆಯಿದೆ.

ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ಉತ್ಸಾಹದಿಂದಲೇ ಮೇಳದಲ್ಲಿ ಪಾಲ್ಗೊಂಡು ಇವಿ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇವಿ ಸೈಕಲ್, ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ.

ನಗರದ ವಾಯುಮಾಲಿನ್ಯ ಹಾಗೂ ಏರುತ್ತಿರುವ ವಾಹನಗಳ ಇಂಧನ ದರ ಹೊರೆ ತಗ್ಗಿಸಲು ಇವಿ ವಾಹನಗಳ ಬಳಕೆಯೇ ಪರಿಹಾರ. ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಸಹ ಇರುವುದಿಲ್ಲ. ಸಚಿವಾಲಯ ನೌಕರರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ. ಇಂದು ಮತ್ತು ನಾಳೆ ವಿಧಾನಸೌಧದ ಆವರಣದಲ್ಲಿ ಈ ಮೇಳ ನಡೆಯಲಿದೆ.

ಎಲ್ಲರ ಗಮನಸೆಳೆದ ರಿಮೋಟ್ ಕಾರು: ಉತ್ತಮ ಆಕರ್ಷಕವಾಗಿ ಕಾಣುವ ಬೈಕ್ ಹಾಗೂ ಕಾರುಗಳು ಸಚಿವಾಲಯದ ಸಿಬ್ಬಂದಿ ಗಮನ ಸೆಳೆದಿತ್ತು. ರಿಮೋಟ್ ಕಾರು ಪ್ರಮುಖ ಆಕರ್ಷಣಿಯವಾಗಿತ್ತು.

ಇದನ್ನೂ ಓದಿ: ಮಹಾಕುಂಭ ಮೇಳ: 3.5 ಕೋಟಿ ಭಕ್ತರು, ಸಾಧು - ಸಂತರಿಂದ 'ಅಮೃತ ಸ್ನಾನ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.