RCB Trolls CSK Skipper: ಕಳೆದ ತಿಂಗಳು ಸಾರ್ವಜನಿಕವಾಗಿಯೇ ರಾಯಲ್ RCBಗರ ವಿರುದ್ಧ ಟ್ರೋಲ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ ಆರ್ಸಿಬಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ಋತುರಾಜ್ ಗಾಯಕ್ವಾಡ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆಗೆ ತೆರಳಿದ್ದ ಗಾಯಕ್ವಾಡ್ ಮಾತನಾಡಲು ಮುಂದಾಗಿದ್ದಾರೆ. ಆದರೇ ಅವರ ಕೈಯಲ್ಲಿದ್ದ ಮೈಕ್ ಆಫ್ ಆಗಿತ್ತು. ಇದರಿಂದ ಋತುರಾಜ್ ಮುಜುಗರಕ್ಕೊಳಗಾಗಿದ್ದರು. ಬಳಿಕ ಅಲ್ಲಿದ್ದ ನಿರೂಪಕ, ಸಿಎಸ್ಕೆ ಕ್ಯಾಪ್ಟನ್ ಅವರ ಮೈಕ್ ಅನ್ನು ನೀವು ಹೇಗೆ ಆಫ್ಮಾಡಬಹುದು ಎಂದು ತಮಾಷೆಯಾಗಿ ಮೈಕ್ ಆಪ್ರೇಟರ್ಗಳಿಗೆ ಪ್ರಶ್ನಿಸಿದ್ದರು. ಇದಕ್ಕೆ ಕೂಡಲೇ ಉತ್ತರಿಸಿದ್ದ ಋತುರಾಜ್ ಬಹುಶಃ ಯಾರೋ RCBಗರೇ ಮೈಕ್ ಆಫ್ ಮಾಡಿರಬಹುದು ಎಂದು ಟ್ರೋಲ್ ಮಾಡಿದ್ದರು.
ಇದಕ್ಕೆ RCB ಕೂಡ ಸರಿಯಾಗಿ ತಿರುಗೇಟು ನೀಡಿದೆ. ನಿನ್ನೆ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆದಿತ್ತು. ಇದರಲ್ಲಿ ವಿದರ್ಭ ಮತ್ತು ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿದರ್ಭ ನೀಡಿದ್ದ 380 ರನ್ಗಳ ಗುರಿಯನ್ನು ಬೆನ್ನತ್ತಿದ ಮಹಾರಾಷ್ಟ್ರ 311 ರನ್ಗಳಿಸಲಷ್ಟೇ ಶಕ್ತವಾಗಿ 69 ರನ್ಗಳಿಂದ ಸೋಲನುಭವಿಸಿತು. ಆದ್ರೆ ಈ ಪಂದ್ಯದಲ್ಲಿ RCB ಆಟಗಾರ ಡೈವ್ ಕ್ಯಾಚ್ ಹಿಡಿಯುವ ಮೂಲಕ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ ಪೆವಿಲಿಯನ್ ದಾರಿ ತೋರಿಸಿದರು.
‘It is someone from RCB’ 😍
— Royal Challengers Bengaluru (@RCBTweets) January 16, 2025
Jitesh doing what he does best! 👏#PlayBold #VijayHazareTrophy #ನಮ್ಮRCB pic.twitter.com/0E7z282mlN
ಆರಂಭಿಕರಾಗಿ ಕಣಕ್ಕಿಳಿದಿದ್ದ ಋತುರಾಜ್, ದರ್ಶನ್ ನಲ್ಕಂಡೆ ಎಸೆದ 3ನೇ ಓವರ್ನ 3ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಲು ಯತ್ನಿಸಿದ್ದಾರೆ. ಈ ವೇಳೆ ಕೀಪಿಂಗ್ ಮಾಡುತ್ತಿದ್ದ RCBಯ ಹೊಸ ಪ್ಲೇಯರ್ ಜಿತೇಶ್ ಶರ್ಮಾ ಸೂಪರ್ ಮ್ಯಾನ್ನಂತೆ ಡೈವ್ ಮೂಲಕ ಕ್ಯಾಚ್ ಪಡೆದು ಋತುರಾಜ್ಗೆ ಶಾಕ್ ನೀಡಿದ್ದಾರೆ. ಇದರ ಬೆನ್ನಲ್ಲೆ RCB ತನ್ನ ಎಕ್ಸ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡು ಅವರು ಕೂಡ RCBಯ ಯಾರೋ ಒಬ್ಬರು ('It is someone from RCB') ಎಂದು ತಿರುಗೇಟು ನೀಡಿದೆ. ಇದರ ವಿಡಿಯೋ ಕೂಡ ಭಾರೀ ವೈರಲ್ ಆಗಿದೆ.
ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್
ವಿದರ್ಭ ಪ್ರತಿನಿಧಿಸುತ್ತಿರುವ RCB ಬ್ಯಾಟರ್ ಜಿತೇಶ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಬಿರುಸಿನ ಬ್ಯಾಟಿಂಗ್ ಮೂಲಕ 33 ಎಸೆತಗಳಲ್ಲಿ 51 ರನ್ ಚಚ್ಚಿದ್ದಾರೆ. ಇದರಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಕೂಡ ಸೇರಿದ್ದವು. ಉಳಿದಂತೆ ಕನ್ನಡಿಗ ಕರುಣ್ ನಾಯರ್ ಕೂಡ್ ಭರ್ಜರಿ ಫಾರ್ಮ್ನಲ್ಲಿದ್ದು ಈ ಪಂದ್ಯದಲ್ಲಿ ಅಜೇಯವಾಗಿ 88 ರನ್ ಚಚ್ಚಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: RCBಗರ ವಿರುದ್ಧ CSK ನಾಯಕ ರುತುರಾಜ್ ಗಾಯಕ್ವಾಡ್ ದೊಡ್ಡ ಆರೋಪ: ಅಭಿಮಾನಿಗಳು ಕೆಂಡಾಮಂಡಲ!